ADVERTISEMENT
Monday, September 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಏನಿದು ಕೊರೊನಾ ಹೊಸ ಅಲೆ : ಕೊರೊನಾ part 2 – no conclusion

Namratha Rao by Namratha Rao
December 22, 2020
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಏನಿದು ಕೊರೊನಾ ಹೊಸ ಅಲೆ : ಕೊರೊನಾ part 2 – no conclusion

ಕಳೆದ ವರ್ಷ ಚೀನಾದಿಂದ ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ವ್ಯಾಪಿಸಿ ಲಕ್ಷಾಂತರ ಮಂದಿಯ ಜೀವ ತೆಗೆದ ಕೊರೊನಾ ಮಹಾಮಾರಿಯ ಅಟ್ಟಹಾಸ ಇನ್ನೇನು ಕಮ್ಮಿ ಆಗ್ತಿದೆ ಅನ್ನೋ ಅಷ್ಟರಲ್ಲೇ ಸುಮಾನಿಯಂತೆ ಮತ್ತೊಂದು ಅಲೆ ಅಬ್ಬರಿಸಲು ಆರಂಭವಾಗಿದೆ. ಹೌದು ಇನ್ನೇನು ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ ಅಂತ ನಿಟ್ಟುಸಿರು ಬಿಡುತ್ತಿದ್ದ ಜನರಿಗೆ ದೊಡ್ಡ ಆಘಾತ ಎದುರಾಗಿದೆ. ಭಾರತದಲ್ಲೂ  ಈಗಾಗಲೇ ನಡುಕ ಶುರುವಾಗಿದೆ.

Related posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

September 27, 2026
ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

September 27, 2026

ಯಾಕಂದ್ರೆ ಈಗಾಗಲೇ ಕೊರೊನಾ  ಉಗ್ರಸ್ವರೂಪ ತಾಳಿದೆ. ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೋವಿಡ್ 19 ವೈರಸ್ ಕಾಣಿಸಿಕೊಂಡಿದೆ. ಅನೇಕರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಆತಂಕ ಶುರುವಾಗಿದೆ. ಇಟಲಿಯಲ್ಲೂ ಕೆಲವರಲ್ಲಿ ಸೋಂಕು ಪತ್ತೆಯಾಗಿದೆ. ಕೇವಲ ಬ್ರಿಟನ್ ಅಷ್ಟೇ ಅಲ್ಲ ಯುರೋಪ್, ಭಾರತ ಸೇರಿ ಅನೇಕ ರಾಷ್ಟ್ರಗಳಿಗೆ  ಇದೀಗ ಭಯ ಶುರುವಾಗಿದೆ. ಯಾಕಂದ್ರೆ ಈ ಹೊಸ ಸ್ವರೂಪದ ಕೊರೊನಾ ಸೋಂಕು ಈಗಾಗಲೇ ಬ್ರಿಟನ್ ಗಡಿ ದಾಟಿ ಅನೇಕ ದೇಶಗಳಿಗೂ ಪಸರಿಸಿದೆ.New variant coronavirus UK

ಲಂಡನ್ ಕೊರೊನಾ ಭೀತಿ ಹಿನ್ನೆಲೆ: ಕಟ್ಟೆಚ್ಚರಕ್ಕೆ ಸಿಎಂ ಬಿಎಸ್‍ವೈ ಸೂಚನೆ..!

ಇನ್ನೂ ಭಾರತಕ್ಕೆ ಬ್ರಿಟನ್ ​ನಿಂದ ಬಂದವರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಇತ್ತ  ರಾಜ್ಯಕ್ಕೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ.  ಯಾಕಂದ್ರೆ ಬ್ರಿಟನ್ ನಿಂದ  ಏರ್​ ಇಂಡಿಯಾ ವಿಮಾನದಲ್ಲಿ 246 ಜನ ಕರ್ನಾಟಕಕ್ಕೆ ಬಂದಿದ್ದಾರೆ. ಬ್ರಿಟೀಷ್ ಏರ್​ವೇಸ್​​ ವಿಮಾನದಲ್ಲಿ 291 ಜನ ಬಂದಿದ್ದಾರೆ. ಇವರಲ್ಲಿ ಯಾರಿಗೂ ರೋಗದ ಲಕ್ಷಣ ಇರಲಿಲ್ಲ. ಆದ್ರೆ ಏರ್​ ಇಂಡಿಯಾದಲ್ಲಿ ಬಂದಂತಹ 89 ಜನರ ಬಳಿ ಕೊರೋನಾ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಬ್ರಿಟೀಷ್ ಏರ್​ವೇಸ್​ನಲ್ಲಿ ಬಂದ 49 ಜನರ ಬಳಿ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಒಟ್ಟಾರೆಯಾಗಿ 138 ಜನ ಕೊರೋನಾ ನೆಗೆಟಿವ್ ರಿಪೋರ್ಟ್​ ಇಲ್ಲದೆ ಬೆಂಗಳೂರಿಗೆ ಬಂದಿದ್ದಾರೆ. ಸದ್ಯ ಭಾರತೀಯ   ಕೇಂದ್ರ ಆರೋಗ್ಯ ಇಲಾಖೆ ಇಂಗ್ಲೆಂಡ್ ನಿಂದ ಭಾರತಕ್ಕೆ ಕಾಲಿಟ್ಟಿರುವವರ ಶೋಧಾಚರಣೆಯಲ್ಲಿ ತೊಡಗಿದೆ.  ಅವರನ್ನ ಪತ್ತೆ ಹಚ್ಚಿದ ಬಳಿಕ ಅವರಿಗೆ RT-PCR ಪರೀಕ್ಷೆಗಳನ್ನ ನಡೆಸಿ ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತೆ.  ಬ್ರಿಟನ್​ನಿಂದ ಬೇರೆ ದೇಶಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರ ಮೇಲೂ ನಿಗಾ ಇಡಲಾಗುತ್ತೆ, ಪರೀಕ್ಷೆ ನಡೆಸಲಾಗುತ್ತೆ. ರೋಗದ ಲಕ್ಷಣಗಳಿದ್ದೂ ಬೇರೆ ದೇಶದಿಂದ ಬರುವ ಪ್ರಯಾಣಿಕರನ್ನ ಕೂಡ ಪರೀಕ್ಷೆ ನಡೆಸಿ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತೆ. ಇನ್ನೂ ಕಳೆದ 14 ದಿನಗಳಲ್ಲಿ ಬ್ರಿಟನ್​ನಿಂದ ರಾಜ್ಯಕ್ಕೆ ಬಂದವರು ದಯವಿಟ್ಟು RT-PCR ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.corona test

ಲಂಡನ್ ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಸೇವೆ ಸ್ಥಗಿತ..!

ಇನ್ನೂ ಭಯಾನಕ ವಿಚಾರವೆಂದ್ರೆ  ಬ್ರಿಟನ್​ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಗೆ ಈ ಹೊಸ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಬ್ರಿಟನ್​ನಲ್ಲಿ ಈ ಹೊಸ ಕೋವಿಡ್​ ಸೋಂಕು ಮಿತಿಮೀರಿದ್ದು ಅಲ್ಲಿಯ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಸೌದಿ ಅರೆಬಿಯಾ, ರಷ್ಯಾ, ಭಾರತ ಸೇರಿದಂತೆ ಯೂರೋಪ್ ನ ಹಲವು ರಾಷ್ಟ್ರಗಳು  ಬ್ರಿಟನ್  ವಿಮಾನ ಹಾರಾಟವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಭಾರತದಿಂದ ಬ್ರಿಟನ್ ಗೆ ತೆರಳುವ ವಿಮಾನ ಸಂಚಾರವನ್ನೂ ಕೂಡಾ ಬಂದ್ ಮಾಡಲಾಗಿದೆ. ಇತ್ತ ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ದೇಶದ ಗಡಿಭಾಗಗಳನ್ನು ಬಂದ್ ಮಾಡಿವೆ. ಹೊಸ ಸ್ವರೂಪದ ಕೊರೊನಾವೈರಸ್ ಕಾಣಿಸಿಕೊಂಡಿದ್ದನ್ನು ಅಧಿಕೃತವಾಗಿ ಘೋಷಿಸುತ್ತಿದ್ದಂತೆ ಜರ್ಮನಿ, ಇಟಲಿ, ಬೆಲ್ಜಿಯಂ, ಡೆನ್ಮಾರ್ಕ್, ಬಲ್ಗೇರಿಯಾ, ದಿ ಐರಿಷ್ ಗಣರಾಜ್ಯ, ಟರ್ಕಿ ಮತ್ತು ಕೆನಡಾ, ಫ್ರಾನ್ಸ್‌ ರಾಷ್ಟ್ರಗಳು ಎಲ್ಲ ಗಡಿಭಾಗಗಳನ್ನು ಬಂದ್‌ ಮಾಡಿವೆ. ಇದರ ಜತೆಗೆ ಹಾಂಗ್‌ಕಾಂಗ್‌, ಇಸ್ರೇಲ್, ಇರಾನ್, ಕ್ರೊವೇಶಿಯಾ, ಅರ್ಜೆಂಟೀನಾ, ಚಿಲಿ, ಮೊರಾಕ್ಕೊ ಮತ್ತು ಕುವೈತ್ ರಾಷ್ಟ್ರಗಳಲ್ಲಿ ಬ್ರಿಟನ್‌ಗೆ ಪ್ರಯಾಣಕ್ಕೆ ನಿರ್ಬಂಧ ವಿಧಿಸಿವೆ.

ಏನಿದು ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಹೊಸ ಶಿಗೆಲ್ಲಾ ಸೋಂಕು? ಇದರ ಲಕ್ಷಣಗಳೇನು?ಇದು ಹೇಗೆ ಹರಡುತ್ತದೆ?

ಇತ್ತ ಬ್ರಿಟನ್ ನಲ್ಲಿ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ಇನ್ನೂ ಭಾರತದಲ್ಲಿಯೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಅದ್ರಲ್ಲೂ ಈಗಾಗಲೇ ಮಹಾಮಾರಿಯ ಹೊಡೆತಕ್ಕೆ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿರುವ ಮಹಾರಾಷ್ಟ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.   ಅಲ್ಲದೇ ಯುರೋಪ್ ಮತ್ತು ಮಿಡಲ್ ಈಸ್ಟ್ ರಾಷ್ಟ್ರಗಳಿಂದ ಮಹಾರಾಷ್ಟ್ರಕ್ಕೆ ಬರುವ ಪ್ರಯಾಣಿಕರು 14 ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​​ಗೆ ಒಳಪಡಬೇಕಾಗಿದೆ. ಈ ದೇಶಗಳನ್ನ ಹೊರತುಪಡಿಸಿ ಉಳಿದ ದೇಶಗಳಿಂದ ಬರುವ ಪ್ರಯಾಣಿಕರು ಹೋಂ ಕ್ವಾರಂಟೈನ್​ಗೆ ಒಳಗಾಗಬೇಕಿದೆ.

ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ – ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ

ಒಟ್ಟಾರೆ ಇನ್ನೇನು ಕೊರೊನಾ  ಆರ್ಭಟ ನಿಲ್ಲಲಿದೆ ಅನ್ನೋ ವಿಶ್ವಾಸದಲ್ಲಿದ್ದ ದೇಶ ಹಾಗೂ ರಾಜ್ಯದ ಜನತೆಗೆ ಇದೀಗ ಕೊರೊನಾ ಹೊಸ  ತಳಿಯ ಭೀತಿ ಎದುರಾಗಿದೆ. ರಾಜ್ಯದಲ್ಲಿ 200 ಕ್ಕೂ ಹೆಚ್ಚು ಜನರು ಬ್ರಿಟನ್ ನಿಂದ ಆಗಮಿಸಿರೋದು ಜನರಲ್ಲಿ ಮತ್ತೆ ನಡುಕ ಸೃಷ್ಟಿಮಾಡಿದೆ. ಇನ್ನೂ ಈ ಸೋಂಕಿನ ಹೊಸ ತಳಿ ಶೇ 70 ರಷ್ಟು ವೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎನ್ನಲಾಗ್ತಿದೆ.

ಬಾಲಕನಿಂದಲೇ ಬಾಲಕನ ಮೇಲೆ ಸತತ 4 ವರ್ಷಗಳ ಕಾಲ ಲೈಂಗಿನ ದೌರ್ಜನ್ಯ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: britancovid 19 virusEnglandindia
ShareTweetSendShare
Join us on:

Related Posts

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ

by Shwetha
September 27, 2026
0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸಿಗಲಿದೆ. ಅರಮನೆ ನಗರಿಯ ಅಂಗಳದಲ್ಲಿ ಅಕ್ಟೋಬರ್ 18 ಮತ್ತು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಶಾಲಾ ಮಕ್ಕಳ ಶೂ ಭಾಗ್ಯದ ಸುತ್ತ ವಿವಾದದ ಹುತ್ತ: ಗುಣಮಟ್ಟ ಕಳಪೆಯಲ್ಲ ಕೇವಲ ಸೈಜ್ ಸಮಸ್ಯೆ- ಶೂ ವಿವಾದದ ಬಗ್ಗೆ ಮಧು ಬಂಗಾರಪ್ಪ ಡಿಫೆನ್ಸ್

by Shwetha
September 27, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು...

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

ಟೆಲಿಕಾಂ ಕಂಪನಿಗಳ ದಬ್ಬಾಳಿಕೆಗೆ ಟ್ರಾಯ್ ಬ್ರೇಕ್:ಫೋನ್ ಕಾಲ್ ಮಾಡುವವರಿಗೆ ಮಾತ್ರ ಗುಡ್ ನ್ಯೂಸ್-ಗ್ರಾಹಕರಿಗೆ ಬೇಕಾದ ಪ್ಲಾನ್ ನೀಡದಿದ್ದರೆ ಇನ್ನು ದಂಡ ಫಿಕ್ಸ್

by Shwetha
September 27, 2026
0

ನವದೆಹಲಿ: ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಇನ್ನು ಮುಂದೆ ಜೇಬು ಸುಡುವ ರೀಚಾರ್ಜ್ ಚಿಂತೆ ಕಡಿಮೆಯಾಗಲಿದೆ. ಅಂತರಜಾಲ ಅಥವಾ ಡೇಟಾ ಬಳಸದಿದ್ದರೂ ಅನಿವಾರ್ಯವಾಗಿ ಡೇಟಾ ಇರುವ ಪ್ಲಾನ್ ಗಳನ್ನೇ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ದೇಶದ್ರೋಹದ ಕೆಲಸ ಮಾಡುತ್ತಿದೆಯೇ ಚುನಾವಣಾ ಆಯೋಗ? ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವದ ಬಲಿ: ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

by Shwetha
September 27, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಈಗ ಸಾರ್ವಜನಿಕವಾಗಿ ಪ್ರಶ್ನೆಯಾಗುತ್ತಿದೆ. ಒಬ್ಬ ನಾಯಕ ಮತ್ತು ಒಂದು ರಾಜಕೀಯ ಪಕ್ಷದ ಹಿತಾಸಕ್ತಿ ಕಾಯಲು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

by Shwetha
September 27, 2026
0

ನವದೆಹಲಿ: ದೆಹಲಿಯಲ್ಲಿ ನಡೆದ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ವಿಚಾರ ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ರಾಜಕೀಯ ಸಮರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram