ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಗ್ರೀನ್ ಝೋನ್ ರಾಮನಗರಕ್ಕೂ ಕೊರೊನಾ ವಕ್ಕರಿಸಿದೆ. ಇಂದು ರಾಜ್ಯದಲ್ಲಿ 69 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಇಂದು ಯಾದಗಿರಿದಲ್ಲಿ 15, ಉಡುಪಿಯಲ್ಲಿ 16, ಕಲಬುರಗಿಯಲ್ಲಿ 14, ಬೆಂಗಳೂರಿನಲ್ಲಿ 6, ವಿಜಯಪುರದಲ್ಲಿ 1, ಬೀದರ್ ನಲ್ಲಿ 1, ಧಾರವಾಡದಲ್ಲಿ 3, ಬಳ್ಳಾರಿಯಲ್ಲಿ 3, ತುಮಕೂರಿನಲ್ಲಿ 1, ಮಂಡ್ಯದಲ್ಲಿ 2, ಕೋಲಾರದಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಬೆಳಗಾವಿಯಲ್ಲಿ 1 ಮತ್ತು ರಾಮನಗರದಲ್ಲಿ 1 ಪ್ರಕರಣಗಳು ದೃಢಪಟ್ಟಿವೆ.
ಇನ್ನು ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ 44 ಮಂದಿ ಬಲಿಯಾಗಿದ್ದಾರೆ. ಈ ನಡುವೆ 2,158 ಮಂದಿ ಸೋಂಕಿತರ ಪೈಕಿ ಈ ವರೆಗೂ 680 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ 1,433 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮನಗರಕ್ಕೂ ಕೊರೊನಾ ಎಂಟ್ರಿ
ಇಷ್ಟು ದಿನ ಗ್ರೀನ್ ಝೋನ್ ನಲ್ಲಿದ್ದ ರಾಮನಗರಕ್ಕೂ ಹೆಮ್ಮಾರಿ ಕೊರೊನಾ ಎಂಟ್ರಿ ಕೊಟ್ಟಿದೆ. ತಮಿಳುನಾಡಿನಿಂದ ವಾಪಸ್ ಬಂದಿದ್ದ ಮಗುವಿಗೆ ಕೊರೊನಾ ದೃಢವಾಗಿದೆ. ಇಂದಿನ 69 ಸೋಂಕಿತರಲ್ಲಿ 55 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿರುವವರಿಗೆ ಕೊರೊನಾ ಬಂದಿದೆ.








