ಕೋವಿಡ್ ಲಸಿಕೆ – ಗರ್ಭಿಣಿ ಮಹಿಳೆಯರಿಗೆ ಗುಡ್ ನ್ಯೂಸ್..!
ದೇಶಾದ್ಯಂತ ಹೆಮ್ಮಾರಿ ಆತಂಕದ ನಡುವೆ ಲಸಿಕೆ ಅಭಿಯಾನವೂ ಕೂಡ ವೇಗ ಪಡೆದಿದೆ. ಈ ನಡುವೆ ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯಲು ಹಿಂದೆ ಮುಂದೆ ಯೋಚನೆ ಮಾಡುತ್ತಿರುವಾಗ್ಲೇ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದ್ರೆ ಫಿಜರ್-ಬಯೋಎನ್ಟೆಕ್ ಅಥವಾ ಮೊಡೆರ್ನಾ ಕೋವಿಡ್-19 ಲಸಿಕೆ ಪಡೆದ ಗರ್ಭಿಣಿಯರಿಂದ ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಬೆಳವಣಿಗೆ ಆಗಿದೆ ಎಂದು ಅಧ್ಯಯನ ವರದಿ ಹೇಳಿದೆ.
ಬಿಜೆಪಿ ಸರ್ಕಾರ ತಾಲಿಬಾನ್ ಸರ್ಕಾರ, ದೇಶ ಮುನ್ನಡೆಸೋದಕ್ಕೆ ಬರಲ್ಲ : ದೀದಿ
ಹವದು 36 ನವಜಾತ ಶಿಶುಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ನವಜಾತ ಮಗುವು ಗರ್ಭಾವಸ್ಥೆಯಲ್ಲಿದ್ದಾಗ ತಾಯಿಯು ಕೋವಿಡ್-19 ಲಸಿಕೆ ಪಡೆದಿದ್ದರು. ಇದರಿಂದ ಗರ್ಭಿಣಿ ಮಾತ್ರವಲ್ಲ, ಹೊಟ್ಟೆಯಲ್ಲಿರುವ ಮಗುವೂ ಕೂಡ ಸುರಕ್ಷಿತ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ಭಾರತಕ್ಕೆ ಮರಳಿತು 157 ಪುರಾತನ ವಸ್ತುಗಳು ವಾಪಸ್ – ಅಮೆರಿಕಾದಿಂದ ಹಸ್ತಾಂತರ
ಹೆರಿಗೆ ಮತ್ತು ಗರ್ಭ ಶಾಸ್ತ್ರಕ್ಕೆ ಸಬಂಧಿಸಿದ ಅಮೆರಿಕನ್ ಜರ್ನಲ್ ಆಫ್ ಅಬ್ಸ್ಟೆಟ್ರಿಕ್ಸ್ ಆ್ಯಂಡ್ ಗೈನೆಕಾಲಜಿ ಎಂಎಫ್ಎಂನಲ್ಲಿ ಈ ವರದಿ ಪ್ರಕಟಗೊಂಡಿದೆ. ಇನ್ನೂ ಪ್ರತಿಕಾಯಗಳನ್ನು ಉತ್ಪಾದಿಸಲು ಪ್ರಚೋದಿಸುವಂತಹ ಗುಣಲಕ್ಷಣಗಳು ಮತ್ತು ನಿರ್ದಿಷ್ಟ ಸೋಂಕಿನಿಂದ ರಕ್ಷಣೆ ನೀಡುವ ರಕ್ತದ ಪ್ರೋಟಿನ್ಗಳು ನವಜಾತ ಶಿಶುಗಳಲ್ಲಿ ಇರುವುದನ್ನು ಅಧ್ಯಯನದಲ್ಲಿ ಕಂಡುಕೊಂಡಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.