“ದೀರ್ಘಕಾಲೀನ ಕೋವಿಡ್ 200ಕ್ಕೂ ಅಧಿಕ ಲಕ್ಷಣಗಳನ್ನು ಹೊಂದಿದೆ”..!
ನವದೆಹಲಿ : ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಳ ಆಕಂತ ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ನಡುವೆ ದೀರ್ಘಕಾಲೀನ ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳು 200ಕ್ಕೂ ಅಧಿಕ ಲಕ್ಷಣಗಳನ್ನು ಪ್ರಕಟಿಸುತ್ತಾರೆ ಎಂದು ಲ್ಯಾನ್ಸೆಟ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನದಿಂದ ಬಹಿರಂಗವಾಗಿದೆ.. ಯುನಿವರ್ಸಿಟಿ ಕಾಲೇಜ್ ಲಂಡನ್ ನ ವಿಜ್ಞಾನಿಗಳ ನೇತೃತ್ವದಲ್ಲಿ ನಡೆದ ಅಧ್ಯಯನವು 56 ದೇಶಗಳ 3,762 ಕೋವಿಡ್ ರೋಗಿಗಳನ್ನು ಸಮೀಕ್ಷೆಗೊಳಪಡಿಸಿತ್ತು. ದೀರ್ಘಕಾಲೀನ ಕೋವಿಡ್‌ನ ಅತ್ಯಂತ ಸಾಮಾನ್ಯ ಲಕ್ಷಣಗಳು ಆಯಾಸ, ಪರಿಶ್ರಮದ ನಂತರದ ಅಸ್ವಸ್ತತೆಯಿಂದ ಹಿಡಿದು ಭ್ರಾಂತಿಗಳು, ನಡುಕ ಮತ್ತು ಕಿವಿಮೊರೆತದವರೆಗೆ ವ್ಯಾಪಿಸಿರುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಚರ್ಮದಲ್ಲಿ ತುರಿಕೆ, ಋತುಚಕ್ರದಲ್ಲಿ ಬದಲಾವಣೆಗಳು, ಲೈಂಗಿಕ ನಿಶ್ಶಕ್ತಿ, ಹೃದಯ ಬಡಿತದಲ್ಲಿ ಏರಿಳಿತ, ಜ್ಞಾಪಕ ಶಕ್ತಿ ನಷ್ಟ, ಮಸುಕಾದ ದೃಷ್ಟಿ ಮತ್ತು ಅತಿಸಾರ ಇವು ಅಧ್ಯಯನದಲ್ಲಿ ಕಂಡು ಬಂದಿರುವ ಇತರ ಲಕ್ಷಣಗಳಾಗಿವೆ.
ಸಂಶೋಧಕರು ವೆಬ್ ಆಧಾರಿತ ಸಮೀಕ್ಷೆಯನ್ನು ನಡೆಸಿದ್ದು, ಈ ಪ್ರಕ್ರಿಯೆಯನ್ನು ದೀರ್ಘಕಾಲೀನ ಕೋವಿಡ್ ಅನ್ನು ಹೊಂದಿದ್ದಾರೆ ಎಂದು ದೃಢಪಟ್ಟ ಅಥವಾ ಶಂಕಿತ ರೋಗಿಗಳಲ್ಲಿ ಲಕ್ಷಣಗಳನ್ನು ನಿರೂಪಿಸಲು ಸಾಧ್ಯವಾಗುವಂತೆ ರೂಪಿಸಲಾಗಿತ್ತು. ಶರೀರದ 10 ಅಂಗ ವ್ಯವಸ್ಥೆಗಳಲ್ಲಿ ಈ ಲಕ್ಷಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂರನೇ ಒಂದರಷ್ಟು ಲಕ್ಷಣಗಳು ಕನಿಷ್ಠ ಆರು ತಿಂಗಳುಗಳ ಕಾಲ ರೋಗಿಗಳನ್ನು ಕಾಡಿದ್ದವು. ಸಮೀಕ್ಷಗೊಳಪಟ್ಟವರಲ್ಲಿ ಒಟ್ಟು 2,454 ರೋಗಿಗಳಲ್ಲಿ ಲಕ್ಷಣಗಳು ಆರು ತಿಂಗಳಿಗೂ ಹೆಚ್ಚು ಮುಂದುವರಿದಿದ್ದವು ಮತ್ತು ಸರಾಸರಿ 9.1 ಅಂಗ ವ್ಯವಸ್ಥೆಗಳಲ್ಲಿ ಸರಾಸರಿ 55.9 ಲಕ್ಷಣಗಳನ್ನು ಅನುಭವಿಸಿದ್ದರು ಎಂದು ಅಧ್ಯಯನ ವರದಿಯು ತಿಳಿಸಿದೆ.
ತಮ್ಮ ಲಕ್ಷಣಗಳು ಕೋವಿಡ್-19ಗೆ ಸಂಬಂಧಿಸಿದ್ದೇ ಎನ್ನುವುದು ಖಚಿತವಿಲ್ಲದೆ ಮೌನವಾಗಿ ನರಳುತ್ತಿರುವ ಸಾವಿರಾರು ದೀರ್ಘಕಾಲೀನ ಕೋವಿಡ್ ರೋಗಿಗಳಿರುವ ಸಾಧ್ಯತೆಯಿದೆ ಎಂದು ಯುಸಿಎಲ್‌ನ ನ್ಯೂರೋಸೈಂಟಿಸ್ಟ್ ಹಾಗೂ ವರದಿಯ ಲೇಖಕ ಅಥೆನಾ ಅಕ್ರಮಿ ಹೇಳಿದ್ದಾರೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.