Corona Virus
ನವದೆಹಲಿ : ಇಂದು ದೇಶಾದ್ಯಂತ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಬಲಿಯಾದವರ ಸಂಖ್ಯೆಯಲ್ಲಿ ಮತ್ತೆ ಇಳಿಮುಖವಾಗಿದೆ. ಸೋಂಕು ಪ್ರಕರಣಗಳು 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಸುಮಾರು 75 ಲಕ್ಷ ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಎಂಟನೇ ಬಾರಿ 50,000ಕ್ಕಿಂತ (46,963) ಕಡಿಮೆ ಪಾಸಿಟಿವ್ ಪ್ರಕರಣ ವರದಿಯಾಗಿದೆ. ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳು 82 ಲಕ್ಷ ಸನಿಹಕ್ಕೆ ಬಂದು ನಿಂತಿದೆ. ಸಾವಿನ ಸಂಖ್ಯೆ 1.22 ಲಕ್ಷ ದಾಟಿದೆ. ನಿನ್ನೆ 46,963 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಸತತ 14ನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್ಗಳು ವರದಿಯಾಗಿದೆ. ಅಲ್ಲದೇ ಸತತ 16ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ.85 ದಿನಗಳ ತರುವಾಯ ಇದು 6 ಲಕ್ಷಕ್ಕಿಂತ ಕಡಿಮೆ ಇಳಿದಿದೆ.
ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಇಳಿಕೆ ಕಂಡು ಬಂದಿದ್ದು, 24 ಗಂಟೆಗಳಲ್ಲಿ ದೇಶದಲ್ಲಿ 470 ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 82 ಲಕ್ಷ ಗಡಿ ತಲುಪಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 74.91 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.91.54ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.49ರಷ್ಟು ತಗ್ಗಿದ್ದು, ದೇಶದಲ್ಲಿ ಮೃತರ ಸಂಖ್ಯೆ 1,22,111 ದಾಟಿದೆ. 81,84,682ರಷ್ಟಿದ್ದು, ನಾಳೆ ವೇಳೆಗೆ 82 ಲಕ್ಷ ದಾಟುವ ಸಾಧ್ಯತೆ ಇದೆ. ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ರಾಜಧಾನಿ ನವದೆಹಲಿ ಮತ್ತು ಕೇರಳದಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್-19 ವೈರಸ್ ಸೋಂಕುಗಳು ಮತ್ತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ.
Corona Virus
ಕಾಂಗ್ರೆಸ್ ಸಿಎಂ ಅಭ್ಯರ್ಥಿ ರೇಸ್ ಗೆ ಮತ್ತೊಬ್ಬ ನಾಯಕ ಎಂಟ್ರಿ..!
ಈರುಳ್ಳಿ ಬಳಿಕ, ಗಗನಕ್ಕೇರಿದ ಆಲೂಗಡ್ಡೆ ಬೆಲೆ..! ಗ್ರಾಹಕರಿಗೆ ಗಾಯದ ಮೇಲೆ ಬರೆ..
ಉತ್ತರ ಪ್ರದೇಶ – ಇಲ್ಲಿ ಹುಡುಗರು ಸಹ ಸಾರ್ವಜನಿಕವಾಗಿ ಹಾಫ್ ಪ್ಯಾಂಟ್ ಧರಿಸುವಂತಿಲ್ಲ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel