ಸಂಸತ್ತಿನಲ್ಲಿ ಕೋವಿಡ್ ಭೀತಿ : 875 ಸಿಬ್ಬಂದಿಗೆ ಕೊರೊನಾ ಪಾಸಿಟಿವ್…..
ಜನವರಿ 31 ರಂದು ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ಸದನದ ಕನಿಷ್ಠ 875 ಸಿಬ್ಬಂದಿ, ಹಾಗೆಯೇ ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಕರೋನಾ ಪಾಸಿಟಿವ್ ಬಂದಿದೆ ಎಂದು ಎಂದು ಸಂಸತ್ತಿನ ಕಾರ್ಯದರ್ಶಿ ತಿಳಿಸಿದ್ದಾರೆ.
ವೆಂಕಯ್ಯನಾಯ್ಡು ಅವರು ಒಂದು ವಾರಗಳ ಕಾಲ ಹೈದರಾಬಾದ್‌ನಲ್ಲಿ ಸ್ವಯಂ- ಐಸೋಲೇಟ್ ಆಗಿರುತ್ತಾರೆ. “ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರಿಗೆ ನಿನ್ನೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. Covid outbreak in Parliament: 875 staff members test positive
ತನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಐಸೋಲೇಟ್ ಆಗುವಂತೆ ಮತ್ತು ಪರೀಕ್ಷೆಗೆ ಒಳಪಡುವಂತೆ ಅವರು ಸಲಹೆ ನೀಡಿದ್ದಾರೆ ”ಎಂದು ಅವರ ಸಚಿವಾಲಯ ಭಾನುವಾರ ಟ್ವೀಟ್‌ನಲ್ಲಿ ತಿಳಿಸಿದೆ. ವೆಂಕಯ್ಯನಾಯ್ಡು ರವರು ಇದು ಎರಡನೇ ಬಾರಿಗೆ ಕರೋನಾ ಸೋಕಿಗೆ ತುತ್ತಾಗಿದ್ದಾರೆ.
ಬಜೆಟ್ ಅಧಿವೇಶನದ ಮೊದಲು, ಸಂಸತ್ತಿನ ಸಂಕೀರ್ಣದಲ್ಲಿ 2,847 ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ಮತ್ತು 875 ಸಿಬ್ಬಂದಿ ಕರೋನಾ ದೃಢಪಟ್ಟಿದೆ.
ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 8 ರವರೆಗೆ ಮೊದಲಾರ್ಧದ ನಂತರ ಸುಮಾರು ತಿಂಗಳ ವಿರಾಮದ ಬಳಿಕ ನಡೆಯಲಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಲಾಗುವುದು ಮತ್ತು ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.