ಕರೋನಾ ವಾರಿಯರ್ಸ್ ಗಳ ವಿರುದ್ಧ ಅಪಪ್ರಚಾರ

ಬನ್ನೇರುಘಟ್ಟದಲ್ಲಿ ಕನಿಷ್ಟ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದಿದ್ದಾಗ ಅಗತ್ಯ ಸಂದರ್ಭಗಳಲ್ಲಿ ವೈದ್ಯಕೀಯ ಸಹಾಯ ನೀಡಿದ್ದು ಬನಶಂಕರಿ ನರ್ಸಿಂಗ್ ಸೆಂಟರ್ ನ ಡಾಕ್ಟರ್ ವಿನಯ್. ಈ ಭಾಗದ ಜನೋಪಯೋಗಿ ಜನಸ್ನೇಹಿ ವೈದ್ಯರೆಂದೇ ಹೆಸರಾದವರು ಡಾ. ವಿನಯ್. ಕೋವಿಡ್ -19 ಲಾಕ್ ಡೌನ್ ದುರ್ದಿನದಲ್ಲಿ ಮನೆ ಮನೆಗೆ ಬಂದು ರೋಗಿಗಳ ಸೇವೆ ಮಾಡಿದ್ದು ಇದೇ ಡಾಕ್ಟರ್ ವಿನಯ್ ಹಾಗೂ ಅವರ ಸಿಬ್ಬಂದಿ ನರ್ಸ್ ಗಳಾದ ಹಂಸವೇಣಿ ಮತ್ತು ತ್ರಿವೇಣಿ. ಆದರೆ ಇದೇ ಕೊರೊನಾ ವಾರಿಯರ್ಸ್ ವಿರುದ್ಧ ಇದೀಗ ಅಪಪ್ರಚಾರ ಮಾಡಲಾಗುತ್ತಿದೆ.

ಕರೋನಾ ವಾರಿಯರ್ಸ್ ಗಳಾಗಿ ಇಡೀ ಬನ್ನೇರುಘಟ್ಟ ಗ್ರಾಮದಲ್ಲಿ ಕರೋನಾ ಸೋಂಕು ಹಬ್ಬದಂತೆ ನೋಡಿಕೊಂಡು, ಚಿಕಿತ್ಸೆ ಶಿಶ್ರೋಷೆ ಸಮಾಧಾನ ಸಾಂತೈಕ್ಯ ನೀಡಿದ್ದು ಡಾಕ್ಟರ್ ವಿನಯ್ ಮತ್ತು ಅವರ ವೈದ್ಯಕೀಯ ಸಿಬ್ಬಂದಿಗಳು. ಈಗ ವಿನಯ್ ಡಾಕ್ಟರ್ ಗೆ ಕರೋನಾ ಪಾಸೀಟೀವ್ ಬಂದಿದೆ ಎಂದು ಬನ್ನೇರುಘಟ್ಟ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಇವರನ್ನು ಕರೋನಾ ವಾರಿಯರ್ಸ್ ಎಂದು ಹೊಗಳಿ ಸನ್ಮಾನ ಮಾಡಲಾಗಿತ್ತು. ಹಗಲು ರಾತ್ರಿ ಎನ್ನದೇ ಕರೋನಾ ಸಂಕಷ್ಟಕಾಲದಲ್ಲಿ ಕಾರ್ಯನಿರ್ವಹಿಸಿದ್ದರು ವಿನಯ್ ಮತ್ತು ಅವರ ನರ್ಸ್ ಗಳು. ಅಸಲಿಗೆ ಡಾ. ವಿನಯ್ ರವರಿಗೆ ಕರೋನಾ ಸೋಂಕಿದೆ ಎನ್ನುವುದೇ ಒಂದು ವದಂತಿ. ಯಾರೋ ಒಬ್ಬ ಕರೋನಾ ಪಾಸಿಟೀವ್ ಬಂದಿರುವ ರೋಗಿ ವಿನಯ್ ಅವರ ಆಸ್ಪತ್ರೆಗೆ ಬಂದ
ಕಾರಣಕ್ಕೆ ಅನನ್ಯ ಸೇವಾ ಮನೋಭಾವನೆಯ ವಿನಯ್ ಡಾಕ್ಟರ್ ಮತ್ತು ಅವರ ಸಿಬ್ಬಂದಿಯನ್ನು ಭಯೋತ್ಪಾದಕರೆಂಬಂತೆ ನೋಡಲಾಗುತ್ತಿದೆ.

ಅವರ ಕೋವಿಡ್ ಟೆಸ್ಟ್ ಫಲಿತಾಂಶವೇ ಇನ್ನೂ ಬಂದಿಲ್ಲ. ಡಾಕ್ಟರ್ ವಿನಯ್ ಮತ್ತು ಅವರ ಸಿಬ್ಬಂದಿಗಳು ಸ್ವತಃ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಹೀಗಿದ್ರೂ ಅವರಿಗೆ ಕೋವಿಡ್ ಪಾಸಿಟೀವ್ ಬಂದಿದೆ ಅನ್ನುವ ಸುಳ್ಳು ಸುದ್ದಿ ಹಬ್ಬಿಸಿ, ಕೆಲವು ಕಿಡಿಕೇಡಿಗಳು
ತೇಜೊವಧೆ ನಡೆಸುತ್ತಿದ್ದಾರೆ. ಇನ್ನು ವಿನಯ್ ಜೊತೆಗೆ ಕೆಲಸ ಮಾಡುತ್ತಿದ್ದ ನರ್ಸ್ ಗಳ ಗಂಟಲು ದ್ರವ ಪರೀಕ್ಷೆಯ ಫಲಿತಾಂಶ ಸಹ ಇನ್ನೂ ಬಂದಿಲ್ಲ. ಅವರು ಹಗಲು ರಾತ್ರಿ ಎನ್ನದೇ ಕರೋನಾ ಫ್ರಂಟ್ ಲೈನ್ ವಾರಿಯರ್ಸ್ ಗಳಂತೆ ಕೆಲಸ ಮಾಡಿದ್ದನ್ನು ಮರೆತ ಕೆಲವರು ಸುಮ್ಮನೆ ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.

ವಿನಯ್ ಅವರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ ಗಳಾದ ಹಂಸವೇಣಿ ಮತ್ತು ತ್ರಿವೇಣಿಯರು ಎಲ್ಲಿಂದಲೂ ಬಂದು ಇಲ್ಲಿ ನಿತ್ಯ ರೋಗಿಗಳ ಸೇವೆ ಮಾಡಿದ್ದಾರೆ.ಆದರೆ ದುರಂತವೆಂದರೆ ಬನ್ನೇರುಘಟ್ಟ ಗ್ರಾಮ ಪಂಚಾಯತಿಯ ಚೇರ್ಮನ್ ಶಾಂತಕುಮಾರಿ
ಈ ಇಬ್ಬರನ್ನೂ ರಾತ್ರೋ ರಾತ್ರಿ ಮನೆಯಿಂದ ಹೊರಹಾಕಿದ್ದಾರೆ. ವಿನಯ್ ಜೊತೆಗೆ ಈ ನರ್ಸ್ ಗಳಿಬ್ಬರಿಗೂ ಕರೋನಾ ಪಾಸಿಟೀವ್ ಇದೆ ಎಂದು ಆರೋಪಿಸಿ ಅವರ ಸೇವೆಯನ್ನ ಅವಮಾನಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಡಾ ವಿನಯ್ ಹಾಗೂ ಅವರ ಸಿಬ್ಬಂದಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವವರೇ ನಿಜವಾದ ಸಮಾಜಘಾತುಕರು. ಕರೋನಾ ನಿಯಂತ್ರಿಸಬಹುದು ಆದರೆ ಈ ರೀತಿ ವಿನಾಕಾರಣ ಸುಳ್ಳು ಹದ್ದಿಗಳನ್ನು ಹಬ್ಬಿಸುವ ಮನೋಭಾವನೇ ಕರೋನಾಗಿಂತಲೂ ಭಯಾನಕ ವೈರಸ್ ಎಂದು ಬನ್ನೇರುಘಟ್ಟದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This