ಕೋವಿಡ್-19- 28,000 ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದ ಡಿಸ್ನಿಲ್ಯಾಂಡ್ ಮತ್ತು ವಾಲ್ಟ್ ಡಿಸ್ನಿ ವರ್ಲ್ಡ್
ಲಾಸ್ ಏಂಜಲೀಸ್: ಕೋವಿಡ್-19 ಸಾಂಕ್ರಾಮಿಕ ಪರಿಣಾಮದಿಂದಾಗಿ ಡಿಸ್ನಿಲ್ಯಾಂಡ್ ಮತ್ತು ವಾಲ್ಟ್ ಡಿಸ್ನಿ ವರ್ಲ್ಡ್ 28,000 ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದೆ. ಈ ಉದ್ಯೋಗಿಗಳಲ್ಲಿ ಮೂರನೇ ಎರಡರಷ್ಟು ಜನರು ಅರೆಕಾಲಿಕ ಕೆಲಸಗಾರರು.
ಕೇಕ್ ತರುವ ಹಣದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಂಚಿ : ಬಚ್ಚೇಗೌಡ ಮನವಿ
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಡಿಸ್ನಿಲ್ಯಾಂಡ್ ಅನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿದ್ದು, ಇದು ನಮಗಿರುವ ಏಕೈಕ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಡಿಸ್ನಿ ಪಾರ್ಕ್ಸ್ ಅಧ್ಯಕ್ಷ ಜೋಶ್ ಡಿ ಅಮರೊ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.
ಕ್ಯಾಲಿಫೋರ್ನಿಯಾ ರಾಜ್ಯವು ಡಿಸ್ನಿಲ್ಯಾಂಡ್ ಅನ್ನು ಮತ್ತೆ ತೆರೆಯಲು ಇನ್ನೂ ಅನುವು ಮಾಡಿಕೊಡದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ ಮಧ್ಯದಿಂದ ಡಿಸ್ನಿಲ್ಯಾಂಡ್ ಮುಚ್ಚಲ್ಪಟ್ಟಿದೆ. ಮಾರ್ಚ್ನಲ್ಲಿ ಮುಚ್ಚಿದ ಒರ್ಲ್ಯಾಂಡೊದಲ್ಲಿನ ವಾಲ್ಟ್ ಡಿಸ್ನಿ ವರ್ಲ್ಡ್, ಜುಲೈ ಮಧ್ಯದಲ್ಲಿ ಸುರಕ್ಷತಾ ಕ್ರಮಗಳ ಜೊತೆಗೆ ತೆರೆದಿದ್ದರೂ, ಸಂದರ್ಶಕರ ಸಂಖ್ಯೆ ಕಡಿಮೆಯಾಗಿದೆ.
ಇನ್ಮುಂದೆ ಮಾಸ್ಕ್ ಹಾಕದಿದ್ದರೆ 1000 ರೂ ದಂಡ, 1 ವರ್ಷ ಜೈಲು
ಮುಂದಿನ ಕೆಲವು ದಿನಗಳಲ್ಲಿ ಕಂಪನಿಯು ಅರೆಕಾಲಿಕ ನೌಕರರನ್ನು ಭೇಟಿಯಾಗಲಿದೆ ಮತ್ತು ಆ ಥೀಮ್ ಪಾರ್ಕ್ ಕಾರ್ಮಿಕರನ್ನು ಪ್ರತಿನಿಧಿಸುವ ಒಕ್ಕೂಟಗಳೊಂದಿಗೆ ಮುಂದಿನ ಹಂತಗಳನ್ನು ಚರ್ಚಿಸಲು ಪ್ರಾರಂಭಿಸುತ್ತದೆ ಎಂದು ಕಾರ್ಮಿಕರಿಗೆ ಬರೆದ ಪತ್ರದಲ್ಲಿ ಡಿ ಅಮರೊ ಹೇಳಿದ್ದಾರೆ.
ಶೇಕಡಾ 67 ರಷ್ಟು ಕಡಿತವು ಅರೆಕಾಲಿಕ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








