ಮಂಗಳೂರು, ಜುಲೈ 6: ಕೋವಿಡ್ ಆಸ್ಪತ್ರೆಯಿಂದ ಕೊರೋನಾ ಸೋಂಕಿತನೊಬ್ಬ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುತ್ತೂರಿನ ದರ್ಬೆ ನಿವಾಸಿ ದೇವರಾಜು(18) ಎಂಬಾತ ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಆರೋಗ್ಯ ಇಲಾಖೆಯು ಅಧಿಕೃತ ಮಾಹಿತಿ ನೀಡಿದ್ದು, ಆತನ ಬಗ್ಗೆ ತಿಳಿದು ಬಂದಲ್ಲಿ ತಕ್ಷಣವೇ ಇಲಾಖೆಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈತ ಕಂಡುಬಂದರೆ 9480802300 ಗೆ ಮಾಹಿತಿ ನೀಡಲು ಪೊಲೀಸರ ಮನವಿ ಮಾಡಿದ್ದಾರೆ.
ಮಂಗಳೂರಿನ ಅಜ್ಜಿ ಮನೆಯಲ್ಲಿ ವಾಸವಾಗಿದ್ದ ಈತ ಜುಲೈ 1ರಂದು ಆನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯಕೀಯ ತಪಾಸಣೆ ವೇಳೆ ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಈತ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ಬರೀ ಬಿಲ್ಲು ಮಾಡೋದಲ್ಲ ಕೆಲಸ ಮಾಡೋದನ್ನ ಕಲಿಯಿರಿ: ಲೂಟಿ ಹೊಡೆಯುವ ಇಂಜಿನಿಯರ್‌ಗಳ ಅತಿಬುದ್ಧಿವಂತಿಕೆಗೆ ಕೃಷ್ಣ ಭೈರೇಗೌಡರ ಬ್ರೇಕ್
ಬೆಂಗಳೂರು ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ವಿಷಯಗಳಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಅವರು ಅಕ್ಷರಶಃ ಸಮರ ಸಾರಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ...








