ಪ್ರಮುಖ ಮೆಟ್ರೋ ನಗರಗಳಲ್ಲಿ ಸತತ 4ನೇ ದಿನವೂ ಪೆಟ್ರೋಲ್ ದರ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಇಂದು ಮತ್ತೆ ಪೆಟ್ರೋಲ್ ಬೆಲೆಯಲ್ಲಿ 12-14 ಪೈಸೆ ಏರಿಕೆಯಾಗಿದೆ. ಚೆನ್ನೈ, ಮುಂಬೈ, ಕೊಲ್ಕತ್ತಾ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ದರ 14 ಪೈಸೆ ಏರಿಕೆಯಾಗಿದೆ. ಅಂದದರೆ ಲೀಟರ್ ಪೆಟ್ರೋಲ್ ಗೆ 88. 49 ರೂಗಳಾಗಿದೆ. ಕೋಲ್ಕತ್ತಾದಲ್ಲಿ ಈ ವರೆಗೂ 82.87 ಪೈಸೆ ಪ್ರತಿ ಲೀಟರ್ ಗೆ ಮಾರಾಟವಾಗುತ್ತಿದ್ದ ಪೆಟ್ರೋಲ್ ದರ 14 ಪೈಸೆ ಹೆಚ್ಚಳದೊಂದಿಗೆ 83.01 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
ಇನ್ನೂ ಮುಂಬೈನಲ್ಲೂ 14 ಪೈಸೆ ಏರಿಕೆಯಾಗುವ ಮೂಲಕ ಪೆಟ್ರೋಲ್ ಬೆಲೆ ಲೀಟರ್ ಗೆ 88.16 ರೂ.ತಲುಪಿದೆ. ಚೆನ್ನೈ ನಲ್ಲಿ ತೈಲ ದರ ಪ್ರತಿ ಲೀಟರ್ ಗೆ 12 ಪೈಸೆಯಷ್ಟು ಏರಿಕೆಯಾಗಿದ್ದು 84.40 ರೂಪಾಯಿಯಿಂದ 84.52 ರೂಪಾಯಿಯಷ್ಟಾಗಿದೆ.