ರಾಜ್ಯದಲ್ಲಿ ಮುಂದುವರೆದ ಕೊರೊನಾ ರಣಕೇಕೆ – 31183 ಜನರಿಗೆ ಪಾಸಿಟಿವ್ , 451 ಮಂದಿ ಬಲಿ
ಬೆಂಗಳೂರು : ರಾಜ್ಯದಲ್ಲಿ ಇoದೂ ಕೂಡ ಕೊರೊನಾ ರಣಕೇಕೆ ಮುಂದುವರೆದಿದೆ. ಇಂದು ಹೊಸದಾಗಿ ರಾಜ್ಯದಲ್ಲಿ 31183 ಜನರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಸೋಂಕಿತರ ಸಂಖ್ಯೆ 23,98,925ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಕಳೆದ 24 ಗಂಟೆಯಲ್ಲಿ 451 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 24658 ಕ್ಕೆ ಏರಿಕೆಯಾಗಿದೆ.
ಇನ್ನೂ ಬೆಂಗಳೂರು ಒಂದ್ರಲ್ಲೇ 8214 ಜನರು ಸೋಂಕಿಗೆ ತುತ್ತಾಗಿದ್ರೆ , 200 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಒಂದೇ ದಿನ 61, 766 ಸೋಂಕಿತರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,194 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 2,57,299 ಜನರಲ್ಲಿ ಸೋಂಕು ಪತ್ತೆಯಾಗಿದೆ.
4,194 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,62,89,290ಕ್ಕೆ ಸೋಂಕಿಗೆ ಬಲಿಯಾದವರ ಸಂಖ್ಯೆ 2,95,525 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ 3,57,630 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೂ 2,30,70,365 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿನ್ನೂ 29,23,400 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಕೊರೊನ ಮಹಾಮಾರಿ: ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”. ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ . ಜನ ನಿಬಿಡ ಪ್ರದೇಶದಿಂದ ದೂರವಿರಿ. ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ. ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ. ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ. ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ. ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.