‘ಕೊರೊನಾ ವೈರಸ್ ಜಗತ್ತಿಗೆ ಹರಡಿರುವುದು ವುಹಾನ್ ಲ್ಯಾಬ್ ನಿಂದಲೇ ‘ – ಯೂರೋಪ್ ವಿಜ್ಞಾನಿಗಳು
ಕೊರೊನಾ ವೈರಸ್ ಹರಡಿದ್ದು, ಎಲ್ಲಿಂದ ಎಂಬ ಹಲವಾರು ವಾದ ವಿವಾದಗಳು ಚರ್ಚೆಗಳು ಆಗಾಗ ನಡೆಯುತ್ತಲೇ ಇರುತ್ತವೆ.. ಅದು ಅಲ್ಲದೇ ಇತ್ತೀಚೆಗೆ ಚೀನಾ ವಿರುದ್ಧ ಅನೇಕ ಸಾಕ್ಷಿಗಳು ಲಣ್ಯವಾಗಿದ್ದು, ಚೀನಾದ ವುಹಾನ್ ನ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗ್ತಿದೆ.. ಇತ್ತೀಚೆಗಷ್ಟೇ 2019 ಅಂದ್ರ ಕೋವಿಡ್ ಆರಂಭದಲ್ಲೇ ವುಹಾನ್ ನ ಮೂವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಂಬ ಅಂಶ ಬಹಿರಂಗವಾಗಿತ್ತು.. ಇದಾದ ನಂತರ ಚೀನಾದ ಮೇಲೆ ಅನುಮಾನಗಳ ಮತ್ತಷ್ಟು ಹೆಚ್ಚಾಗಿದ್ದವು..
ಮತ್ತೊಂದೆಡೆ ಚೀನಾದ ವಿರುದ್ಧ ಅನುಮಾನಗಳನ್ನ ಹೊರಹಾಕುತ್ತಲೇ ತನಿಖೆಗೆ ಆಗ್ರಹಿಸುತ್ತಿರುವ ಅಮೆರಿಕಾ ವಿರುದ್ಧ ಚೀನಾ ಕೆಂಡ ಕಾರ್ತಿದೆ.. ಅಲ್ಲದೇ 2015 – 2016ರಲ್ಲೇ ಚೀನಾ ಕೊರೊನಾ ಮಾಹಾಮಾರಿಯ ಬಗ್ಗೆ ಚರ್ಚೆ ನಡೆಸಿತ್ತು… ಜೆನೆಟಿಕ್ ವಾರ್ ನ ತಯಾರಿ ನಡೆಸಿತ್ತು ಎಂದು ಅಮೆರಿಕಾ ವರದಿ ಮಾಡಿತ್ತು.. ಇದ್ರಿಂದಾಗಿ ಅಮೆರಿಕಾ ವಿರುದ್ಧ ಚೀನಾ ಆಕ್ರೋಶ ಹೆಚ್ಚಾಗಿದೆ..
ಇನ್ನೂ ಕೊರೊನಾ ಮಾಹಾಮಾರಿ ವುಹಾನ್ ನ ಮಾಂಸ ಮಾರುಕಟ್ಟೆಯಿಂದ ಹರಡಿರಬಹುದು ಆದ್ರೆ ಅದನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೆ ಚೀನಾ ತಯಾರಿಲ್ಲ. ಈವರೆಗೂ ಆ ಬಗ್ಗೆ ವಾದ ಮಾಡುತ್ತಲೇ ಬಂದಿದೆ.. ಜೊತೆಗೆ ಇದು ಮಾಂಸ ಮಾರುಕಟ್ಟೆಯಿಂದ ಹರಡಿರುವ ಸಾಧ್ಯತೆಯಿದೆ ಆದ್ರೆ ವುಹಾನ್ ನ ಲ್ಯಾಬ್ ನಿಂದ ಹರಡಿಲ್ಲ ಎನ್ನುತ್ತಲೇ ವಾದಿಸಿದೆ.. ಆದ್ರೆ ಅಮೆರಿಕಾವು ಇದನ್ನ ಒಪ್ಪೋದಕ್ಕೆ ತಯಾರಿಲ್ಲ.
ಇದೀಗ ಚೀನಾದ ವುಹಾನ್ ನ ಲ್ಯಾಬ್ ನಿಂದಲೇ ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿದೆ. ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗುವ ಸಾರ್ಸ್–ಕೋವ್–2 ವೈರಾಣು ಅನ್ನು ಚೀನಾದ ವಿಜ್ಞಾನಿಗಳೇ ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ್ದರು ಎಂದು ಯುರೋಪ್ ನ ಇಬ್ಬರು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಪುಟಗಳ ಸಂಶೋಧನಾ ಪ್ರಬಂಧದಲ್ಲಿ ಬ್ರಿಟನ್ ಪ್ರಾಧ್ಯಾಪಕ ಅಂಗಸ್ ಡಲ್ಗಲಿಷ್ ಮತ್ತು ನಾರ್ವೆ ವಿಜ್ಞಾನಿ ಬರ್ಗರ್ ಸೊರೆನ್‌ಸೆನ್ ಅವರು ಈ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ಕೋವಿಡ್–19 ಮಾದರಿಗಳಲ್ಲಿ ‘ವಿಭಿನ್ನ ಬೆರಳಚ್ಚುಗಳು’ ಪತ್ತೆಯಾಗಿವೆ. ಪ್ರಯೋಗಾಲಯದಲ್ಲಿ ತಿರುಚಿದರೆ ಮಾತ್ರ ಈ ರೀತಿಯ ಮಾದರಿಗಳು ದೊರೆಯಲು ಸಾಧ್ಯ ಎಂದು ಬ್ರಿಟನ್‌ನ ದಿನಪತ್ರಿಕೆ ‘ಡೇಲಿ ಮೇಲ್’ ಸಂಶೋಧನಾ ಪ್ರಬಂಧದ ಆಧಾರದ ಮೇಲೆ ವಿಶೇಷ ವರದಿ ಮಾಡಿದೆ.
ಚೀನಾದ ಪ್ರಯೋಗಾಲಯಗಳಲ್ಲಿನ ಮಾಹಿತಿಯನ್ನು ಉದ್ದೇಶ ಪೂರ್ವಕವಾಗಿ ಮರೆಮಾಚುವ ಅಥವಾ ನಾಶಪಡಿಸುವ ಪ್ರಯತ್ನ ಮಾಡಲಾಗಿದೆ. ಇಂತಹ ಚಟುವಟಿಕೆಗಳ ಬಗ್ಗೆ ಮಾತನಾಡಿದ ವಿಜ್ಞಾನಿಗಳು ಅಪಾಯ ಸ್ಥಿತಿ ಎದುರಿಸುತ್ತಿದ್ದಾರೆ.
ವುಹಾನ್ ಪ್ರಯೋಗಾಲಯದಲ್ಲಿ ಕೋವಿಡ್–19 ವೈರಸ್ ಸೃಷ್ಟಿಸಲಾಗಿತ್ತು. ನೈಸರ್ಗಿಕವಾದ ವೈರಸ್ ಅನ್ನು ಅತಿ ಹೆಚ್ಚು ಸೋಂಕು ಹರಡುವಂತೆ ಮಾಡುವ ಯೋಜನೆ ಸಂದರ್ಭದಲ್ಲಿ ಈ ವೈರಸ್ ಸೃಷ್ಟಿಸಲಾಗಿದೆ ಎಂದು ವಿಜ್ಞಾನಿಗಳಾದ ಡಲ್ಗಲಿಷ್ ಮತ್ತು ಬರ್ಗರ್ ಸೊರೆನ್‌ಸೆನ್ ಅಭಿಪ್ರಾಯಪಟ್ಟಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.