‘ಕೊರೊನಾ 3ನೇ ಅಲೆ ತಡೆಗೆ ಇರೋದು ಒಂದೇ ಮಾರ್ಗ : ಲಸಿಕೆ ನೀಡಿಕೆ ವೇಗ ಹೆಚ್ಚಿಸುವುದು’
ಕೊರೊನಾ 2ನೇ ಅಲೆ ಇನ್ನೇನು ಕಡಿಮೆಯಾಗ್ತಿದೆ ಅಂತ ಜನ ನಿಟ್ಟುಸಿರುವ ಬಿಡುತ್ತಿರುವ ಹೊತ್ತಲ್ಲೇ ಕೊರೊನಾ 3ನೇ ಅಪ್ಪಳಿಸುವ ಆತಂಕ ಎದುರಾಗಿದೆ… ಇನ್ನೂ 2-4 ವಾರಗಳಲ್ಲಿ ಅಥವ ಆಗಸ್ಟ್ ವೇಳೆಗೆ 3ನೇ ಅಲೆ ಅಪ್ಪಳಿಸುವುದು ಫಿಕ್ಸ್ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ರಾಜ್ಯಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ಸಹ ಸಡಿಲಿಕೆ ಮಾಡಲಾಗ್ತಿದ್ದು, ಮತ್ತೆ ಜನ ಗುಂಪು ಸೇರುವುದು , ನಿರ್ಲಕ್ಷ್ಯ ವಹಿಸುವ ಸಾಧ್ಯತೆಗಳಿದ್ದು, ಮತ್ತೆ ಕೋವಿಡ್ ಹಾವಳಿ ಹೆಚ್ಚಾಗುವ ಭೀತಿಯೂ ಇದೆ..
ಈ ನಡುವೆ ಕೋವಿಡ್–19ನ ಮತ್ತೊಂದು ಅಲೆಯನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು, ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡಬೇಕು ಎಂದು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಭಾನುವಾರ ಸಲಹೆ ನೀಡಿದೆ.
ಅಲ್ಲದೇ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಪತ್ತೆ ಹಚ್ಚಿ, ಅವರ ಪ್ರತ್ಯೇಕ ವಾಸಕ್ಕೆ ಕ್ರಮ ಕೈಗೊಳ್ಳಬೇಕು. ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸುವ ಜೊತೆಗೆ, ಕೈಗಳ ಶುಚಿತ್ವಕ್ಕೆ ಗಮನ ನೀಡುವುದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ನಿರ್ದೇಶಕಿ ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಲ್ಲೂ, ಕೊರೊನಾ ವೈರಸ್‌ನ ರೂಪಾಂತರ ತಳಿಗಳು ವೇಗವಾಗಿ ಪ್ರಸರಣವಾಗುತ್ತಿರುವುದು ಕಂಡುಬಂದಿರುವ ಪ್ರದೇಶಗಳಲ್ಲಿ ಈ ಕ್ರಮಗಳನ್ನು ದೀರ್ಘ ಕಾಲದ ವರೆಗೆ ಪಾಲಿಸುವುದು ಮುಖ್ಯ ಎಂದೂ ಹೇಳಿದ್ದಾರೆ.
ಕೊರೊನಾದಿಂದ ಬಲಿಯಾದ ಕುಟುಂಬಕ್ಕೆ ಪರಿಹಾರ ಅಸಾಧ್ಯ – ಕೇಂದ್ರ ಸರ್ಕಾರ
ದೇಶದಲ್ಲಿ ಒಟ್ಟು 29 ಕೋಟಿ ಡೋಸ್ ಲಸಿಕೆ ಪೂರೈಕೆ
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 58,419 ಕೇಸ್ ಪತ್ತೆ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








