ಡಿಸೆಂಬರ್ ನಿಂದ ಮಕ್ಕಳ ಮೇಲಿನ ಸೋಂಕಿನ ಬಗ್ಗೆ ಮಾನಿಟರ್ ಮಾಡಲು ನಿರ್ಧಾರ – ರಂದೀಪ್
ಕರೋನಾ ಸೋಂಕು ಮಕ್ಕಳಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ತಿರೋ ಹಿನ್ನೆಲೆ, ಡಿಸೆಂಬರ್ ನಿಂದ ಮಕ್ಕಳ ಮೇಲಿನ ಸೋಂಕಿನ ಬಗ್ಗೆ ಮಾನಿಟರ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.
ಸದ್ಯ ಮಕ್ಕಳ ಸೋಂಕಿನ ಪ್ರಮಾಣ ಶೇಕಡಾ ೧೪ ರಷ್ಟಿದೆ. ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಪ್ರಮಾಣ ಶೇಕಡಾ ೫ ರಷ್ಟಿದೆ. ಅಪಾರ್ಟ್ ಮೆಂಟ್ ಗಳಲ್ಲಿ ಸೋಂಕು ಕಾಣಿಸಿಕೊಳ್ತಿರೋದೇ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ತಿದೆ. ಈಗಾಗಲೇ ಮೂರನೇ ಅಲೆಗೆ ಮಕ್ಕಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ನಿರ್ಮಾಣ ಮಾಡಲಾಗ್ತಿದೆ. 8-18 ವಯಸ್ಸಿನ ಮಕ್ಕಳು ಮಾಸ್ಕ್ ಹಾಕಿಕೊಳ್ಳುವ ಪ್ರಮಾಣ ಕಡಿಮೆ ಇದೆ. ಇದೂ ಕೂಡ ಸೋಂಕು ಕಾಣಿಸಿಕೊಳೋಕೆ ಕಾರಣ. ಮಕ್ಕಳಿಗೆ ಸೋಂಕು ಹರಡೋದು ಅವರ ಪೋಷಕರೇ ಕಾರಣರಾಗ್ತಿದ್ದಾರೆ ಎಂದಿದ್ದಾರೆ. ಅಲ್ಲದೇ ನಗರದಲ್ಲಿ ಡೆಲ್ಟಾ+ ವೈರಸ್ ಹಾವಳಿ ವಿಚಾರವಾಗಿ ಮಾತನಾಡಿರುವ ಅವರು ರಾಜ್ಯ ಡೆಲ್ಟಾ + ವೈರಸ್ ಬಗ್ಗೆ ಮಾತ್ರ ನಿಗಾ ಇಡುವಂತೆ ಸೂಚಿಸಿದೆ. ಸದ್ಯ ನಗರದಲ್ಲಿ ಮೂರು ಡೆಲ್ಟಾ + ವೈರಸ್ ಕಾಣಿಸಿಕೊಂಡಿದೆ ಎಂದಿದ್ದಾರೆ.
ಅಫ್ಗಾನ್ : ಉಗ್ರರನ್ನ ಮದುವೆಯಾಗುವಂತೆ ಅವಿವಾಹಿತ ಮಹಿಳೆಯರಿಗೆ ತಾಲೀಬಾನಿಗಳಿಂದ ಚಿತ್ರಹಿಂಸೆ
ಇದೇ ವೇಳೆ ಕಪ್ಪ ವೈರಸ್ ಬಗ್ಗೆ ಮಾತನಾಡಿ ಹೆಚ್ಚಿನ ಸೋಂಕು ಹರಡೋದಿಲ್ಲ. ತಜ್ಞ ವೈದ್ಯರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟ್ಟು ನಿಟ್ಟಿನ ನಿಯಮ ಜಾರಿಮಾಡಲಾಗ್ತಿದೆ. ಈ ನಿಯಮ ಹೀಗೆ ಮುಂದುವರೆದ್ರೆ ಸೋಂಕಿಗೆ ಬ್ರೇಕ್ ಹಾಕಲು ಸಾಧ್ಯ ಆಗುತ್ತೆ. ನಗರದಲ್ಲಿ 8 ಕಪ್ಪಾ ವೈರಸ್ ಕಾಣಿಸಿಕೊಂಡಿದೆ. ಕಪ್ಪಾ ಬಗ್ಗೆ ಸಾರ್ವಜನಿಕ ರಲ್ಲಿ ಯಾವುದೇ ಭಯ ಪಡುವ ಅಗತ್ಯವಿಲ್ಲ. ಡೆಲ್ಟಾ+ ವೈರಸ್ ನ ವೇರಿಯಂಟ್ ನ ಒಂದು ಭಾಗ. ಕೋವಿಡ್ ನಿಯಮ ಪಾಲನೆ ಮಾಡದಿದ್ರೆ ಅರ್ಧಲಕ್ಷದ ವರೆಗೂ ಸೋಂಕು ಬರಬಹುದು. ಈಗಾಗಲೇ ದೇವಸ್ಥಾನಗಳಿಗೆ ಕಡಿವಾಣ ಹಾಕಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಗಣಪತಿ ಹಬ್ಬ ಸರಳವಾಗಿ ಆಚರಿಸಲು ತೀರ್ಮಾನ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರು ತಿಳಿಸಿದ್ದಾರೆ.