ಉತ್ತರಪ್ರದೇಶದ ಹಪೂರ್ನ ಬ್ರಜ್ ಘಾಟ್ ನಲ್ಲಿ ಸಾವಿರಾರು ಭಕ್ತರು – ಕೊರೊನಾ ನಿಯಮ ಉಲ್ಲಂಘನೆ
ಉತ್ತರಪ್ರದೇಶ : ಕೊರೊನಾ ಮಹಾಮಾರಿಯ ನಡುವೆ 2ನೇ ಅಲೆ ಕಡಿಮೆಯಾಗ್ತಿರುವ ಸಮಾಧನದಲ್ಲಿ ಜನರಿದ್ದಾರೆ.. ಆದ್ರೆ ಅನೇಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.. ಕೊರೊನಾ ನಿಯಮಗಳನ್ನು ಗಹಾಳಿಗೆ ತೂರಿ ಗಂಗಾ ದಸರಾ ಮಹೋತ್ಸವದ ಪ್ರಯುಕ್ತ ಉತ್ತರಪ್ರದೇಶದ ಹಪೂರ್ನ ಬ್ರಜ್ ಘಾಟ್ ನಲ್ಲಿ ಸಾವಿರಾರು ಭಕ್ತರು ಗಂಗಾನದಿಯಲ್ಲಿ ಪುಣ್ಯಸ್ನಾನಕ್ಕೆ ಗುಂಪುಗೂಡಿದ್ದ ಬಗ್ಗೆ ವರದಿಯಾಗಿದೆ.
ಸರಕಾರದ ಅನ್ಲಾಕ್ ಮಾರ್ಗಸೂಚಿ ಪ್ರಕಾರ ಧಾರ್ಮಿಕ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಜನ ಒಂದೆಡೆ ಗುಂಪುಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಇದರ ಅನ್ವಯ, ಗಂಗಾ ದಸರಾ ಸಂದರ್ಭ ಗಂಗಾನದಿಯಲ್ಲಿ ಪವಿತ್ರಸ್ನಾನವನ್ನು ನಿಷೇಧಿಸಲಾಗಿದೆ ಎಂದು ಹಾಪುರ್ ಜಿಲ್ಲಾನ್ಯಾಯಾಧೀಶರ ಆದೇಶದಲ್ಲಿ ಸೂಚಿಸಲಾಗಿದೆ.
ಅನ್ಲಾಕ್ ಪ್ರಕ್ರಿಯೆ ಹಂತಹಂತವಾಗಿ ನಡೆಯಬೇಕು. ಒಮ್ಮೆಲೇ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೊರೋನ ಸೋಂಕಿನ ೩ನೇ ಅಲೆ ನಿರೀಕ್ಷಿಸಿದ್ದಕ್ಕಿಂತಲೂ ತುಂಬಾ ಬೇಗ ಅಪ್ಪಳಿಸಲಿದೆ ಎಂದು ವೈದ್ಯರು ಮತ್ತು ಆರೋಗ್ಯತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಷ್ಟಲಕ್ಷ್ಮೀ ಒಲಿಸಿಕೋಳ್ಳಲು ಮನೆಯಲ್ಲೇ ಮಾಡುವ ಸರಳ ಶಾಸ್ತ್ರೋಕ್ತ ವಿದಿವಿಧಾನ ಇಲ್ಲಿದೆ ನೋಡಿ..!!
ಅಕ್ರಮವಾಗಿ ದತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿದಗದ ವೈದ್ಯ ಅರೆಸ್ಟ್
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








