ಒಮಿಕ್ರಾನ್ ಸೋಂಕು ಶ್ವಾಸಕೋಶಕ್ಕೆ ಅಷ್ಟೊಂದು ಅಪಾಯಕಾರಿಯಲ್ಲ : ಅಧ್ಯಯನ
ವಿಶ್ವಾದ್ಯಂತ ಅಷ್ಟೇ ಅಲ್ಲ ಭಾರತದಲ್ಲೂ ಕೋವಿಡ್ 3ನೇ ಅಲೆ ಶುರುವಾಗಿಯಾಗಿದೆ.. ಒಮಿಕ್ರಾನ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ.. ಒಮಿಕ್ರಾನ್ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗ್ತಲೇ ಇದೆ..
ಆದ್ರೆ ಕೊರೊನಾ ವೈರಸ್ ರೂಪಾಂತರ ತಳಿ ಒಮಿಕ್ರಾನ್ ಸೋಂಕು ಮನುಷ್ಯರ ಶ್ವಾಸಕೋಶಕ್ಕೆ ಹೆಚ್ಚು ಹಾನಿಯುಂಟಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ. ಿದು ಕೊಂಚ ಸಮಾಧಾನಕರ ಸಂಗತಿಯಾಗಿದೆ..
ಹೌದು ಈ ಸೋಂಕಿನಿಂದಾಗಿ ಶ್ವಾಸಕೋಶಕ್ಕೆ ಹೆಚ್ಚು ಹಾನಿಯಾಗುವುದಿಲ್ಲ ಎನ್ನಲಾಗಿದೆ.. ಅಮೆರಿಕ ಮತ್ತು ಜಪಾನ್ ವಿಜ್ಞಾನಿಗಳ ಒಕ್ಕೂಟದಿಂದ ಇತ್ತೀಚೆಗೆ ಇಲಿಗಳ ಮೇಲೆ ಹೊಸ ಅಧ್ಯಯನ ನಡೆಸಲಾಗಿದ್ದು, ಒಮಿಕ್ರಾನ್ ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಕಡಿಮೆ. ಜತೆಗೆ ಮರಣ ಪ್ರಮಾಣ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ.
ಮನುಷ್ಯರ ಅಂಗಾಂಗಗಳ ಮೇಲೆ ಒಮಿಕ್ರಾನ್ ಸೋಂಕಿನಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಹಾಂಗ್ಕಾಂಗ್ ವಿಶ್ವವಿದ್ಯಾಲಯದ ತಜ್ಞರು ಅಧ್ಯಯನ ಮಾಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ಸೋಂಕಿತರಿಗೆ ಹೋಲಿಸಿದರೆ ಶೇ 80ರಷ್ಟು ಓಮೈಕ್ರಾನ್ ಪೀಡಿತರು ಬೇಗ ಚೇತರಿಸಿಕೊಂಡಿದ್ದಾರೆ. ಅದೇ ರೀತಿ ಇಂಗ್ಲೆಂಡ್ನಲ್ಲಿಯೂ ಕೂಡ ಸೋಂಕಿನ ತೀವ್ರತೆ ಶೇ 70ರಷ್ಟು ಕಡಿಮೆ ಎಂದು ಹೇಳಲಾಗಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟು ಅಧ್ಯಯದ ವರದಿ ಮಾಡಲಾಗಿದೆ..