ಕೆಲವೇ ನಿಮಿಷಗಳಲ್ಲಿ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿನ ದೋಷ ಸರಿ ಮಾಡಿಕೊಳ್ಳುವುದು ಹೇಗೆ..?

1 min read

ಕೆಲವೇ ನಿಮಿಷಗಳಲ್ಲಿ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿನ ದೋಷ ಸರಿ ಮಾಡಿಕೊಳ್ಳುವುದು ಹೇಗೆ..?

ನವದೆಹಲಿ :  ದೇಶಾದ್ಯಂತ ಕೋವಿಡ್ 2ನೇ ಅಲೆ ತಾಂಡವದ ನಡುವೆ ಲಸಿಕೆ ಅಭಿಯಾನವು ಬಿರುಸಿನಿಂದ ಸಾಗ್ತಿದೆ.. ಈ ನಡುವೆ ಕೊರೊನಾ ಲಸಿಕೆ ಸ್ವೀಕರಿಸಿದವರಿಗೆ ಆನ್‍ಲೈನ್ ಮೂಲಕ ನೀಡುವ ಪ್ರಮಾಣ ಪತ್ರದಲ್ಲಿ ಕೆಲ ದೋಷಗಳು ಕಂಡು ಬರುತ್ತಿದೆ..

ಆದ್ರೆ ಇನ್ಮುಂದೆ ಇಂತಹ ಸಮಸ್ಯೆಗಳನ್ನ ಕ್ಷಣ ಮಾತ್ರದಲ್ಲೇ  ಸರಿ ಪಡಿಸಿಕೊಳ್ಲಬಹುದು. ಹೌದು.. ಜನ್ಮ ವರ್ಷ, ಹೆಸರು, ಲಿಂಗದಲ್ಲಿ ಆಗಿರುವ ತಪ್ಪುಗಳನ್ನು ಬಳಕೆದಾರರೇ ಕೋವಿನ್ ವೆಬ್‍ಸೈಟ್‍ಗೆ ಹೋಗಿ ಎಡಿಟ್ ಮಾಡಬಹುದು. ವಿದೇಶಗಳು ತಮ್ಮ ದೇಶಕ್ಕೆ ಬರುವ ಪ್ರಯಾಣಿಕರಿಗೆ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಿದೆ.  ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈಗ ತಪ್ಪನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಲಸಿಕೆಯ ಪ್ರಮಾಣಪತ್ರದಲ್ಲಿರುವ ವರ್ಷ, ಲಿಂಗ, ಹೆಸರುಗಳು ಪಾಸ್‍ಪೋರ್ಟ್ ನಲ್ಲಿರುವ ವಿವರಗಳಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಜನರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಸ್ವೀಕರಿಸಿದ ಆರೋಗ್ಯ ಇಲಾಖೆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಸರಿ ಪಡಿಸಿಕೊಳ್ಳುವುದು ಹೇಗೆ…?

ಮೊದಲಿಗೆ @WWW,COWIN.GOV.IN ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ದೂರವಾಣಿ ಸಂಖ್ಯೆಯನ್ನ ನೊಂದಾಯಿಸಿಕೊಳ್ಳಬೇಕು.. ಇದಾದ ನಂತರ ನಿಮ್ಮ ಮೊಬೈಲ ನಂಬರ್ ಗೆ 6 ಸಂಖ್ಯೆಯ ಒಟಿಟಿ ನಂಬರ್ ಬರುತ್ತದೆ..  ಆ ನಂಬರ್  ಅನ್ನ ಹಾಕಿ Verify & Proceed ಒತ್ತಿ. ನಂತರ  ಅಕೌಂಟ್ ಡಿಟೇಲ್ಸ್ ಗೆ ಹೋಗಬೇಕು.ಅಲ್ಲಿ ಒಂದು ವೇಳೆ  ನೀವು ಲಸಿಕೆ ತೆಗೆದುಕೊಂಡರೆ Raise an Issue  ಕ್ಲಿಕ್ ಮಾಡಬೇಕು.. ನಂತರ ‘What is the issue?’ ಎಂದು ಕೆಳಲಾಗುತ್ತದೆ. ಆಗ ‘Correction in certificate’ ಅನ್ನೋ ಆಪ್ಷನ್ ಕ್ಲಿಕ್ ಮಾಡಿ.  ಏನು ತಪ್ಪಾಗಿದೆಯೋ ಅದನ್ನು ಸರಿಪಡಿಸಿಕೊಳ್ಳಬಹುದು. ಸರಿ ಮಾಡಿದ ಬಳಿಕ ಎಲ್ಲ ಮಾಹಿತಿ ಸರಿಯಾಗಿರುವ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd