Covid19 : ದೇಶದಲ್ಲಿ 193 ಹೊಸ ಕೇಸ್ ದಾಖಲು
ಸಾವಿನ ಸಂಖ್ಯೆ 5,30,763 ರಷ್ಟಿದೆ
ಒಟ್ಟಾರೆ ಸೋಂಕಿತರ ಸಂಖ್ಯೆ 4.46 ಕೋಟಿಗೆ ಏರಿಕೆ
ಚೇತರಿಸಿಕೊಂಡವರ ಸಂಖ್ಯೆ 4,41,52,687 ಕ್ಕೆ ಏರಿಕೆ
ಸಾವಿನ ಪ್ರಮಾಣವು ಶೇಕಡಾ 1.19
ಅನೇಕ ತಿಂಗಳುಗಳಿಂದ ಮಹಾಮಾರಿ ಕೋವಿಡ್ ಆತಂಕ ಭಾರತದಲ್ಲಿ ತಗ್ಗಿದೆ.. ಹೀಗಾಗಿ ಮತ್ತೆ ದೇಶ ಸಹಜ ಸ್ಥಿತಿಗೂ ಮರಳಿದೆ.. ಈ ನಡುವೆ ಕಳೆದ 24 ಗಂಟೆಯಲ್ಲಿ ಮತ್ತೆ ಹೊಸದಾಗಿ ಭಾರತದಲ್ಲಿ 193 ಕೇಸ್ ಗಳು ಪತ್ತೆಯಾಗಿದ್ದು , ಒಬ್ಬರು ಮೃತಪಟ್ಟಿದ್ದಾಗಿ ವರದಿಯಾಗಿದೆ..
ಸಾವಿನ ಸಂಖ್ಯೆ 5,30,763ಕ್ಕೆ ತಲುಪಿದೆ..
ದೆಹಲಿಯಿಂದ ಒಂದು ಸಾವು ವರದಿಯಾಗಿದೆ.
ಒಟ್ಟಾರೆ ದೇಶದಲ್ಲಿ ಈವರೆಗೂ ಸೋಂಕಿಗೆ ತುತ್ತಾದವರ ಸಂಖ್ಯೆ 4.46 ಕೋಟಿಗೆ ಏರಿಕೆಯಾಗಿದೆ.
ರಾಷ್ಟ್ರೀಯ COVID-19 ಚೇತರಿಕೆ ದರವು 98.81 ರಷ್ಟು ದಾಖಲಾಗಿದೆ.
ಮಹಾಮಾರಿಯಿಂದ ಚೇತರಿಸಿಕೊಂಡವರ ಸಂಖ್ಯೆ 4,41,52,687 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ.
ಸಚಿವಾಲಯದ ವೆಬ್ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.63 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
covid19 , new 193 cases found in india