ಅಕ್ರಮವಾಗಿ ದತ್ತು ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಿದಗದ ವೈದ್ಯ ಅರೆಸ್ಟ್
ಮುಂಬೈ: ಅಕ್ರಮವಾಗಿ ಗಂಡು ಮಗುವನ್ನ ದತ್ತು ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪದ ಮೇಲೆ ವೈದ್ಯನೊಬ್ಬನನ್ನ ಮುಂಬೈ ಪೊಲೋಸರು ಬಂಧಿಸಿದ್ದಾರೆ… ಮುಂಬೈನ ಶಿವಾಜಿನಗರದ ವೈದ್ಯ ಗಂಡು ಮಗುವನ್ನು ದತ್ತು ಪಡೆದಿದ್ದ ಕುಟುಂಬದ ಸಂಬಂಧಿಯೊಬ್ಬರು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದು, ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳು ನಕಲಿ ಎಂದು ಆರೋಪ ಮಾಡಿದ್ದಾರೆ.
ಅಲ್ಲದೇ ಈ ಮಗು ರಾಜಸ್ಥಾನದಲ್ಲಿ ಮಗುವಿನ ಜನನವಾಗಿದ್ದರೂ ಮಗು ತನ್ನ ಆಸ್ಪತ್ರೆಯಲ್ಲಿ ಜನಿಸಿದೆ ಎಂದು ಮಗು ದತ್ತು ಪಡೆದಿದ್ದ ಮುಂಬೈ ಮೂಲದ ದಂಪತಿಗೆ ತಿಳಿಸಿರೋದಾಗಿ ವರದಿಯಾಗಿದೆ. ಮಗು ಮುಂಬೈನಲ್ಲೇ ಜನಿಸಿದೆ ಎಂದು ತೋರಿಸುವ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮುಂಬೈ ಮೂಲದ ಕುಟುಂಬವೊಂದಕ್ಕೆ ದತ್ತು ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ವೈದ್ಯನಿಗೆ ಜಾಮೀನು ಸಿಕ್ಕಿದ್ದು, ಮಗು ದತ್ತು ಪಡೆದ ಪೋಷಕರನ್ನೂ ವಿಚಾರಣೆ ನಡೆಸಲಾಗ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








