ಬೆಂಗಳೂರು, ಮೇ 21 : ರಾಜ್ಯದಲ್ಲಿ ಕೊರೊನಾಸುರ ಮತ್ತೆ ಅಬ್ಬರಿಸಿದ್ದು, ಇಂದು ಒಂದೇ ದಿನ 116 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ರಾಜ್ಯದ 116 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ.
ಇಂದು 14 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 570ಕ್ಕೆ ಏರಿದೆ. ಇನ್ನು ರಾಜ್ಯದಲ್ಲಿ ಈ ತನಕ 41 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದಂತಾಗಿದೆ.
ಇಂದು ಉಡುಪಿ ಜಿಲ್ಲೆಯಲ್ಲಿ 25, ಮಂಡ್ಯದಲ್ಲಿ 15, ಬೆಂಗಳೂರು ನಗರದಲ್ಲಿ 07, ಹಾಸನದಲ್ಲಿ 13, ದಕ್ಷಿಣ ಕನ್ನಡದಲ್ಲಿ 06, ಬಳ್ಳಾರಿಯಲ್ಲಿ 11, ಉತ್ತರ ಕನ್ನಡದಲ್ಲಿ 09, ಚಿಕ್ಕಬಳ್ಳಾಪುರದಲ್ಲಿ 02, ದಾವಣಗೆರೆಯಲ್ಲಿ 03, ಗದಗದಲ್ಲಿ 02, ಬೆಳಗಾವಿಯಲ್ಲಿ 08, ಶಿವಮೊಗ್ಗದಲ್ಲಿ 06, ವಿಜಯಪುರದಲ್ಲಿ 01, ಮೈಸೂರಲ್ಲಿ 01, ಧಾರವಾಡದಲ್ಲಿ 05, ತುಮಕೂರಲ್ಲಿ 01 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.








