ವಿಶ್ವಾದ್ಯಂತ ಇಂದು 6.69 ಲಕ್ಷ ಹೊಸ ಪ್ರಕರಣ ಪತ್ತೆ – ಸಕ್ರಿಯ ಕೇಸ್ ಗಳು ಅಮೆರಿಕಾ – ಭಾರತದಲ್ಲೇ ಹೆಚ್ಚು

1 min read
How to overcome weakness after covid 19

ವಿಶ್ವಾದ್ಯಂತ ಇಂದು 6.69 ಲಕ್ಷ ಹೊಸ ಪ್ರಕರಣ ಪತ್ತೆ – ಸಕ್ರಿಯ ಕೇಸ್ ಗಳು ಅಮೆರಿಕಾ – ಭಾರತದಲ್ಲೇ ಹೆಚ್ಚು

ಅಮೆರಿಕಾ :  ವಿಶ್ವಾದ್ಯಂತ ಇಂದು ಒಂದೇ ದಿನ ಬರೋಬ್ಬರಿ 6,69,689 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಈ ಪೈಕಿ ಭಾರತ ಒಂದರಲ್ಲೇ ಅರ್ಧಕ್ಕಿಂತ ಹೆಚ್ಚು ಕೇಸ್ ಗಳು ಕಂಡುಬಂದಿರುವುದು ಆಘಾತಕಾರಿ ಸಂಗತಿಯಾಗಿದೆ. ಇಡೀ ವಿಶ್ವಾದ್ಯಂತ ಇಂದು ಒಂದೇ ದಿನ ಒಟ್ಟು 10,478 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15.4 ಕೋಟಿಗೆ (15,41,75,226) ಏರಿಕೆಯಾಗಿದ್ದು, ಸಾವಿನ ಸಂಖ್ಯೆ 32.26 (3,226,743) ಲಕ್ಷಕ್ಕೆ ತಲುಪಿದೆ.

ಅಮೆರಿಕಾದಲ್ಲಿ ಈವರೆಗೂ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದು ಒಂದೇ ದಿನ ಅಮೆರಿಕಾದಲ್ಲಿ  ಒಟ್ಟು 39,767 ಹೊಸ ಪ್ರಕರಣಗಳು ಪತ್ತೆಯಾಗಿವೆ. 445 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಈ ವರೆಗೂ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ  3.32 ಕೋಟಿಗೆ (3,32,30,561) ಏರಿಕೆಯಾಗಿದೆ. ಸಾವಿನ ಸಂಖ್ಯೆ 5.91 ಲಕ್ಷಕ್ಕೆ (5,91,514) ತಲುಪಿದೆ.

ಒಟ್ಟಾರೆ ಪತ್ತೆಯಾದ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾ ಬಿಟ್ಟರೆ ಭಾರತ 2ನೇ ಸ್ಥಾನದಲ್ಲಿ ಇದ್ದರೂ ಭಾರತ ದೈನಂದಿನ ಕೇಸ್ ಗಳಲ್ಲಿ ಚರಿತ್ರೆ ಸೃಷ್ಟಿಸಿದೆ. ಯಾವ ದೇಶದಲ್ಲೂ ದಿನವೊಂದಕ್ಕೆ ಪತ್ತೆಯಾಗಷ್ಟು ಕೇಸ್ ಗಳು ಭಾರತದಲ್ಲಿ ಪತ್ತೆಯಾಗ್ತಿದೆ.  ದೈನಂದಿನ ಕೇಸ್ ಗಳ ಲೆಕ್ಕಾಚಾರ ಪಡೆದರೆ ಭಾರತವು ಮೊದಲನೇ ಸ್ಥಾನದಲ್ಲಿದೆ.

ಭಾರತದಲ್ಲಿ ಇಂದು  ಹೊಸದಾಗಿ 3.68 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 2 ಕೋಟಿಯ ಸಮೀಪಕ್ಕೆ ಸಾಗಿದೆ. 2.22 ಲಕ್ಷ (2,22,408) ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ 3ನೇ ಸ್ತಾನದಲ್ಲಿ ಬ್ರೆಜಿಲ್‌  ಇದ್ದು, ಇಂದು ಒಂದೇ ದಿನ 36,524 ಹೊಸ ಪ್ರಕರಣಗಳುವರದಿಯಾಗಿವೆ. ಈವರೆಗೂ ಒಟ್ಟು 4,08,829 ಮಂದಿ ಮೃತಪಟ್ಟಿದ್ದಾರೆ.

ವರ್ಲ್ಡೋಮೀಟರ್‌ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ವರದಿಯಾಗಿರುವ ಒಟ್ಟು 15.4 ಕೋಟಿ ಪ್ರಕರಣಗಳ ಪೈಕಿ, ಈವರೆಗೆ ಒಟ್ಟು 13.2 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. 32 ಲಕ್ಷದ 26 ಸಾವಿರ ಮಂದಿ ಮೃತಪಟ್ಟಿದ್ದು, ಇನ್ನೂ 1.86 ಕೋಟಿಗೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಅಮೆರಿಕಾದಲ್ಲಿ 2 ಕೋಟಿ 59 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 67 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.  ಭಾರತದಲ್ಲಿ ಇನ್ನೂ 34.4 ಲಕ್ಷ ಸಕ್ರಿಯ ಪ್ರಕಣಗಳಿವೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd