ಕೊರೊನಾ ಮೂರನೇ ಅಲೆ : ಬೆಂಗಳೂರಿನಲ್ಲಿ ಹೈ ಅಲರ್ಟ್..!
ಬೆಂಗಳೂರು : ಕೇರಳದಲ್ಲಿ ಕೊರೊನಾ ಆವಳಿ ಹೆಚ್ಚಾಗಿದ್ದು, ಮೂರನೇ ಅಲೆ ಕಾಣಿಸಿಕೊಂಡಿದ್ಯಾ ಅನ್ನೋ ಚರ್ಚೆಗಳು ನಡೆಯುತ್ತಿರುವಾಗಲೇ ರಾಜ್ಯದಲ್ಲೂ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗ ತೊಡಗಿದೆ. ರಾಜ್ಯದಲ್ಲಿ ನಿಧಾನವಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಯ ಎಚ್ಚರಿಕೆಯ ಗಂಟೆ ಎಂದು ಅಂದಾಜಿಸಲಾಗುತ್ತಿದೆ.
ಈ ಹಿನ್ನೆಲೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಮೈಕ್ರೋಕಂಟೈನ್ ಮೆಂಟ್, ನಿಗದಿತ ಗುಂಪುಗಳಿಗೆ ವ್ಯಾಕ್ಸಿನೇಷನ್ ಹೆಚ್ಚಿಸುವ, ಗಡಿ ಭಾಗಗಳಲ್ಲಿಯೂ ಹೆಚ್ಚಿನ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಗರದ ಪೂರ್ವ ವಲಯ, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಹಚ್ಚು ಕೋವಿಡ್ ಕಂಡುಬಂದಿದೆ. ಅಪಾರ್ಟ್ ಮೆಂಟ್ ಹಾಗೂ ಮನೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಇದರಿಂದಾಗಿ ನಗರದ ಪ್ರತೀ ವಲಯಗಳಿಗೂ ಎಚ್ಚರಿಕೆ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಹೊರರಾಜ್ಯದಿಂದ ಪ್ರಯಾಣ ಮಾಡಿರುವ ಹಿನ್ನೆಲೆ, ಪ್ರವಾಸ ಹೋಗಿ ಬಂದಿರೋದು ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ.