Covid19 : ಚರ್ಮ , ಪ್ಲಾಸ್ಟಿಕ್ ಮೇಲೆ ಕೊರೊನಾ ಹೆಚ್ಚು ಕಾಲ ಉಳಿಯುತ್ತೆ..!!!
ಜಪಾನ್ : 3 ವರ್ಷಗಳಿಂದ ಮಹಾಮಾರಿಯ ಕಾಟಕ್ಕೆ ಜನ ರೋಸಿ ಹೋಗಿದ್ದಾನೆ.. ಅನೇಕರ ಜೀವಗಳು ಹೋಗಿದೆ.. ಕೊರೊನಾ ವೈರಸ್ ನ ರೂಪಾಂತರ ತಳಿ ಒಮಿಕ್ರಾನ್ 21 ಗಂಟೆಗಳ ಕಾಲ ಚರ್ಮದ ಮೇಲೆ ಮತ್ತು ಎಂಟು ದಿನಗಳಿಗೂ ಹೆಚ್ಚು ಕಾಲ ಪ್ಲಾಸ್ಟಿಕ್ ಮೇಲೆ ಜೀವಂತವಾಗಿರಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಅಲ್ಲದೇ ಇತರ ತಳಿಗಳಿಗೆ ಹೋಲಿಸಿದರೆ ಇದು ವೇಗವಾಗಿ ಹರಡಬಲ್ಲದು ಎಂದೂ ಕೂಡ ತಿಳಿದುಬಂದಿದೆ.. ಜಪಾನ್ ನ ಕ್ಯೋಟೋ ಪ್ರಿಫೆಕ್ಚರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಸಾರ್ವ್–ಕೋವ್2 ತಳಿ ಹಾಗೂ ವೈರಸ್ ನ ಇತರ ಎಲ್ಲ ಅಪಾಯಕಾರಿ ಸೂಚಿತ ತಳಿಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಆದ್ರೆ ಇನ್ನೂ ಅಂತಿಮಗೊಳ್ಳದ ವರದಿಯನ್ನ ಬಯೋಆರ್‌ಎಕ್ಸ್‌ಐವಿ ಮ್ಯಾಕಸೀನ್ ನಲ್ಲಿ ಪ್ರಕಟವಾಗಿದೆ.









