ಜೂನ್ 14 ರ ಬಳಿಕ ಅನ್ ಲಾಕ್ ಜಿಲ್ಲೆಗಳಲ್ಲಿ ಯಾವುದಕ್ಕೆ ಅನುಮತಿ..?

1 min read

ಜೂನ್ 14 ರ ಬಳಿಕ ಅನ್ ಲಾಕ್ ಜಿಲ್ಲೆಗಳಲ್ಲಿ ಯಾವುದಕ್ಕೆ ಅನುಮತಿ..?

ಬೆಂಗಳೂರು : ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜೂನ್ 14 ರ ಬಳಿಕ ಮತ್ತೆ ಲಾಕ್ ಡೌನ್ ಮುಂದುವರಿಸಲಾಗಿದೆ. ಕೊರೊನಾ ಇಳಿಮುಖವಾಗಿರುವ 19 ಜಿಲ್ಲೆಯಗಳಲ್ಲಿ ಸೆಮಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹಾಗಾದ್ರೇ.. ಸೆಮಿ ಲಾಕ್ ಡೌನ್ ಜಿಲ್ಲೆಗಳಲ್ಲಿ ಯಾವುದಕ್ಕೆ ಅನುಮತಿ…? ಯಾವುದಕ್ಕೆ ವಿನಾಯಿತಿ ನೀಡಲಾಗಿದೆ..? ಮುಂದೆ ಓದಿ..

ಸೆಮಿಲಾಕ್ ಡೌನ್ ಜಿಲ್ಲೆಗಳಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಇದ್ದಂತ ಅಗತ್ಯವಸ್ತು ಖರೀದಿ ಸಮಯವನ್ನು ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ಆನಂತರ ಲಾಕ್ ಡೌನ್ ಮುಂದುವರೆಯಲಿದೆ.

ಬಸ್ ಇರಲ್ಲ.. ಆಟೋ, ಟ್ಯಾಕ್ಸಿ ಸಂಚಾರಕ್ಕೆ ಷರತ್ತುಬದ್ಧ ಅವಕಾಶ
ಸೆಮಿ ಲಾಕ್ ಡೌನ್ ಜಿಲ್ಲೆಗಳಲ್ಲಿ ಸರ್ಕಾರ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ. ಆದ್ರೆ ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಿದೆ. ಕೇವಲ ಇಬ್ಬರು ಪ್ರಯಾಣಿಕರನ್ನು ಕೂರಿಸಿಕೊಂಡು ಆಟೋ, ಟ್ಯಾಕ್ಸಿ ಸಂಚಾರ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದೆ.

 lockdown

ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯ ಕರ್ಪ್ಯೂ ಜಾರಿ

ಇದು ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗಲಿದೆ. ರಾಜ್ಯದಾದ್ಯಂತ ರಾತ್ರಿ ಹಾಗೂ ವಾರಾಂತ್ಯ ಕಪ್ರ್ಯೂ ಮುಂದುವರೆಯಲಿದೆ. ರಾತ್ರಿ ಕಪ್ರ್ಯೂ ಸಂಜೆ 7 ಗಂಟೆಯಿಂದ ಆರಂಭಗೊಂಡು, ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಇದಲ್ಲದೇ ವಾರಾಂತ್ಯ ಕಪ್ರ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಆರಂಭಗೊಂಡು, ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.

ಮದ್ಯ ಖರೀದಿಗೆ ಅವಕಾಶ
ಅನ್ ಲಾಕ್ ಘೋಷಣೆ ಮಾಡಿರುವಂತ ಜಿಲ್ಲೆಗಳಲ್ಲಿ ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಿದಂತೆ, ಮದ್ಯ ಖರೀದಿಗೂ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಿದೆ.

ಹೋಟೆಲ್ ಗಳು ಓಪನ್ ಪಾರ್ಸಲ್ ಗೆ ಅವಕಾಶ
ಸೆಮಿ ಲಾಕ್ ಡೌನ್ ಜಿಲ್ಲೆಗಳಲ್ಲಿ ಮಧ್ಯಾಹ್ನ 02 ಗಂಟೆಯವರೆಗೂ ಹೋಟೆಲ್ ಗಳು ಓಪನ್ ಇರುತ್ತವೆ. ಆದ್ರೆ ಪಾರ್ಸಲ್ ಗೆ ಮಾತ್ರ ಅವಕಾಶ ಇರುತ್ತೆ.

ಸೆಮಿ ಲಾಕ್ ಡೌನ್ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗೆ ಸಂಪೂರ್ಣ ಅವಕಾಶ ನೀಡಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಂಗಡಿಗಳು ಅಂದ್ರೆ ಸಿಮೆಂಟ್, ಕಬ್ಬಿಣದ ಅಂಗಡಿಗಳು ಓಪನ್ ಇರುತ್ತವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd