ಕುಂಭ ಮೇಳ ಪರಿಣಾಮವನ್ನೇ ಎದುರಿಸಲಾಗುತ್ತಿಲ್ಲ.. ಈಗ ಚಾರ್ ಧಾಮ್ ಯಾತ್ರೆಗೆ ಸಿದ್ಧವಾಗಿದೆ ಉತ್ತರಖಂಡ

1 min read

ಕುಂಭ ಮೇಳ ಪರಿಣಾಮವನ್ನೇ ಎದುರಿಸಲಾಗುತ್ತಿಲ್ಲ.. ಈಗ ಚಾರ್ ಧಾಮ್ ಯಾತ್ರೆಗೆ ಸಿದ್ಧವಾಗಿದೆ ಉತ್ತರಖಂಡ

ಉತ್ತರಖಂಡ : ದೇಶಾದ್ಯಂತ ಕೊರೊನಾ ಮಹಾಮಾರಿ ವೇಗವಾಗಿ ಹರಡುತ್ತಿದ್ದು, ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ನಡುವೆ ಇತ್ತೀಚೆಗೆ ಚುನಾವಣಾ ಪ್ರಚಾರ ರ್ಯಾಲಿ ಕುಂಭ ಮೇಳೆದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದ ನಂತರ ಕೇಸ್ ಗಳು ಮತ್ತಷ್ಟು ಹೆಚ್ಚಾಗಿವೆ. ಇಷ್ಟಾದ್ರು ಉತ್ತರಖಂಡ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ.

ಇಂತಹ ಸಮಯದಲ್ಲೂ  ಉತ್ತರಖಂಡದಲ್ಲಿ ಮತ್ತಷ್ಟು ಜನ ಸಾಗರ ಸೇರುವಿಕೆಗೆ ಆಹ್ವಾನ ಮಾಡಿಕೊಡುತ್ತಿದೆ. ಹೌದು ಮೇ 14 ರಿಂದ ಚಾರ್​ಧಾಮ್ ಯಾತ್ರಾ  ಆರಂಭವಾಗಲಿದೆ.  ನಾಲ್ಕು ಮುಖ್ಯ ತೀರ್ಥ ಕ್ಷೇತ್ರಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಭಕ್ತರ ಯಾತ್ರೆಗೆ ಸರ್ಕಾರ ಅವಕಾಶ ನೀಡಿದೆ. ಈ ಯಾತ್ರೆಗೆ ಹೊಸದಾದ ಎಸ್ ​ಒಪಿಯನ್ನು ರೂಪಿಸಿರುವ ಸರ್ಕಾರ, ಕರೊನಾ ಹರಡದಂತೆ ಎಲ್ಲಾ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

ಒಟ್ಟಾರೆ ಇಂತಹ ಸಂದರ್ಭದಲ್ಲಿ  4 ಮಂದಿ ಇಬ್ಬರಿಗಿಂತ ಹೆಚ್ಚು ಜನ ಸೇರಬೇಡಿ , ಸಾಮಾಜಿಕ ಅಂತರ  ಕಾಯ್ದುಕೊಳ್ಳಿ ಮನೆಯಲ್ಲಿರಿ , ಅನಗತ್ಯವಾಗಿ ಹೊರಬರಬೇಡಿ ಮಾಸ್ಕ್ ಧರಿಸಿ ಅಂತ ಹೇಳುವ ಸರ್ಕಾರ ಮತ್ತೊಂದೆಡೆ ಜನಸಾಗರವೇ ಸೇರುವ ಚಾರ್ ಧಾಮ್ ಯಾತ್ರಾಗೆ ಅವಕಾಶ ನೀಡಿರುವುದು  ಎಷ್ಟು ಸರಿ ಅನ್ನುವುದು ಜನರ ಪ್ರಶ್ನೆ..

ಅದ್ರಲ್ಲಿ ಮಾರ್ಗಸೂಚಿ ಬೇರೆ ರಿಲೀಸ್ ಮಾಡಿದ್ದು, ಯಾತ್ರೆಗೆ ಬರುವವರೆಲ್ಲರಿಗೂ ನಾವು ನೆಗೆಟೀವ್ ಆರ್​ಟಿಪಿಸಿಆರ್​ ಟೆಸ್ಟ್ ​ಅನ್ನು ಕಡ್ಡಾಯಗೊಳಿಸಿದ್ದೇವೆ. ಯಾತ್ರೆಯು ನಂಬಿಕೆಯ ಪ್ರಶ್ನೆಯಾಗಿದೆ. ನಾವು ಜಗತ್ತಿನೆಲ್ಲೆಡೆಯಿಂದ ಬರುವ ನಮ್ಮ ಯಾತ್ರಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿದ್ದೇವೆ ಎಂದು ರಾಜ್ಯದ ಪ್ರವಾಸೋದ್ಯಮ ಸಚಿವ ಸತ್ ​ಪಾಲ್ ಮಹರಾಜ್ ಹೇಳಿದ್ದಾರೆ.

ಆಪ್ತಮಿತ್ರ ಸಹಾಯವಾಣಿ ಮೂಲಕ ರೋಗಿಗಳಿಗೆ ಮಾರ್ಗದರ್ಶನ: ಡಾ.ಕೆ.ಸುಧಾಕರ್

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd