ADVERTISEMENT
Thursday, November 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರೋನಾ ತಂದಿಟ್ಟ ಮನಮಿಡಿಯುವ ಕಥೆ ವ್ಯಥೆ

saaksha tv by saaksha tv
March 15, 2020
in International, Newsbeat
corona
Share on FacebookShare on TwitterShare on WhatsappShare on Telegram

ಕೊರೋನಾ ಎಂಬ ಮಹಾ ಮಾರಿ ಸೃಷ್ಟಿಸಿದ ಅವಾಂತರ ಅಪಾರ. ಅನೇಕ ಸನ್ನಿವೇಶಗಳನ್ನು ಕೇಳುವಾಗ ಮನ ನೋವಿನಿಂದ ರೋಧಿಸುತ್ತದೆ. ಜನರ ಮಧ್ಯೆ ಗೋಡೆಯನ್ನು ಸೃಷ್ಟಿಸಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾದಿಂದ ಬಹಳಷ್ಟು ಹೃದಯವಿದ್ರಾವಕ ಘಟನೆಗಳು ಸೃಷ್ಟಿಯಾಗಿದ್ದರೂ, ಎರಡು ಮನಮಿಡಿಯುವ ಘಟನೆಗಳು ಇಲ್ಲಿವೆ.

ಘಟನೆ 1. ಅದು ನಮ್ಮ ಪಕ್ಕದ ರಾಜ್ಯ ಕೇರಳ.
ಹಾಸಿಗೆಯಿಂದ ತಂದೆ ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿ ತಿಳಿದು ಕತಾರ್ ನಲ್ಲಿದ್ದ 30 ವರ್ಷದ ಲಿನೋ ಆಬೆಲ್ ಗಾಬರಿಯಾಗುತ್ತಾರೆ. ತಂದೆಯ ಆರೋಗ್ಯ ವಿಚಾರಿಸಲೆಂದು ಅಬೆಲ್ ಮಾರ್ಚ್ 8ರಂದು ತನ್ನೂರು ಕೇರಳದ ಕೋಟ್ಟಯಂಗೆ ತೆರಳಲು ವಿಮಾನವೇರುತ್ತಾರೆ. ಭಾರತಕ್ಕೆ ಬರುತ್ತಲೇ ಆಬೆಲ್ ಗೆ ವಿಪರೀತ ಕೆಮ್ಮು ಕಾಣಿಸಿಕೊಳ್ಳುತ್ತದೆ.. ಕೊರೋನಾ ಸೋಂಕಿತ ರಾಷ್ಟ್ರ ಕತಾರ್ ನಿಂದ ಬಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ವಿಮಾನ ನಿಲ್ದಾಣದಿಂದ ಕೊಟ್ಟಾಯಂನ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಶಿಫ್ಟ್
ಮಾಡಲಾಗುತ್ತದೆ. ಅದೇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ತಂದೆ ಹೋರಾಡುತ್ತಿದ್ದರೆ, ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಮಗ ಬಂಧಿ. ತಂದೆ – ಮಗ ಒಂದೇ ಆಸ್ಪತ್ರೆಯಲ್ಲಿದ್ದರೂ ತಂದೆಯನ್ನು ನೋಡುವ ಅವಕಾಶ ಮಗನಿಗೆ ಸಿಗುವುದಿಲ್ಲ. ಮಾರ್ಚ್ 9ರಂದು ಪಾಶ್ವವಾಯು(ಸ್ಟ್ರೋಕ್)ಗೆ ತುತ್ತಾದ ತಂದೆ ಸಾವನ್ನಪ್ಪುತ್ತಾರೆ. ತಂದೆಯ ಮೃತ ದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯುವಾಗ, ತಾನಿದ್ದ ಐಸೋಲೇಷನ್ ವಾರ್ಡ್ ನ ಕಿಟಕಿಯ ಮೂಲಕ ತಂದೆಯ ಮುಖ ನೋಡಿ ಆಬೆಲ್ ಕಣ್ಣೀರು ಸುರಿಸುತ್ತಾರೆ.
ಅವರ ಅಸಹಾಯಕ ಸ್ಥಿತಿಯನ್ನು ನೋಡಿದರೂ ಆಸ್ಪತ್ರೆ ಸಿಬ್ಬಂದಿ ಕೂಡ ಏನೂ ಮಾಡಲಾಗದ ಪರಿಸ್ಥಿತಿ. ಆಬೆಲ್ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೆ ಕೊನೆಗೆ ವಿಡಿಯೋ ಕಾಲ್ ಮೂಲಕ ವೀಕ್ಷಿಸಬೇಕಾಯಿತು.

Related posts

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಗಳಕ್ಕೆ ತಲುಪಿದ ಹಾಸನ ಡಿಸಿ ಲಂಚದ ವಿವಾದ: ಸಿಂಹ-ನಾಯಿ ಸ್ಟೇಟಸ್ ಹಾಕುವ ನೀವೇನು ರಾಜಕಾರಣಿನಾ? ರಾಜಕೀಯಕ್ಕೆ ಬಂದುಬಿಡಿ ಏನ್ ಬೇಕಿದ್ರೂ ಮಾತಾಡೋಣ ಎಂದು ಡಿಸಿಗೆ ಟಿ.ಎ. ಶರವಣ ಸವಾಲು

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಗಳಕ್ಕೆ ತಲುಪಿದ ಹಾಸನ ಡಿಸಿ ಲಂಚದ ವಿವಾದ: ಸಿಂಹ-ನಾಯಿ ಸ್ಟೇಟಸ್ ಹಾಕುವ ನೀವೇನು ರಾಜಕಾರಣಿನಾ? ರಾಜಕೀಯಕ್ಕೆ ಬಂದುಬಿಡಿ ಏನ್ ಬೇಕಿದ್ರೂ ಮಾತಾಡೋಣ ಎಂದು ಡಿಸಿಗೆ ಟಿ.ಎ. ಶರವಣ ಸವಾಲು

November 12, 2026
ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ; ಒಂದೂವರೆ ಗಂಟೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡ

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ; ಒಂದೂವರೆ ಗಂಟೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡ

November 12, 2026

ಘಟನೆ 2.  ಇಟಲಿಯ ‌ನೇಪಲ್ಸ್
ಇಟಲಿಯ ನೇಪಲ್ಸ್ ನಲ್ಲಿ ತನ್ನ ಕುಟುಂಬದೊಂದಿಗೆ ಥೆರೇಸಾ ಫ್ರಾನ್ಸಿಸ್ ವಾಸವಾಗಿರುತ್ತಾಳೆ. ಥೆರೇಸಾ ಫ್ರಾನ್ಸಿಸ್ ಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಅವಳ ಆರೋಗ್ಯ ವಿಪರೀತ ಹದಗೆಡುತ್ತದೆ. ಮಾರ್ಚ್ 7ರಂದು ಥೆರೇಸಾ ಕೊರೊನಾ ಸೋಂಕುಗೆ ಕೊನೆಯುಸಿರೆಳೆಯುತ್ತಾಳೆ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಯಾವ ಆಸ್ಪತ್ರೆಗಳೂ ಆಕೆಯ ಮೃತದೇಹ ಒಯ್ಯಲು ಮುಂದೆ ಬರುವುದಿಲ್ಲ. ಮನೆಯಲ್ಲಿರುವ ಆಕೆಯ ಸಹೋದರ ಏನು ಮಾಡಲು ತೋಚದೇ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಾನೆ. ಪಕ್ಕದಲ್ಲೇ ಬಿದ್ದಿರುವ ತನ್ನ ತಂಗಿಯ ಮೃತದೇಹವನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮುಖಾಂತರ ತೋರಿಸಿ, ನನ್ನ ತಂಗಿ ಕೊನೆಯುಸಿರೆಳೆದಿದ್ದಾಳೆ, ಆದರೆ ಆಕೆಯ ಅಂತ್ಯ ಸಂಸ್ಕಾರ ಮಾಡಲು‌ ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವಳ ಮೃತ ದೇಹ ಒಯ್ಯಲು ಯಾವ ಆಸ್ಪತ್ರೆಯೂ ಮುಂದೆ ಬರುತ್ತಿಲ್ಲ. ಇಟಲಿ ನಮ್ಮನ್ನು ಅನಾಥರನ್ನಾಗಿಸಿದೆ ಎಂದು ತಂಗಿಯ ಶವದ ಮುಂದೆ ಕಣ್ಣೀರಿಡುತ್ತಾನೆ. ಅಂತಿಮವಾಗಿ 36 ಗಂಟೆಗಳ ನಂತರ ರಕ್ಷಣಾತ್ಮಕ ಬಟ್ಟೆ ಧರಿಸಿದ ಕೆಲಸಗಾರರು ಆಗಮಿಸಿ, ದೇಹವನ್ನು ನೇರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿದ್ದಾರೆ.
ಕೊರೋನಾ ಎಂಬ ವೈರಸ್ ಸಮಸ್ತ ಮನುಕುಲಕ್ಕೆ ಸವಾಲು ಹಾಕಿ ದೈತ್ಯಾಕಾರವಾಗಿ ಜಗತ್ತನ್ನೇ ಕಾಡುತ್ತಿದೆ. ಇವೆಲ್ಲವೂ ಕೊರೊನಾ ವೈರಸ್ ಸೃಷ್ಟಿಸಿದ ಒಂದೆರಡು ಘಟನೆಗಳು‌ ಅಷ್ಟೇ. ಇಂತಹ ಅದೆಷ್ಟೋ ಹೊರಗಿನ ಜಗತ್ತಿಗೆ ಗೊತ್ತಾಗದ ಕಣ್ಣೀರಿನ ಘಟನೆಗಳು ಇವೆಯೋ ಗೊತ್ತಿಲ್ಲ.

Advt
ಜಾಹಿರಾತು
Tags: Corona Virusitalykerala
ShareTweetSendShare
Join us on:

Related Posts

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಗಳಕ್ಕೆ ತಲುಪಿದ ಹಾಸನ ಡಿಸಿ ಲಂಚದ ವಿವಾದ: ಸಿಂಹ-ನಾಯಿ ಸ್ಟೇಟಸ್ ಹಾಕುವ ನೀವೇನು ರಾಜಕಾರಣಿನಾ? ರಾಜಕೀಯಕ್ಕೆ ಬಂದುಬಿಡಿ ಏನ್ ಬೇಕಿದ್ರೂ ಮಾತಾಡೋಣ ಎಂದು ಡಿಸಿಗೆ ಟಿ.ಎ. ಶರವಣ ಸವಾಲು

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಗಳಕ್ಕೆ ತಲುಪಿದ ಹಾಸನ ಡಿಸಿ ಲಂಚದ ವಿವಾದ: ಸಿಂಹ-ನಾಯಿ ಸ್ಟೇಟಸ್ ಹಾಕುವ ನೀವೇನು ರಾಜಕಾರಣಿನಾ? ರಾಜಕೀಯಕ್ಕೆ ಬಂದುಬಿಡಿ ಏನ್ ಬೇಕಿದ್ರೂ ಮಾತಾಡೋಣ ಎಂದು ಡಿಸಿಗೆ ಟಿ.ಎ. ಶರವಣ ಸವಾಲು

by Shwetha
November 12, 2026
0

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜೆಡಿಎಸ್ ನಾಯಕರ ನಡುವಿನ ಸಂಘರ್ಷ ಇದೀಗ ವಿಧಾನಸೌಧದ ಶಕ್ತಿಕೇಂದ್ರಕ್ಕೆ ತಲುಪಿದ್ದು, ಜಿಲ್ಲಾಧಿಕಾರಿಗೆ ಹೊಸ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ....

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ; ಒಂದೂವರೆ ಗಂಟೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡ

ನಟ ದರ್ಶನ್‌ಗೆ ಜೈಲಿನಲ್ಲೇ ಫಿಸಿಯೋಥೆರಪಿ; ಒಂದೂವರೆ ಗಂಟೆ ಚಿಕಿತ್ಸೆ ನೀಡಿದ ತಜ್ಞ ವೈದ್ಯರ ತಂಡ

by Shwetha
November 12, 2026
0

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿದೆ. ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ...

ಹಾಸನಾಂಬೆ ದರ್ಶನೋತ್ಸವ ಸಂಪನ್ನ: 12 ದಿನಗಳ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು

ಹಾಸನಾಂಬೆ ದರ್ಶನೋತ್ಸವ ಸಂಪನ್ನ: 12 ದಿನಗಳ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು

by Shwetha
November 12, 2026
0

ಲಕ್ಷಾಂತರ ಭಕ್ತರ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮಕ್ಕೆ ಸಾಕ್ಷಿಯಾದ ಪ್ರಸಿದ್ಧ ಹಾಸನಾಂಬೆ ದೇವಿಯ ವಾರ್ಷಿಕ ದರ್ಶನೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆದ ಉತ್ಸವದ...

ಗೃಹ ಸಚಿವರಿಗೇ ತಿರುಗುಬಾಣವಾಯ್ತು ಸೋಷಿಯಲ್ ಮೀಡಿಯಾ ಪೋಸ್ಟ್: ಉದ್ದೇಶಪೂರ್ವಕ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್

ಗೃಹ ಸಚಿವರಿಗೇ ತಿರುಗುಬಾಣವಾಯ್ತು ಸೋಷಿಯಲ್ ಮೀಡಿಯಾ ಪೋಸ್ಟ್: ಉದ್ದೇಶಪೂರ್ವಕ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್

by Shwetha
November 12, 2026
0

ಬೆಂಗಳೂರು: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೇ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ...

ಅಗ್ನಿಪರೀಕ್ಷೆ ಗೆದ್ದ ಸೀತಾಮಾತೆಯನ್ನು ಹೊರಹಾಕಿದ ರಾಮ ಮರ್ಯಾದಾ ಪುರುಷೋತ್ತಮ ಹೇಗಾಗುತ್ತಾನೆ? ಅಯೋಧ್ಯೆ ರಾಮಮಂದಿರಕ್ಕೆ ನಾನು ಎಂದಿಗೂ ಭೇಟಿ ನೀಡುವುದಿಲ್ಲ ಎಂದ ಟಿಎಂಸಿ ಸಂಸದ ಕೀರ್ತಿ ಆಜಾದ್, ಜಾನಿ ಜಾನಿ ಯೆಸ್ ಪಪ್ಪಾ ಸದಸ್ಯರಿಗೆ ತತ್ವ ಅರ್ಥವಾಗಲ್ಲ ಎಂದು ಬಿಜೆಪಿ ತಿರುಗೇಟು!

ಅಗ್ನಿಪರೀಕ್ಷೆ ಗೆದ್ದ ಸೀತಾಮಾತೆಯನ್ನು ಹೊರಹಾಕಿದ ರಾಮ ಮರ್ಯಾದಾ ಪುರುಷೋತ್ತಮ ಹೇಗಾಗುತ್ತಾನೆ? ಅಯೋಧ್ಯೆ ರಾಮಮಂದಿರಕ್ಕೆ ನಾನು ಎಂದಿಗೂ ಭೇಟಿ ನೀಡುವುದಿಲ್ಲ ಎಂದ ಟಿಎಂಸಿ ಸಂಸದ ಕೀರ್ತಿ ಆಜಾದ್, ಜಾನಿ ಜಾನಿ ಯೆಸ್ ಪಪ್ಪಾ ಸದಸ್ಯರಿಗೆ ತತ್ವ ಅರ್ಥವಾಗಲ್ಲ ಎಂದು ಬಿಜೆಪಿ ತಿರುಗೇಟು!

by Shwetha
November 12, 2026
0

ನವದೆಹಲಿ: ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ನಾನು ನನ್ನ ಜೀವನದಲ್ಲಿ ಎಂದಿಗೂ ಭೇಟಿ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram