ಕೊರೊನಾ ರೂಪಾಂತರಿ ವೈರಸ್ ಗೆ ಕೋವ್ಯಾಕ್ಸಿನ್ ರಾಮಬಾಣ
ವಾಷಿಂಗ್ಟನ್ : ಕೊರೊನಾ ವೈರಸ್ ಕಾಟದ ನಡುವೆ ಕೋವಿಡ್ ರೂಪಾಂತರಿ ವೈರಸ್ ಆಲ್ಫಾ ಮತ್ತು ಡೆಲ್ಟಾ ಜನರನ್ನು ಚಿಂತಿಗೀಡು ಮಾಡಿದೆ. ಆದ್ರೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಸ್ಥಳೀಯ ಲಸಿಕೆ ಕೋವ್ಯಾಕ್ಸಿನ್ ಕೋವಿಡ್ ರೂಪಾಂತರಿ ವೈರಸ್ ಆಲ್ಫಾ ಮತ್ತು ಡೆಲ್ಟಾಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಯುಎಸ್ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿದೆ.
ಕೋವ್ಯಾಕ್ಸಿನ್ ಪಡೆದ ವ್ಯಕ್ತಿಗಳಲ್ಲಿ ಕೊರೊನಾ SARS-CoV-2 ರೂಪಾಂತರಿಗಳಾದ ಬಿ.1.1.7 ( ಆಲ್ಫಾ) ಮತ್ತು ಬಿ.1.617 ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿ ಪ್ರತಿಕಾಯಗಳನ್ನು ಉತ್ಪತಿ ಮಾಡುತ್ತದೆ ಎಂದು ಎನ್‍ಐಹೆಚ್ ಹೇಳಿದೆ.
ಕೋವ್ಯಾಕ್ಸಿನ್ ಪಡೆದ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಿದ ಎರಡು ಅಧ್ಯಯನಗಳಿಂದ ಈ ವಿಚಾರ ತಿಳಿದುಬಂದಿದೆ.
ಕೋವ್ಯಾಕ್ಸಿನ್ SARS-CoV-2 ಗೆ ಮಾತ್ರ ಬಳಸುವಂತಿದೆ. ಅದನ್ನು ಮತ್ತೆ ಪುನರಾವರ್ತಿಸಲು ಸಾಧ್ಯವಿಲ್ಲ. ಆದರೆ ಅದು ವೈರಸ್ ವಿರುದ್ಧ ಪ್ರತಿಕಾಯಗಳನ್ನು ತಯಾರಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಲಸಿಕೆಯ 2 ನೇ ಹಂತದ ಪ್ರಯೋಗದಿಂದ ಪ್ರಕಟವಾದ ಫಲಿತಾಂಶಗಳು, ಲಸಿಕೆ ಸುರಕ್ಷಿತ ಎಂದು ಸೂಚಿಸುತ್ತದೆ. ಕೋವಾಕ್ಸಿನ್‍ನ 3 ನೇ ಹಂತದ ಪ್ರಯೋಗದ ಸುರಕ್ಷತಾ ದತ್ತಾಂಶವು ಈ ವರ್ಷದ ಕೊನೆಯಲ್ಲಿ ಲಭ್ಯವಾಗಲಿದೆ ಎಂದು ಎನ್ ಐಹೆಚ್ ಹೇಳಿದೆ.