ರಾಜ್ಯದ ಜನರಿಗೆ ಮತ್ತೊಂದು ಶಾಕ್… ಇಷ್ಟಕ್ಕೆ ನಿಲ್ಲಲ್ಲಾ ಹೆಮ್ಮಾರಿ ಆರ್ಭಟ.. 3ನೇ ಅಲೆ ಅಪ್ಪಳಿಸಲಿದೆ.. !
ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಅಬ್ಬರಕ್ಕೆ ಜನ ತತ್ತರಿಸಿಹೋಗಿದ್ದಾರೆ. ಬೆಡ್ ಕೊರತೆ , ಆಕ್ಸಿಜನ್ ಕೊರತೆ ಸಾವು ನೋವುಗಳೇ ಕಂಡು ಬರುತ್ತಿರುವ ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ವೈದ್ಯರು ಮತ್ತೊಂದು ಆಘಾತಕಾರಿ ವಿಚಾರ ಬಹಿರಂಗ ಪಡಿಸಿದ್ಧಾರೆ. ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಇನ್ನೂ 15 ದಿನಗಳ ಕಾಲ ಹೀಗೆ ಮುಂದುವರೆಯುತ್ತದೆ ಎಂದು ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ 2 ನೇ ಅಲೆಯ ತೀಕ್ಷ್ಣತೆ ಇನ್ನೂ 15 ದಿನ ಇರಲಿದ್ದು, ನಂತರ ಕಡಿಮೆಯಾಗಬಹುದು. ಕೊರೊನಾದ 2 ನೇ ಅಲೆಯು ಬಹಳ ವೇಗವಾಗಿ ವ್ಯಾಪಿಸುತ್ತಿದ್ದು, ಇನ್ನೂ 15 ದಿನಗಳ ಕಾಲ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಜೂನ್, ಜುಲೈನಲ್ಲಿ ಕಳೆದ ನವೆಂಬರ್, ಡಿಸೆಂಬರ್ ನಲ್ಲಿದ್ದ ಸ್ಥಿತಿ ಇರಲಿದೆ ಎಂದು ಹೇಳಿದ್ದಾರೆ.
ಈ ಕೊರೊನಾ ಎರಡನೇ ಅಲೆಯು ಜುಲೈನಲ್ಲಿ ಕಡಿಮೆಯಾದರೂ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 3 ನೇ ಅಲೆ ದಾಳಿ ಇಡಲಿದೆ. ಹಾಗಾಗಿ ಜನರು ಮೈಮರೆಯದೇ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಬೇಕು. ಮಾಸ್ಕ್ ಧರಿಸುವುದನ್ನ ಬಿಡಬಾರದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೈ ತೊಳೆಯುವುದು ಯಾವುದನ್ನೂ ಬಿಡಬಾರದು ಎಂದು ಹೇಳಿದ್ದಾರೆ.
ದೇಶದಲ್ಲಿ 2 ಕೋಟಿ ದಾಟಿದ ಸೋಂಕು ಪ್ರಕರಣ – ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಅತಿ ಹೆಚ್ಚು ಸಕ್ರಿಯ ಕೇಸ್ ಗಳು ಪತ್ತೆ