Covid : ನಾಲ್ಕು ತಿಂಗಳ ಹಸುಗೂಸು ಕೋವಿಡ್ ಗೆ ಬಲಿ
ಬೆಂಗಳೂರು : ನಗರದಲ್ಲಿ ನಾಲ್ಕು ದಿನದ ಹಸುಗೂಸು ಕೋವಿಡ್ ಮಾರಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.. ತೀವ್ರ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ..
ರಾಜ್ಯದಲ್ಲಿಂದು ಒಟ್ಟು 50 ಮಂದಿ ಕೋವಿಡ್ ಗೆ ಬಲಿಯಾಗಿದ್ದು, ಬೆಂಗಳೂರಲ್ಲೇ 15 ಮಂದಿ ಮೃತಪಟ್ಟಿದ್ದು , ಸಾವನಪ್ಪಿದವರ ಪೈಕಿ 4 ದಿನದ ಮಗುವೂ ಕೋವಿಡ್ ಮಹಾಮಾರಿಗೆ ಸಾವನಪ್ಪಿದೆ..
ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿದ್ರೂ, ಸಾವಿನ ಪ್ರಮಾಣ ಇಳಿಕೆಯಾಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ..
ದೇಶದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗ್ತಿದ್ದರೂ ಸಾವಿನ ಸಂಖ್ಯೆ ಸುಮಾರು 1000 ದಾಖಲಾಗ್ತಿರುವುದು ಆತಂಕಕ್ಕೆ ಕಾರಣವಾಗಿದೆ..
ಇದೀಗ ಮಕ್ಕಳನ್ನ , ಅದ್ರಲ್ಲೂ ಹಸುಗೂಸುಗಳನ್ನ ಕೋವಿಡ್ ಕಾಡಲಾರಂಭಿಸಿದ್ದು , ಪೋಷಕರಲ್ಲಿ ಆತಂಕ ಹೆಚ್ಚಾಗಿದೆ..
ಜನವರಿ 31 ಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಫೆಬ್ರವರಿ 1 ಕ್ಕೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಅಲ್ಲದೇ ಈ ಮಗುವಿಗೆ ಹೃದಯ ಸಂಬಂಧಿತ ಖಾಯಿಲೆಯಿತ್ತು ಎನ್ನಲಾಗಿದೆ. ಜೊತೆಗೆ ಕೋವಿಡ್ ಪಾಸಿಟಿವ್ ಆದ ಕಾರಣ ತೀವ್ರ ಉಸಿರಾಟ ಸಮಸ್ಯೆ ಉಲ್ಬಣಗೊಂಡಿದೆ.