ಬೆಂಗಳೂರು : ಇತಿಹಾಸದ ಸಾಂಕ್ರಾಮಿಕ ರೋಗ ನೋಡಿದ್ರೆ 2 ಅಲೆ ತೀವ್ರವಾಗಿ ಇರುತ್ತೆ. ಬಳಿಕ 3-4 ನೇ ಅಲೆ ತೀವ್ರತೆ ಕಡಿಮೆ ಇರುತ್ತೆ. ಹಾಗಾಂತ ಯಾರು ನಿರ್ಲಕ್ಷ್ಯವಹಿಸಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. dr k sudakar saaksha tv
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಡ್ರೈವ್ ಇವತ್ತು ಕೂಡಾ ಮಾಡ್ತಿದ್ದೇವೆ. 7 ಕೋಟಿ 80 ಲಕ್ಷ ಡೋಸ್ ಲಸಿಕೆ ಕೊಡಲಾಗಿದೆ. 68% ಎರಡು ಡೋಸ್ ಪಡೆದವರ ಸಂಖ್ಯೆ ಆಗಿದೆ. ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಕರ್ನಾಟಕ ರಾಜ್ಯದ ಕ್ರಮ ಸರಿಯಾಗಿದೆ ಅಂತ ಕೇಂದ್ರ ಹೇಳಿದೆ. ಬೇರೆ ರಾಜ್ಯ ಕೂಡಾ ಇದನ್ನ ಪಾಲನೆ ಮಾಡಿ ಅಂತ ಹೇಳಿದೆ ಹೊಸ ತಳಿ ಆಗಿರೋದ್ರೀಂದ ಮೃದು ಲಕ್ಷಣ ಕಾಣ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ನಾವು ತಗೋಬೇಕು ಎಂದು ತಿಳಿಸಿದರು.
ಇನ್ನು ಕೊರೊನಾ ಎಂಡಮಿಕ್ ಆರಂಭ ಆಗಿದ್ದು, ಇದನ್ನ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಜನ ಉದಾಸೀನ ಆಗಬಾರದು. ಸಾಂಕ್ರಾಮಿಕ ರೋಗ 3-4 ಅಲೆ ತೀವ್ರತೆ ಕಡಿಮೆ ಇರುತ್ತೆ ಎಂದು ತಿಳಿಸಿದ್ದಾರೆ.
ಇನ್ನು ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿಗೆ ತರುವ ವಿಚಾರವಾಗಿ ಮಾತನಾಡಿದ ಸುಧಾಕರ್, ಈ ಬಗ್ಗೆ ಸಿಎಂ ಚರ್ಚೆ ಮಾಡ್ತಿದ್ದಾರೆ. ಆದಷ್ಟು ಬೇಗ ಸಿಎಂ ಈ ಬಗ್ಗೆ ನಿರ್ಧಾರ ಮಾಡ್ತಾರೆ. ನಾಳೆಯ ಸಭೆಯಲ್ಲೂ ಟಫ್ ರೂಲ್ಸ್ ಬಗ್ಗೆ ಚರ್ಚೆ ಆಗುತ್ತೆ
ಇತಿಹಾಸದ ಸಾಂಕ್ರಾಮಿಕ ರೋಗ ನೋಡಿದ್ರೆ 2 ಅಲೆ ತೀವ್ರವಾಗಿ ಇರುತ್ತೆ. ಬಳಿಕ 3-4 ನೇ ಅಲೆ ತೀವ್ರತೆ ಕಡಿಮೆ ಇರುತ್ತೆ. ಹಾಗಾಂತ ಯಾರು ನಿರ್ಲಕ್ಷ್ಯವಹಿಸಬಾರದು. ಮಾಸ್ಕ್ ಹಾಕಬೇಕು, ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಎಂಡ್ ಆಗೋ ಕೊನೆ ದಿನಗಳು ಕಂಡು ಬರುತ್ತಿವೆ. ಆದ್ರೆ ಹಾಗಂತ ಯಾರು ಉದಾಸೀನ ಮಾಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪುನರುಚ್ಚರಿಸಿದರು.









