ADVERTISEMENT
Tuesday, June 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊರೊನಾ ಅಪ್ ಡೇಟ್… ಜ.31ರ ವರೆಗೂ 144 ಸೆಕ್ಷನ್ ಓದಿ ದಿನದ TOP 10 NEWS

Mahesh M Dhandu by Mahesh M Dhandu
January 17, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೊರೊನಾ ಅಪ್ ಡೇಟ್.. ಚೆನ್ನೈಗೆ ಧೋನಿ ಗುಡ್ ಬೈ.. ಓದಿ ದಿನದ TOP 10 NEWS

ಭಾರತದಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವೆರೆದಿದ್ದು,  ಕಳೆದ 24 ಗಂಟೆಯಲ್ಲಿ 2,58,089 ಸೋಂಕಿತರು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 385 ಮಂದಿ ಹೆಮ್ಮಾರಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ನಿನ್ನೆ ದೇಶದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಒಟ್ಟು 16,56,341 ಸಕ್ರಿಯ ಪ್ರಕರಣಗಳು ಇವೆ.

Related posts

ವೈಭವ್‌ ಸೂರ್ಯವಂಶಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬಗು.. ವಿಶ್ವ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದಾನೆ ಬಾಲ ಸೂರ್ಯ..!

June 22, 2026
rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

June 22, 2026

ಇವತ್ತು ಬೆಂಗಳೂರು ನಗರದಲ್ಲಿ 18,622 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.  ಇವತ್ತು ಬೊಮ್ಮನಹಳ್ಳಿ ವಲಯದಲ್ಲಿ 1,759, ದಾಸರಹಳ್ಳಿ 467, ಬೆಂಗಳೂರು ಪೂರ್ವ 3,046 , ಮಹದೇವಪುರ 2,733, ಆರ್ ಆರ್‌ನಗರ 1,269, ದಕ್ಷಿಣ ವಲಯ 2,538, ಪಶ್ಚಿಮ 1,891, ಯಲಹಂಕ 1,669, ಅನೇಕಲ್ 819, ಬೆಂಗಳೂರು ಹೊರವಲಯ 1,446 ಸೇರಿ ಒಟ್ಟು 18,622 ಪಾಸಿಟಿವ್ ದೃಢಪಟ್ಟಿವೆ.

ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಜಾರಿ ಮಾಡಲಾಗಿರುವ 144 ಸೆಕ್ಷನ್​ನ ಜನವರಿ 31ರವರೆಗೂ ವಿಸ್ತರಿಸಲಾಗಿದೆ. ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಿಸಿ ನಗರ ಪೊಲೀಸ್ ಆಯುಕ್ತರಾದ ಕಮಲ್​ ಪಂತ್​ ಆದೇಶ ಹೊರಡಿಸಿದ್ದಾರೆ. ಜೊತೆಗೆ ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮದ ಎಚ್ಚರಿಕೆಯೂ ನೀಡಿದ್ದಾರೆ.  ಇದಲ್ಲದೆ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯದ ಕರ್ಫ್ಯೂ ಕೂಡ ವಿಸ್ತರಿಸಲಾಗಿದೆ.

ಕರೋನಾ ಸಾಂಕ್ರಾಮಿಕ ಕಾಲದಲ್ಲಿ  ಬಡವರು ಆಹಾರಕ್ಕಾಗಿ, ಬಟ್ಟೆಗಾಗಿ ಸಂಕಷ್ಟ ಪಡುತ್ತಿದ್ದಾರೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಬಡವ ಶ್ರೀಮಂತರ ಅಂತರ ಕರೋನಾ ಕಾಲದಲ್ಲಿ ಏರಿಕೆಯಾಗಿದೆ. ಎನ್‌ಜಿಒ ಆಕ್ಸ್‌ಫ್ಯಾಮ್ ಇಂಡಿಯಾದ ವರದಿಯ ಪ್ರಕಾರ, 2021 ರಲ್ಲಿ ಭಾರತದಲ್ಲಿ ಶೇಕಡಾ 84 ರಷ್ಟು ಕುಟುಂಬಗಳ ಆದಾಯವು ಕುಸಿದಿದೆ. ಆದರೆ  ಭಾರತೀಯ ಬಿಲಿಯನೇರ್‌ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿದೆ.

Weekend Curfew Saaksha tv

ದೇಶದಲ್ಲಿ 15-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಪರಿಚಯಿಸಿದ ನಂತರ, ಈಗ 12-14 ವರ್ಷದ ಮಕ್ಕಳಿಗೂ ಕರೋನಾ ಲಸಿಕೆ ನೀಡಲಾಗುವುದು  ಎಂದು ಕೋವಿಡ್-19  ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ  ಮುಖ್ಯಸ್ಥ ಡಾ. ಎನ್‌ಕೆ ಅರೋರಾ ಹೇಳಿದ್ದಾರೆ. 12 ರಿಂದ 14 ವರ್ಷದೊಳಗಿನ  ಈ ಮಕ್ಕಳಿಗೆ ಮಾರ್ಚ್‌ ತಿಂಗಳಿನಿಂದ  ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ಸ್ಯಾಂಡಲ್ವುಡ್ ನಲ್ಲಿ ಮರಿ ಟೈಗರ್ ಎಂದೆ ಗುರುತಿಸಿಕೊಂಡಿರುವ  ವಿನೋದ್ ಪ್ರಭಾಕರ್ ಹೊಸದೊಂದು ಸಾಹಸಕ್ಕೆ ಕೈಹಾಕಿದ್ದಾರೆ.  ನಟನೆಯ ಜೊತೆ ನಿರ್ಮಾಣದ ಸಾಹಸಕ್ಕೂ ಕೈ ಹಾಕಿರುವ ವಿನೋದ್ “ಟೈಗರ್ ಟಾಕಿಸ್” ಎನ್ನುವ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ.  ಈ ಸಂಸ್ಥೆಗೆ ಪತ್ನಿ ನಿಶಾ ಪ್ರಭಾಕರ್ ನಿರ್ಮಾಪಕಿಯಾಗಿದ್ದಾರೆ.

ನಟ ಕಮಲ್ ಹಾಸನ್ ನಡೆಸಿಕೊಳ್ಳುವ ತಮಿಳಿನ ಬಿಗ್ ಬಾಸ್ 5ನೇ ಸೀಜನ್ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಭಾರಿಯ ವಿನ್ನರ್ ಆಗಿ ರಾಜು ಜಯಮೋಹನ್ ಹೊರಹೊಮ್ಮಿದ್ದಾರೆ.

ವಿಶ್ವ ಮಿಸೆಸ್ ಇಂಡಿಯಾ ಸ್ಪರ್ದೆಯಲ್ಲಿ ಭಾರತೀಯ ಸ್ಪರ್ಧಿ ನವದೀಪ್ ಕೌರ್ ಅವರು ಅತ್ಯುತ್ತಮ ರಾಷ್ಟ್ರೀಯ ಧಿರಿಸು ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಒಡಿಶಾ ಮೂಲದ ನವದೀಪ್ ಕೌರ್  ಈಗಾಗಲೇ ಒಂದು ಭಾರಿ ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.

Corona UPDATE Read Section 144 TOP 10 NEWS until 31st January  saaksha tv

ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರಂತೆ. ಅವರ ಸ್ಥಾನಕ್ಕೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಚೆನ್ನೈನ ಹಿರಿಯ ಆಟಗಾರ ರವೀಂದ್ರ ಜಡೇಜಾ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬರಲಿದೆಯಂತೆ. ತಮ್ಮ ಬಳಿಕ ಜಡೇಜಾ ಸಿಎಸ್ ಕೆ ತಂಡದ ನಾಯಕರಾಗಲು ಸೂಕ್ತ ಎಂದು ಎಂಎಸ್ ಧೋನಿ ಫ್ರಾಂಚೈಸಿಗೆ ತಿಳಿಸಿದ್ದಾರಂತೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟ ಮೇಲೆ ಮುಂದಿನ ಕ್ಯಾಪ್ಟನ್ ಯಾರು ಅನ್ನುವ ಚರ್ಚೆ ಜೋರಾಗಿದೆ. ಏಕದಿನ ಮತ್ತು ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿದ್ದಾರೆ. ಆದರೆ ಟೆಸ್ಟ್ ತಂಡದ ನಾಯಕ ಯಾರು ಅನ್ನುವ ಬಗ್ಗೆ ಮಾತ್ರ ಹೆಚ್ಚು ಕುತೂಹಲವಿದೆ. ರೋಹಿತ್ ಮತ್ತು ರಾಹುಲ್ ಹಾಟ್ ಫೆವರೀಟ್ ಆದರೂ ರಿಷಬ್ ಪಂತ್ ಅಚ್ಚರಿ ಆಯ್ಕೆ ಆದರೂ ಹುಬ್ಬೇರಿಸಬೇಕಿಲ್ಲ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್, ಸುನಿಲ್ ಗವಾಸ್ಕರ್ ಪಂತ್ ಪರ ಬ್ಯಾಟ್ ಬೀಸಿದ್ದಾರೆ.

Tags: #Saaksha TVCorona VirusIPLMS DhoniPunjab
ShareTweetSendShare
Join us on:

Related Posts

ವೈಭವ್‌ ಸೂರ್ಯವಂಶಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬಗು.. ವಿಶ್ವ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದಾನೆ ಬಾಲ ಸೂರ್ಯ..!

by admin
June 22, 2026
0

ಕವಿಯ ಕಲ್ಪನೆಗೂ ನಿಲುಕದ ಆಟದ ಸೊಬ..! ಎಂಥವರನ್ನು ನಿಬ್ಬೆರಾಗಿಸುವಂತಹ ಸ್ಫೋಟಕ ಬ್ಯಾಟಿಂಗ್..!ಮೈದಾನದ ಮೂಲೆಮೂಲೆಗಳಲ್ಲಿ ಪಸರಿಸುತ್ತದೆ ಕ್ರಿಕೆಟ್ ಆಟದ ಅಸಲಿ ರಂಗು..! ಹೊಡಿಬಡಿ ಆಟಕ್ಕೂ ಜೈ, ಕೆಣಕಿದ್ರೆ ಹೊಡೆದಾಟಕ್ಕೂ...

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

by admin
June 22, 2026
0

56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

by Shwetha
June 22, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram