ಎಚ್ಚರ | ಭಾರತದಲ್ಲಿ coronavirus ಕೊರೊನಾರ್ಭಟ.. ಒಂದೇ ದಿನ 2,263 ಮಂದಿ ಬಲಿ
ಬೆಂಗಳೂರು : ಭಾರತದಲ್ಲಿ ಕೊರೊನಾ ರಕ್ಕಸನ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 2,263 ಮಂದಿ ಬಲಿಪಡೆದುಕೊಂಡು ಅಟ್ಟಹಾಸ ಮೆರೆದಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,32,730 ಜನರಿಗೆ ಸೋಂಕು ದೃಢಪಟ್ಟಿದೆ.
ಇದೇ ಅವಧಿಯಲ್ಲಿ 2,263 ಮಂದಿ ಹೆಮ್ಮಾರಿಯಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,62,63,695ಕ್ಕೆ ಒಟ್ಟು ಸಾವಿನ ಸಂಖ್ಯೆ 1,86,920ಕ್ಕೆ ತಲುಪಿದೆ.
ಇದುವರೆಗೂ ದೇಶದಲ್ಲಿ 1,36,48,159 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ದೇಶದಲ್ಲಿನ್ನೂ 24,28,616 ಸಕ್ರಿಯ ಪ್ರಕರಣಗಳಿವೆ.