ಬೆಂಗಳೂರಿನಲ್ಲಿ ಕೊರೊನಾ ಹಾವಳಿ – 80 ಅಪಾರ್ಟ್ ಮೆಂಟ್, 70 ಮನೆಗಳು ಸೀಲ್ ಡೌನ್
ಬೆಂಗಳೂರು: ಕೊರೊನಾ 2ನೇ ಅಲೆ ತಗ್ಗಿದ ಬೆನ್ನಲ್ಲೇ ನಿರಾಳರಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಮ್ಮೆ ಆತಂಕ ಶುರುವಾಗಿದೆ.. ದಿನೇ ದಿನೇ ಕೇಸ್ ಗಳ ಸಂಖ್ಯೆ ಮತ್ತೆ ಹೆಚ್ಚಳವಾಗ್ತಿದೆ.. ಈ ನಡುವೆ ಬಿಬಿಎಂಪಿ ನಾನಾ ಕ್ರಮಗಳನ್ನ ತೆಗೆದುಕೊಂಡಿದೆ.. ಅದ್ರಂತೆ 80 ಅಪಾರ್ಟ್ ಮೆಂಟ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಮೂರು ವಲಯಗಳಾಗಿರುವ ಮಹಾದೇವಪುರ, ಯಲಹಂಕ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಕಂಡು ಬಂದಿದ್ದು, 80 ಅಪಾರ್ಟ್ ಮೆಂಟ್ ಗಳನ್ನು ಹಾಗೂ 70 ಮನೆಗಳನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
168 ಕಂಟೇನ್ಮೆಂಟ್ ಝೋನ್ ಪ್ರದೇಶ ಎಂದು ಗುರುತಿಸಲಾಗಿದೆ. ರಾಜಧಾನಿಯಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳಲ್ಲೇ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮತ್ತೆ ಟಫ್ ರೂಲ್ಸ್ ಜಾರಿ ಆತಂಕ ಎದುರಾಗಿದೆ. ಅಲ್ಲದೇ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಕೂಡ ಹೇರಲಾಗಿದೆ.