ಕೊರೋನಾ ಮತ್ತು ವಿಟಮಿನ್ ಡಿ Saakshatv healthtips vitamin D
ಮಂಗಳೂರು, ನವೆಂಬರ್ 2: ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಾಗಿ ಎಲ್ಲರೂ ವಿಟಮಿನ್ ಡಿ ಪೋಷಕಾಂಶದ ಬಗ್ಗೆ ತಿಳಿದಿರುತ್ತಾರೆ. ಜನರು ಮನೆಯಲ್ಲಿಯೇ ಇರುವುದರಿಂದ ಮತ್ತು ನೈಸರ್ಗಿಕ ಸೂರ್ಯನ ಬೆಳಕಿನಿಂದ ‘ಸನ್ಶೈನ್ ವಿಟಮಿನ್’ ಪಡೆಯಲು ಸಾಧ್ಯವಾಗದ ಕಾರಣ ಸಾಮಾನ್ಯ ಜನರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚುಗುತ್ತಿರುವ ಬಗ್ಗೆ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. Saakshatv healthtips vitamin D
ವಾಸ್ತವವಾಗಿ, ಒಂದು ವರದಿಯ ಪ್ರಕಾರ ಸರಿ ಸುಮಾರು 80% ಕೋವಿಡ್-19 ರೋಗಿಗಳು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವುದು ಹೊಸ ಅಧ್ಯಯನದಲ್ಲಿ ಕಂಡುಬಂದಿದೆ. ವಿಟಮಿನ್ ಡಿ ಅನೇಕ ದೈಹಿಕ ಕಾರ್ಯಗಳಿಗೆ ಸಹಾಯ ಮಾಡುತ್ತದೆ ಮತ್ತು ಅದರ ಕೊರತೆಯು ದುರ್ಬಲ ಮೂಳೆಗಳು, ಹೃದಯ ಸಂಬಂಧಿತ ಕಾಯಿಲೆಗಳು, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು.
ಹಾಗಾದರೆ ಇದಕ್ಕೆ ಯಾವ ರೀತಿ ನಮ್ಮ ಶರೀರವನ್ನು ಒಗ್ಗೂಡಿಸಬಹುದು.
ಕೊರೋನಾ ವೈರಸ್ ನಿಂದ ನಮ್ಮನ್ನು ನಾವು ಮನೆಮದ್ದು ಉಪಯೋಗಿಸಿ ಶಾರೀರಿಕವಾಗಿ ಬಲಪಡಿಸಿಕೊಳ್ಳಬಹುದು. ವಿಟಮಿನ್ ಡಿ-ಕೊರತೆಯಿರುವ ಕೋವಿಡ್ -19 ರೋಗಿಗಳು ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಹೊಂದಿರುವುದು ಕಂಡುಬಂದಿದೆ.
ಇಂತಹ ಸಮಯದಲ್ಲಿ ವಿಟಮಿನ್ ಡಿ ಕೊರತೆ ಜೀವಕ್ಕೆ ಕುತ್ತು ತಂದಿದೆ. ಒಂದು ಅಧ್ಯಯನದ ಪ್ರಕಾರ ವಿಟಮಿನ್ ಡಿ ಸಮರ್ಪಕತೆಯು ಕೋವಿಡ್-19 ರೋಗಿಗಳಲ್ಲಿ ಆಮ್ಲಜನಕದ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆಯ ಪ್ರಕ್ರಿಯೆಯನ್ನು ಸುಗಮವಾಗಿಸುತ್ತದೆ ಎಂದು ತಿಳಿದು ಬಂದಿದೆ.
ಕೊಬ್ಬಿನ ಅಂಶವಿರುವ ಮೀನು –
ಕೊಬ್ಬಿನ ಅಂಶ ಯಥೇಚ್ಛವಾಗಿರುವ ಮೀನುಗಳಾದ ಟ್ಯೂನ, ಸಾಲ್ಮನ್ ಮತ್ತು ಮ್ಯಾಕೆರೆಲ್ ಮತ್ತು ಮೀನಿನ ಯಕೃತ್ತಿನ ಎಣ್ಣೆಯಾಂಶವು ವಿಟಮಿನ್ ಡಿ ಯನ್ನು ಶರೀರಕ್ಕೆ ಒದಗಿಸುತ್ತವೆ.
ಸಿರಿಧಾನ್ಯಗಳು ಮತ್ತು ಅದರ ಜ್ಯೂಸು –
ಮನುಷ್ಯನ ದೇಹಕ್ಕೆ ವಿಟಮಿನ್ ಡಿ ತುಂಬಲು ಪರಿಪೂರ್ಣ ಉಪಹಾರ ಸಿರಿ ಧಾನ್ಯ ಅಂದರೆ ತಪ್ಪಾಗಲ್ಲ . ಪ್ರತಿ ದಿನ ಬೆಳಿಗ್ಗೆ ಆಹಾರದಲ್ಲಿ ಸಿರಿಧಾನ್ಯಗಳು ಮತ್ತು ವಿಭಿನ್ನ ಹಣ್ಣಿನ ರಸವನ್ನು ಸೇರಿಸಿ ಕುಡಿದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಹುರಿಯಕ್ಕಿ/ಪಫ್ಡ್ ರೈಸ್ ನ 7 ಆರೋಗ್ಯ ಪ್ರಯೋಜನಗಳು
ಹಾಲಿನ ಉತ್ಪನ್ನಗಳು –
ಹಾಲು, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ವಿಟಮಿನ್ ಡಿ ಮನುಷ್ಯನ ದೇಹಕ್ಕೆ ಸಿಗುತ್ತದೆ.
ಮೊಟ್ಟೆಗಳ ಹಳದಿ ಬಣ್ಣ –
ಹೆಚ್ಚಿನ ಜನರು ಹೆಚ್ಚಿನ ಕೊಬ್ಬಿನಂಶ ಇದೆ ಅನ್ನುವ ಭಯದಿಂದ ಮೊಟ್ಟೆಗಳಿಂದ ಹಳದಿ ಲೋಳೆಯನ್ನು ತ್ಯಜಿಸುತ್ತಾರೆ. ಆದರೆ ಮೊಟ್ಟೆಯ ಹಳದಿ ಯೋಗ್ಯವಾದ ಪ್ರಮಾಣದ ವಿಟಮಿನ್ ಡಿ ಯನ್ನು ಹೊಂದಿರುತ್ತದೆ ಮತ್ತು ಇದನ್ನು ಮಿತವಾಗಿ ಬಳಸಬಹುದು.
ಅಣಬೆ –
ಅಣಬೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಪೋಷಕಾಂಶವನ್ನು ಕಾಣಬಹುದು ಮತ್ತು ಉಪಾಹಾರ, ಊಟ , ಭೋಜನ ಸಮಯದಲ್ಲಿ ಅಣಬೆ ಉಪಯೋಗಿಸಿದಲ್ಲಿ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.
ಆರೋಗ್ಯಕರ ಜೀವನವನ್ನು ನಡೆಸಲು ಅಗತ್ಯವಾದ ವಿಟಮಿನ್ ಡಿ ಪೋಷಕಾಂಶದೊಂದಿಗೆ ನಿಯಮಿತ ಆಹಾರ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದೇ ಆಹಾರವು ಸದ್ಯ ವಿಶ್ವಕ್ಕೆ ಬಂದಿರುವ ಕೊರೋನಾ ಸಾಂಕ್ರಾಮಿಕಕ್ಕೆ ಮಾತ್ರ ಸೀಮಿತವಾಗಿರದೆ, ಮನುಷ್ಯನ ದಿನ ನಿತ್ಯದ ಆಹಾರ ಪದ್ದತಿಯಾಗಬೇಕಿದೆ. ನಮ್ಮ ದೇಹದಲ್ಲಿ ಅಗತ್ಯಕ್ಕೆ ತಕ್ಕಂತೆ ವಿಟಮಿನ್ ಡಿ ಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ