ಕೊರೋನಾ ಎರಡನೇ ಅಲೆ ಎದುರಿಸುವಲ್ಲಿ ಪ್ರಧಾನಿ ಮೋದಿ ಎಡವಿದ್ದೇಲ್ಲಿ?

1 min read
Covid 19 second wave

ಕೊರೋನಾ ಎರಡನೇ ಅಲೆ ಎದುರಿಸುವಲ್ಲಿ ಪ್ರಧಾನಿ ಮೋದಿ ಎಡವಿದ್ದೇಲ್ಲಿ?

ಸ್ವತಂತ್ರ ಭಾರತವು ಇಲ್ಲಿಯವರೆಗೆ ಇಂದು ಎದುರಿಸುತ್ತಿರುವಂತಹ ಬಿಕ್ಕಟ್ಟನ್ನು ಎದುರಿಸಿರಲಿಲ್ಲ. ದೇಶದಲ್ಲಿ ಅದೆಷ್ಟೋ ಯುದ್ಧಗಳು, ಆಂತರಿಕ ದಂಗೆಗಳು ಮತ್ತು ಸಂಘರ್ಷಗಳು ನಡೆದಿವೆ.‌ ಬಗೆಹರಿಸಲಾಗದ ದೀರ್ಘಕಾಲದ ರಾಜಕೀಯ ಸವಾಲುಗಳು ಮುಂದಿವೆ. ಆದರೆ ಇಂದಿನ ಸಂಕಟದ ಪ್ರಮಾಣವನ್ನು ದೇಶವು ಹಿಂದೆಂದೂ ಕಂಡಿರಲಿಲ್ಲ. ಕಳೆದ ವರ್ಷ ಇತರ ರಾಷ್ಟ್ರಗಳು ಅನುಭವಿಸಿದ ಕೆಟ್ಟ ಪರಿಸ್ಥಿತಿಗೆ ಈ ಬಾರಿ ಭಾರತ ತುತ್ತಾಗಿದೆ.
Covid 19 second wave

ಇಂದು ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ಮಾರಣಾಂತಿಕ ವೈರಸ್‌ನಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಅಗತ್ಯವಿರುವ ಪ್ರತಿಯೊಬ್ಬರಿಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಸಾಧ್ಯವಾದಷ್ಟು ಬೇಗ ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ನೀಡುವುದು, ಕೊರೋನಾ ಪ್ರಸರಣದ ಸರಪಳಿಯನ್ನು ಮುರಿಯಲು ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳುವುದಷ್ಟೇ ಸದ್ಯಕ್ಕಿರುವ ಪರಿಹಾರ.

ಆದರೆ ಇವೆಲ್ಲವುಗಳ ನಡುವೆ ಜನ ಸಾಮಾನ್ಯರ ಮನದಲ್ಲಿ ಮೊದಲನೇ ಕೊರೋನಾ ಅಲೆಯನ್ನು ಎದುರಿಸಲು ಶಕ್ತವಾದ ಕೇಂದ್ರ ಸರ್ಕಾರ ಈ ಬಾರಿ ಏನು ಮಾಡಿದೆ ಎಂಬ ಪ್ರಶ್ನೆ ಮನೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಜನರು ಕೇಂದ್ರ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದನ್ನು ನಾವು ಕಾಣುತ್ತಿದ್ದೇವೆ.

ಮೊದಲನೆಯ ಅಲೆಯ ಸಂದರ್ಭದಲ್ಲಿ ಸರಿಯಾದ ಸಮಯದಲ್ಲಿ ಸರ್ಕಾರ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸದೆ ಇರುತ್ತಿದ್ದರೆ ಬಹುಶಃ ಇಂದಿಗಿಂತಲೂ ಕೆಟ್ಟ ಪರಿಸ್ಥಿತಿ ಕಳೆದ ಬಾರಿಯೇ ಎದುರಾಗುತ್ತಿತ್ತೋ ಏನೋ..

ಆದರೂ ಕಳೆದ ಬಾರಿಯ ಧಿಡೀರ್ ಲಾಕ್ ಡೌನ್, ವಲಸಿಗರ ಸಮಸ್ಯೆಗಳು, ಆ ನಂತರದ ಕೃಷಿ ಆಂದೋಲನ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮೇಲೆ ದೊಡ್ಡ ಹೊಡೆತವನ್ನುಂಟು ಮಾಡುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಇದು ಬಿಹಾರದ ಚುನಾವಣಾ ಫಲಿತಾಂಶದಲ್ಲಿ ಅಥವಾ ಬಂಗಾಳದ ಸಮೀಕ್ಷೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಊಹಿಸಲಾಗಿತ್ತಾದರೂ ಹಾಗೇನು ಆಗಲಿಲ್ಲ.

ಆದರೆ ಕೋವಿಡ್ -19 ರ ಎರಡನೇ ತರಂಗವು ರಾಜಕೀಯ ತಿರುವಿಗೆ ಕಾರಣವಾಗಿದ್ದು, ಜನಸಾಮಾನ್ಯರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ರೀತಿಯ ಒಂದು ನಿರ್ಣಾಯಕ ಮತ್ತು ಪರಿವರ್ತಕ ಕ್ಷಣವು ಅನಿವಾರ್ಯವಾಗಿ ರಾಜಕೀಯ ಪರಿಣಾಮಗಳಿಗೆ ಕಾರಣವಾಗಿದೆ.
Covid 19 second wave

ಇಂದು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ನಾವು ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಮ್ಲಜನಕದ ಕೊರತೆ, ರೆಮ್‌ಡೆಸಿವಿರ್ ಔಷಧಗಳ ಸಮಸ್ಯೆಯನ್ನು ಎದುರಿಸುತ್ತಿದ್ದೇವೆಯೇ ಹೊರತು, ಎಲ್ಲೂ ಪಿಪಿಇ ಕಿಟ್‌, ಮಾಸ್ಕ್ ಹಾಗೂ ವೆಂಟಿಲೇಟರ್‌ ವಿಚಾರದಲ್ಲಿ ಯಾವುದೇ ಕೊರತೆ ಎದುರಾಗಿಲ್ಲ. ಏಕೆಂದರೆ ಕಳೆದ ವರ್ಷದಿಂದ ಇವುಗಳ ಉತ್ಪಾದನೆ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ‌ಕಾರಣ.

ಹೀಗಿರುವಾಗ ಕೇಂದ್ರ ಸರ್ಕಾರ ಕೊರೋನಾ ಎರಡನೇ ಅಲೆಯಿಂದ ಉಂಟಾದ ವಿಷಮ ಪರಿಸ್ಥಿತಿಯನ್ನು ಎದುರಿಸಲು ಕ್ರಮ ಕೈಗೊಂಡಿಲ್ಲವೇ? ಮೊದಲ ಅಲೆಯ ನಂತರ ಇಂತಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರಗಳಿಗೆ ನೆರವು ‌ನೀಡಿಲ್ಲವೇ?. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

ಕೇಂದ್ರ ಸರ್ಕಾರ ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ತಲೆದೋರಿರುವ ಪರಿಸ್ಥಿತಿ ನಿಭಾಯಿಸಲು ಕೈಗೊಂಡ ಕ್ರಮಗಳು :

ದೇಶದ ಪ್ರತಿಯೊಂದು ‌ರಾಜ್ಯಗಳಿಗೆ ಆಮ್ಲಜನಕ(ಆಕ್ಸಿಜನ್) ಮತ್ತು ದ್ರವರೂಪದ ಆಮ್ಲಜನಕ(ಲಿಕ್ವಿಡ್ ಆಕ್ಸಿಜನ್) ಸರಬರಾಜು ಮಾಡುವುದಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ.

ಮೆಡಿಕಲ್ ಆಕ್ಸಿಜನ್ ಅಭಾವ ದೇಶದಲ್ಲಿ ತೀವ್ರವಾಗಿ ತಲೆದೋರಿರುವ ಹಿನ್ನೆಲೆಯಲ್ಲಿ, ಜರ್ಮನಿಯಿಂದ 23 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ವಿಮಾನಗಳ ಮೂಲಕ ಭಾರತಕ್ಕೆ ಏರ್​ಲಿಫ್ಟ್ ಮಾಡುವ ನಿರ್ಧಾರವನ್ನು ಭಾರತದ ರಕ್ಷಣಾ ಸಚಿವಾಲಯ ತೆಗೆದುಕೊಂಡಿದೆ.

ಯುಎಇ, ಸಿಂಗಾಪುರದಿಂದ ಸಹ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗಿದೆ.
ಯುಎಸ್ ನಿಂದ ಸಹ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುತ್ತಿದೆ.

262 ಆಕ್ಸಿಜನ್‌ ಘಟಕಗಳ ಸ್ಥಾಪನೆ ಮಾಡಲಾಗಿದ್ದು,
ಆಮ್ಲಜನಕವನ್ನು ಆಮದು ಮಾಡಿಕೊಳ್ಳಲು ಸಹ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನ ಮಂತ್ರಿಗಳ ನಿರ್ದೇಶನದ ಪ್ರಕಾರ, 551 ಮೀಸಲು ಪಿಎಸ್‌ಎ(ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್) ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಪಿಎಂ ಕೇರ್ ಫಂಡ್ ನಿಂದ ಸ್ಥಾಪಿಸಲು ಆದೇಶಿಸಲಾಗಿದೆ.

ದೇಶದ ಪ್ರಮುಖ ಮೆಡಿಕಲ್ ಆಕ್ಸಿಜನ್ ತಯಾರಕರಾದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಜೆಎಸ್​ಡಬ್ಲ್ಯೂ ಕಂಪನಿಯ ಸಜ್ಜನ್ ಜಿಂದಾಲ್, ಜೆಎಸ್​ಪಿಎಲ್​ ಕಂಪನಿಯ ನವೀನ್ ಜಿಂದಾಲ್ ಸೇರಿದಂತೆ ಹಲವು ಪ್ರಮುಖರು ಜೊತೆ ಪ್ರಧಾನ ಮಂತ್ರಿ, ಆಕ್ಸಿಜನ್ ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚಿಸಿದ್ದಾರೆ.

ಆಮ್ಲಜನಕ ಕೊರತೆಯ ಹಿನ್ನೆಲೆಯಲ್ಲಿ, ಎಲ್ಲಾ ಕೈಗಾರಿಕೆಗಳಲ್ಲಿ ಆಮ್ಲಜನಕದ ಪೂರೈಕೆಯನ್ನು ಸರ್ಕಾರ ನಿಲ್ಲಿಸಿದೆ.
Covid 19 second wave

ಕೊರೋನಾ ಚಿಕಿತ್ಸೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುವ ರೆಮ್‌ಡೆಸಿವಿರ್ ಇಂಜೆಕ್ಷನ್‌ಗಳ ಉತ್ಪಾದನೆ ಹೆಚ್ಚಿಸಿದ್ದು, ಈ ಹಿಂದೆ ಪ್ರತಿ ತಿಂಗಳು 40 ಲಕ್ಷ ಉತ್ಪಾದನೆಯಾಗುತ್ತಿದ್ದ ರೆಮ್‌ಡೆಸಿವಿರ್ ಈಗ ‌ ತೊಂಭತ್ತು ಲಕ್ಷ ಉತ್ಪಾದನೆ ಮಾಡಲಾಗುತ್ತಿದೆ.

ಮೇ 1 ರಿಂದ ಕೊರೋನಾ ವ್ಯಾಕ್ಸಿನೇಷನ್ ನ‌ ಮೂರನೇ ಹಂತ ಪ್ರಾರಂಭವಾಗಲಿದ್ದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.
ಈಗಾಗಲೇ ಕೊರೋನಾ ವಾರಿಯರ್ಸ್‌ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಯನ್ನು ನೀಡಲಾಗುತ್ತಿದೆ.

ಬಿಜೆಪಿ ಸರ್ಕಾರವಿರುವ ಹೆಚ್ಚಿನ ರಾಜ್ಯಗಳ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಮುಂದಿನ ಎರಡು ತಿಂಗಳುಗಳವರೆಗೆ ಲಕ್ಷಾಂತರ ಬಡವರಿಗೆ‌ ಉಚಿತ ಆಹಾರ ಧಾನ್ಯಗಳನ್ನು ನೀಡಲಿದೆ.

Covid 19 second wave
ಕೊರೋನಾ ಸೋಂಕಿನ ಎರಡನೇ ಅಲೆಯ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮೊದಲೇ ಎಚ್ಚರಿಸಿದ ಕೇಂದ್ರ ಸರ್ಕಾರ, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಪರಿಸ್ಥಿತಿಯನ್ನು ಗಮನಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು.

ರಾಜ್ಯ ಸರ್ಕಾರಗಳ ಕೋರಿಕೆಯಂತೆ ಕಳೆದ ವರ್ಷ 162 ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಆದರೆ ರಾಜ್ಯ ಸರ್ಕಾರಗಳು ಇಲ್ಲಿಯವರೆಗೆ ಕೇವಲ 33 ಘಟಕಗಳನ್ನಷ್ಟೇ ಸ್ಥಾಪಿಸಿದೆ.

ಹಾಗಿದ್ದರೆ ಇಂದಿನ ಪರಿಸ್ಥಿತಿಗೆ ಹೊಣೆ ಯಾರು? ಎಲ್ಲವನ್ನೂ ಕೇಂದ್ರ ಸರ್ಕಾರವೇ ಮಾಡಬೇಕು ಎಂದಾದರೆ ರಾಜ್ಯ‌‌ಸರ್ಕಾರಗಳ ಅವಶ್ಯಕತೆಯಾದರೂ ಏನಿದೆ.
ಅನಿರೀಕ್ಷಿತವಾಗಿದ್ದ ಮೊದಲನೆಯ ಅಲೆಯ ಪ್ರತಿಯೊಂದು ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸಿದ ಪ್ರಧಾನಿ ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಪರಿಸ್ಥಿತಿ ನಿಭಾಯಿಸಬಹುದು ಎಂದೆನಿಸಿದ್ದು ತಪ್ಪೇ? ಪ್ರತಿ ಬಾರಿ‌ ಸಂಕಷ್ಟ ಎದುರಾದಾಗ ಸರಿಯಾದ ನಿರ್ಧಾರವನ್ನು ಕೈಗೊಳ್ಳಲಾಗದೆ ಕೇಂದ್ರದೆಡೆ ಮುಖ ಮಾಡುವ ರಾಜ್ಯ‌ ಸರ್ಕಾರಗಳ ಮೇಲೆ ಪ್ರಧಾನಿ ಮೋದಿ ಇಟ್ಟ ನಂಬಿಕೆ ಇಂದಿನ ಕೆಟ್ಟ ‌ಪರಿಸ್ಥಿತಿ‌ಗೆ ಕಾರಣವೇ ?

#Covid19 #secondwave

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd