ಅಬುದಾಬಿ : ಮುಖ ನೋಡಿ ‘ಕೊರೊನಾ’ ಸೋಂಕು ಪತ್ತೆ ಹಚ್ಚುವ ಸ್ಕ್ಯಾನರ್ ಬಳಕೆ
ಅಬುದಾಬಿ: ವಿಶ್ವಾದ್ಯಂತ ಕೊರೊನಾ ನಿಯಂತ್ರಣ , ಕೊರೊನಾ ಪತ್ತೆಗೆ ನಾನಾ ಕ್ರಮಗಳು , ನಾನಾ ತಂತ್ರಗಾರಿಒಕೆಗಳನ್ನ ಉಪಯೋಗಿಸಲಾಗ್ತಿದೆ.. ಈ ನಡುವೆ ಕೊರೊನಾ ಸೋಂಕನ್ನ ಪತ್ತೆ ಮಾಡಲು ಅಬುದಾಬಿಯಲ್ಲಿ ಫೇಸ್ ಸ್ಕ್ಯಾನರ್ ಬಳಕೆ ಮಾಡಲಾಗ್ತಿದೆ. ಅಂದ್ಹಾಗೆ ಅರಬ್ ರಾಷ್ಟ್ರದ ರಾಜಧಾನಿಯಾಗಿರುವ ಅಬುದಾಬಿಯು ವಿಶ್ವದಲ್ಲೇ ಅತೀ ಹೆಚ್ಚು ಲಸಿಕೆ ಪೂರೈಕೆಯ ದತ್ತಾಂಶವನ್ನ ಹೊಂದಿದೆ.
ಹೌದು ಮಾಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಸೋಂಕನ್ನ ಪತ್ತೆ ಮಾಡಲು ಫೇಸ್ ಸ್ಕ್ಯಾನರ್ಗಳನ್ನ ಬಳಕೆ ಮಾಡಲು ಆರಂಭಿಸಲಾಗಿದೆ. 2000ಕ್ಕೂ ಅಧಿಕ ಮಂದಿ ಮೇಲೆ ನಡೆಸಲಾದ ಪ್ರಯೋಗದಲ್ಲಿ ಹೆಚ್ಚಿನ ಮಟ್ಟದ ಪರಿಣಾಮಕಾರತ್ವ ಕಂಡು ಬಂದಿದೆ. ಈ ತಂತ್ರಜ್ಞಾನವು ವಿದ್ಯುತ್ಕಾಂತೀಯ ತರಂಗಗಳನ್ನ ಬಳಕೆ ಮಾಡಿ ಸೋಂಕನ್ನ ಪತ್ತೆ ಮಾಡುವ ಕಾರ್ಯ ಮಾಡುತ್ತದೆ.
ಇದು ವೈರಸ್ನ ಆರ್ಎನ್ಎ ಕಣಗಳು ದೇಹದಲ್ಲಿ ಇದ್ದಾಗ ಇದು ಬದಲಾಗುತ್ತದೆ. ಇದರಿಂದ ಹೊರಬಂದ ಫಲಿತಾಂಶಗಳಲ್ಲಿ 93.5 ಪ್ರತಿಶತ ಸೂಕ್ಷ್ಮತೆ ತೋರಿಸಿದ್ದು ಸೋಂಕಿತರನ್ನ ಗುರುತಿಸುವಲ್ಲಿ ನಿಖರತೆ ಹೊಂದಿದೆ. ಈ ವಿಶೇಷ ಸ್ಕ್ಯಾನರ್ಗಳನ್ನ ಅಬುದಾಬಿಯ ಇಡಿಇ ಸಂಶೋಧನಾ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ.