ಹಸಿವಿನ ಹೊಟ್ಟೆಯಲ್ಲಿ 77 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಪತ್ತೆ..!
ಗುಜರಾತ್ : ಮನುಷ್ಯರ ಬೇಡಿಕೆ, ಮನುಷ್ಯರು , ತಮ್ಮ ಉಪಯೋಗಕ್ಕೋಸ್ಕರ ಅನೇಕ ಪ್ರಕೃತಿಗೆ ವಿರುದ್ಧವಾದಂತಹ ಕೆಲ ವಸ್ತುಗಳನ್ನೂ ಅವಲಂಬಿಸಿದ್ದೇವೆ.. ಈ ಪೈಕಿ ಪ್ಲಾಸ್ಟಿಕ್ ಸಹ ಒಂದು.. ಒಂದ್ ಕಡೆ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ನಾನಾ ಕ್ರಮ ಕೈಗೊಳ್ತಿದ್ರು, ಪ್ಲಾಸ್ಟಿಕ್ ಬಳಕೆ ಕಡಿಮೆಯಾಗ್ತಿಲ್ಲ.. ಆದ್ರೆ ಇದ್ರಿಂದಾಗಿ ಹೆಚ್ಚು ಸಮಸ್ಯೆ ಅನುಭವಿಸುತ್ತಿರೋದು ಮೂಕ ಪ್ರಾಣಿಗಳು.. ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ ಅದರ ಬಳಕೆ ಮಾತ್ರ ಇನ್ನೂ ನಿಂತಿಲ್ಲ.
ಆಗಾಗ ಹೆಚ್ಚಾಗಿ ಹಸುಗಳು ಪ್ಲಾಸ್ಟಿಕ್ ಗಳನ್ನ ಸೇವನೆ ಮಾಡಿ ಸಾವನಪ್ಪಿರೋ ಅನೇಕ ಘಟನೆಗಳು ಬೆಳಕಿಗೆ ಬಂದಿವೆ.. ಅಂತೆಯೇ ಇದೀಗ ಗುಜರಾತ್ ನಲ್ಲಿ ಹಸುವೊಂದರ ಹೊಟ್ಟೆಯಿಂದ ಶಶ್ಸತ್ರಚಿಕಿತ್ಸೆಯ ಮೂಲಕ ಬರೋಬ್ಬರಿ 77 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಕ್ಕೆ ತೆಗೆಯಲಾಗಿದೆ. ಐಸ್ ಕ್ರೀಂ ಕಪ್, ಚಮಚಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಹಸುವಿನ ಹೊಟ್ಟೆಯೊಳಗೆ ಸಿಕ್ಕಿದೆ. ಇದನ್ನು ಗುಜರಾತ್ ನ ಆನಂದ್ ಜಿಲ್ಲೆಯ ಪಶುವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆ ಬದಿ ಅಸ್ವಸ್ಥಗೊಂಡಿದ್ದ ಹಸುವನ್ನು ಆನಂದ್ನಲ್ಲಿರುವ ಪಶು ಆಸ್ಪತ್ರೆಗೆ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಕರೆದೊಯ್ದಿತ್ತು. ಈ ವೇಳೆ ಹಸುವನ್ನು ಪರೀಕ್ಷಿಸಿದ ವೈದ್ಯರು, ಹಸು ಪ್ಲಾಸ್ಟಿಕ್ ತ್ಯಾಜ್ಯ ತಿಂದಿರುವುದಾಗಿ ತಿಳಿದು ಬರೋಬ್ಬರಿ ಎರಡೂವರೆ ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆಯಲಾಗಿದೆ.