ನಾಮ್ ಪೆನ್: ಮದ್ದುಗುಂಡುಗಳು ಸ್ಪೋಟಗೊಂಡ ಪರಿಣಾಮ 20 ಸೈನಿಕರು ಹುತಾತ್ಮರಾಗಿರುವ ಘಟನೆ ಕಾಂಬೋಡಿಯಾ (Cambodia) ದೇಶದ ಪಶ್ಚಿಮ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ನಡೆದಿದೆ.
ಈ ಕುರಿತು ಪ್ರಧಾನಿ ಹನ್ ಮಾನೆಟ್ (Hun Manet) ಹೇಳಿದ್ದಾರೆ. ಕಂಪಾಂಗ್ ಸ್ಪ್ಯೂ ಪ್ರಾಂತ್ಯದ 3ನೇ ಮಿಲಿಟರಿ ಗ್ರಾಮದಲ್ಲಿ ಸ್ಫೋಟದ ಸುದ್ದಿಯನ್ನು ಕೇಳಿ ಆಘಾತವಾಯಿತು. ಘಟನೆಯಲ್ಲಿ 20 ಸೈನಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ, ಹಲವು ಸೈನಿಕರು ಗಾಯಗೊಂಡಿದ್ದಾರೆ. ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳು ಸೈನಿಕರು ಶೀಘ್ರವೇ ಗುಣಮುಖರಾಗಲಿ ಎಂದು ಹನ್ ಮಾನೆಟ್ ಪ್ರಾರ್ಥಿಸಿದ್ದಾರೆ.
ಮೃತ ಸೈನಿಕರ ಕುಟುಂಬಕ್ಕೆ ತಲಾ 20 ಮಿಲಿಯನ್ ಯುಎಸ್ ಡಾಲರ್ ಮತ್ತು ಘಟನೆಯಲ್ಲಿ ಗಾಯಗೊಂಡ ಸೈನಿಕರಿಗೆ ತಲಾ 20 ಮಿಲಿಯನ್ ರಿಯೆಲ್ ಆರ್ಥಿಕ ನೆರವು ನೀಡುವುದಾಗಿ ಘೋಷಿಸಲಾಗಿದೆ.