ಬೆಂಗಳೂರು: ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮುಂದಿನ ದಿನಗಳಲ್ಲಿ ಸುಲಿಗೆಯನ್ನು ತಪ್ಪಿಸಲು ಸರ್ಕಾರ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಪ್ರಕಾರವೇ ಶುಲ್ಕವನ್ನು ಪಡೆದುಕೊಳ್ಳಬೇಕು. ಒಂದು ವೇಳೆ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆದರೆ ಅಂತಹ ಆಸ್ಪತ್ರೆಗಳ ಲೈಸೆನ್ಸ್ ರದ್ದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ಸರ್ಕಾರಕ್ಕಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಕುರಿತ ವಿವರ ಕೆಳಗಿನಂತಿದೆ.
1. ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ…
ಜನರಲ್ ವಾರ್ಡ್-5200
ಎಚ್‌ಡಿಯು -7000
ವೆಂಟಿಲೇಟರ್ ಇಲ್ಲದ ಐಸೊಲೇಷನ್-8500
ಐಸಿಯು ಮತ್ತು ವೆಂಟಿಲೇಟರ್-10,000
2. ನೇರವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿದರೆ…
ಜನರಲ್ ವಾರ್ಡ್ -10,000
ಹೆಚ್‌ಡಿಯು-12,000
ವೆಂಟಿಲೇಟರ್ ಇಲ್ಲದ ಐಸೊಲೇಷನ್-15,000
ಐಸಿಯು ಮತ್ತು ವೆಂಟಿಲೇಟರ್ -25,000ರೂ.
ಕೊರೊನಾ ಚಿಕಿತ್ಸೆಗೆ ಷರತ್ತುಗಳೇನು..?
1.ಶೇ.50ರಷ್ಟು ಬೆಡ್‌ಗಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು.
2. ಇನ್ಸೂರೆನ್ಸ್ ಇದ್ದರೆ ಅಂತಹ ರೋಗಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ಹೆಲ್ತ್ ಕಾರ್ಡ್ ಇಲ್ಲದಿದ್ದರೂ ರೋಗಿಗಳು ಚಿಕಿತ್ಸೆ ಪಡೆಯಬಹುದಾಗಿದೆ.
3. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವ ಬಿಪಿಎಲ್ ಕಾರ್ಡುದಾರರಿಗೆ ಒಂದೇ ದರ.
4.ನಗದು ಪಾವತಿ, ವಿಮೆ ರಹಿತ ಚಿಕಿತ್ಸೆ ಪಡೆಯುವರಿಗೆ ಪ್ರತ್ಯೇಕ ದರ ಆನ್ವಯ.
ರಾಜ್ಯ ಆರೋಗ್ಯ ಇಲಾಖೆಯ ರಚಿಸಿರುವ ಟಾಸ್ಕ್ ಫೋರ್ಸ್ ಈ ದರವನ್ನು ನಿಗದಿ ಮಾಡಿದ್ದು, ಮಹಾರಾಷ್ಟ್ರ, ಗುಜರಾತ್, ದೆಹಲಿ, ತೆಲಂಗಾಣದಲ್ಲಿರುವAತೆ ಇಲ್ಲಿಯೂ ಕೂಡ ದರವನ್ನು ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಶೇ.50ರಷ್ಟು ಬೆಡ್‌ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಕೊರೊನಾ ಚಿಕಿತ್ಸೆ ನೀಡಲು ಮುಂದಾಗಿರುವ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಆಸ್ಪತ್ರೆಗಳಲ್ಲಿ
ಕೊರೊನಾ ರೋಗಿಗಳಿಗೆ ಹೆಚ್ಚಿನ ದರ ಪಡೆಯಲಾಗುತ್ತದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು.
ಈ ಸಮಿತಿಯು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಅಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲಿ ನಿಗದಿಪಡಿಸಿರುವ ದರವನ್ನು ಅಧ್ಯಯನ ಮಾಡಿತ್ತು.
ಕೊರೊನಾ ರೋಗಿಗಳಿಗೆ ದೇಶಾದ್ಯಂತ ಒಂದೇ ದರ ನಿಗದಿಪಡಿಸಬೇಕೆಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದ್ದನ್ನು ಸ್ಮರಿಸಬಹುದಾಗಿದೆ.