ಕೊರೊನಾ  ಸೋಂಕಿತರನ್ನು ಪತ್ತೆ ಹಚ್ಚುವ ಶ್ವಾನಗಳು

1 min read
Coronavirus detection dogs Saaksha Tv

ಕೊರೊನಾ  ಸೋಂಕಿತರನ್ನು ಪತ್ತೆ ಹಚ್ಚುವ ಶ್ವಾನಗಳು Saaksha tv

ಅಮೇರಿಕ: ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಯಾವುದಾದರೂ ಮನೆ ಕಳ್ಳತನವಾದರೆ, ಕಳ್ಳರನ್ನು ಪತ್ತೆಹಚ್ಚಲು ಪೊಲೀಸರು ಶ್ವಾನಗಳನ್ನು ಬಳಸುತ್ತಾರೆ. ಆದರೆ ಈ ಶ್ವಾನಗಳನ್ನು ಅಮೇರಿಕಾದಲ್ಲಿ ಕೊರೊನಾ ಪತ್ತೆಹಚ್ಚಲು ಬಳಸಲಾಗುತ್ತಿದೆ. ಯುಎಸ್‌ನ ಒಂದು ಜಿಲ್ಲೆಯ ಶಾಲೆಗಳಲ್ಲಿ ಶ್ವಾನಗಳನ್ನು ಸಾರ್ವಜನಿಕರ ಆರೋಗ್ಯ ರಕ್ಷಕರು ಎಂದು ಕರೆಯಲಾಗುತ್ತಿದೆ

ಸುಮಾರು ಎರಡು ವರ್ಷಗಳಿಂದ ಇಡೀ ಜಗತ್ತಿಗೆ ದೊಡ್ಡ ತಲೆ ನೋವಾಗಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ನಾನಾ ದೇಶಗಳು ಮಾಡುತ್ತಿರುವ ಪ್ರಯತ್ನಗಳು ಒಂದೆರಡಲ್ಲ. ಕೋವಿಡ್ ಸಂಭಾವ್ಯ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಸಾಚುಸೆಟ್ಸ್ ನಗರದ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ನಾಯಿಗಳಾದ ಹಂಟಾ ಮತ್ತು ಡ್ಯೂಕ್‌ರನ್ನು ಶಾಲೆಯ ಸಭಾಂಗಣಗಳಲ್ಲಿ ತಿರುಗಾಡಲು ಮತ್ತು ವಿದ್ಯಾರ್ಥಿಗಳನ್ನು ಮೂಸಿ ನೋಡಲು ನೇಮಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Corona virus detection dogs in America Saaksha tv

ಕೋವಿಡ್ ಪಾಸಿಟಿವ್ ಇರುವ ರೋಗಿಯು ಧರಿಸಿದ್ದ ಮಾಸ್ಕ್ಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ಬಳಸಲಾಯಿತು. ಮಾಸ್ಕ್ ಅನ್ನು ಅನೇಕ ತುಂಡುಗಳಾಗಿ ಕತ್ತರಿಸಿ ಅದನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ನಾಯಿಗಳಿಗೆ ಆ ವಾಸನೆ ಕಂಡು ಹಿಡಿಯಲು ಇರಿಸಲಾಗುತ್ತದೆ. ಈ ವಾಸನೆಯನ್ನು ಆಧರಿಸಿ ನಾಯಿ ಸೋಂಕು ಇದ್ದ ವ್ಯಕ್ತಿಯನ್ನು ಪತ್ತೆ ಹಚ್ಚುತ್ತದೆ.  ಸೋಂಕು ಪ್ರಕರಣಗಳ ಹರಡುವಿಕೆಯನ್ನು ಈ ಎರಡು ನಾಯಿಗಳು ತಡೆಗಟ್ಟಲು ಸಹಾಯ ಮಾಡುತ್ತಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd