ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ
ಬ್ರಿಟನ್: ವಿಶ್ವಾದ್ಯಂತ ಚೀನಾದಿಂದ ಬಂದಿರುವ ಕೊರೊನಾ ಮಾಹಾಮಾರಿ ಕೋಟ್ಯಾಂತರ ಜನರ ಜೀವ ತೆಗೆದುಕೊಂಡಿದೆ. ಕೋಟಿ ಕೋಟಿ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ನಡುವೆ ಲಸಿಕೆ ಅಭಿಯಾನವೂ ಕೂಡ ಎಲ್ಲೆಡೆ ಬಿರುಸಿನಿಂದ ಸಾಗಿದೆ. ಈ ನಡುವೆ ಬ್ರಿಟನ್ ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗ್ತಿದೆ. ಇದರ ಬೆನ್ನಲ್ಲೇ ಅಮೆರಿಕದ ಮೆರ್ಕ್ಸ್ ಮತ್ತು ರಿಡ್ಜ್ಬ್ಯಾಕ್ ಬಯೋಥೆರಪಿಟಿಕ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಆ್ಯಂಟಿವೈರಲ್ ಮಾತ್ರೆಗೆ ಬ್ರಿಟನ್ ಅನುಮೋದನೆ ನೀಡಿದೆ. ಈ ಮೂಲಕ ವಿಶ್ವದಲ್ಲೇ ಕೋವಿಡ್ ಮಾತ್ರೆಗೆ ಅನುಮೋದನೆ ನೀಡಿದ ಮೊದಲ ದೇಶವಾಗಿ ಹೊರಹೊಮ್ಮಿದೆ.
ಮೊಲ್ನುಪಿರವಿರ್ ಎಂಬ ಔಷಧಿಯನ್ನು ಕೋವಿಡ್-19 ಪಾಸಿಟಿವ್ ದೃಢಪಟ್ಟ ನಂತರ ಸಾಧ್ಯವಾದಷ್ಟು ಬೇಗ ಅಥವಾ ರೋಗಲಕ್ಷಣಗಳು ಆರಂಭವಾದ ಐದು ದಿನಗಳ ಒಳಗೆ ವೈದ್ಯಕೀಯ ದತ್ತಾಂಶ ಆಧರಿಸಿ ಬಳಸಬಹುದು ಎಂದು ಉಲ್ಲೇಖಿಸಿ ಶಿಫಾರಸು ಮಾಡಲಾಗಿದೆ. ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ಚಿಕಿತ್ಸೆಯು ಮುಖ್ಯವಾಗಿ ಲಸಿಕೆಗಳ ಮೇಲಷ್ಟೇ ಕೇಂದ್ರೀಕೃತವಾಗಿತ್ತು. ರೆಮ್ ಡಿಸಿವಿರ್, ಜೆನೆರಿಕ್ ಸ್ಟಿರಾಯಿಡ್ ಅನ್ನು ರೋಗಿ ಆಸ್ಪತ್ರೆಗೆ ಸೇರಿದ ನಂತರ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೋವಿಡ್ ವಿರುದ್ಧ ಹೋರಾಟಕ್ಕೆ ಮಾತ್ರೆ ಬಳಕೆಯ ಪ್ರಯೋಗಕ್ಕೆ ಕೈ ಹಾಕಲಾಗ್ತಿದೆ.
ಕಾನ್ಪುರದಲ್ಲಿ ಹೆಚ್ಚಿದ ಝಿಕಾ ವೈರಸ್ ಪ್ರಕರಣಗಳು
ಪಟಾಕಿ ಹಚ್ಚುವ ವೇಳ ಅವಘಡ | 9 ಮಕ್ಕಳ ಕಣ್ಣಿಗೆ ಹಾನಿ