ಹೆಚ್.ಡಿ.ಕುಮಾರಸ್ವಾಮಿ ಕೂಡ ಇಸ್ಪೀಟ್ ಆಡ್ತಾರೆ : ಸಿ.ಪಿ.ಯೋಗೇಶ್ವರ್
ಬೆಂಗಳೂರು : ಇಸ್ಪೀಟ್ ಹಣದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಅನ್ನೋ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಸಿ.ಪಿ ಯೋಗೇಶ್ವರ್ ‘ ಕುಮಾರಸ್ವಾಮಿ ಕೂಡ ಇಸ್ಪೀಟ್ ಆಡ್ತಾರೆ. ಅದರ ಫೋಟೋಗಳು ನನ್ನ ಹತ್ರ ಇದೆ ಎಂದು ಟಾಂಗ್ ನೀಡಿದ್ದಾರೆ.
ಯೋಗೇಶ್ವರ್ ಒಬ್ಬ ಬಚ್ಚಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಹೌದು, ನಾನು ಬಚ್ಚಾ. ರಾಜಕೀಯವಾಗಿ ನಾನಿನ್ನೂ ಬಚ್ಚಾನೇ. ಆದ್ರೆ ಕುಮಾರಸ್ವಾಮಿ ರಾಮನಗರಕ್ಕೆ ಬಂದಾಗ ಕೂಡ ಬಚ್ಚಾನೇ ಆಗಿದ್ದರು ಅಂತಾ ಹೇಳಿದ್ದಾರೆ.
ಇನ್ನು ನನಗೆ ನನ್ನ ಪಾರ್ಟಿಗೆ ಸಿದ್ದಾಂತವಿದೆ. ಆದ್ರೆ ಕುಮಾರಸ್ವಾಮಿಗೆ ಯಾವುದೇ ಸಿದ್ದಾಂತ ವಿಲ್ಲ. ಯಾರ ಜೊತೆಯಾದ್ರೂ, ಯಾವ ಪಾರ್ಟಿಗೆ ಬೇಕಾದ್ರೂ ಅಡ್ಜಸ್ಟ್ ಆಗ್ತಾರೆ. ಇದೇ ಕಾರಣಕ್ಕೆ ನಾನು ಅವರೊಬ್ಬ ಜೋಕರ್ ಎಂದಿದ್ದು ಅಂತಾ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ನಾನು ಕುಮಾರಸ್ವಾಮಿನ ಹತ್ತಿರದಿಂದ ಗಮನಿಸಿದ್ದೇನೆ. ಅವರು ಅಧಿಕಾರ ಇದ್ದಾಗ ಅವರೊಬ್ಬ ಸ್ವಾರ್ಥರಾಜಕಾರಣಿ. ಮತದಾರರನ್ನ ಅವರು ಜೀತದಾಳುಗಳಂತೆ ಬಳಸಿಕೊಳ್ತಾರೆ.
ಕುಮಾರಸ್ವಾಮಿ ಕೂಡ ಇಸ್ಪೀಟ್ ಆಡುತ್ತಾರೆ. ಸಿಂಗಾಪುರ, ಮಲೇಶಿಯಾದಲ್ಲಿ ಕುಮಾರಸ್ವಾಮಿ ಇಸ್ಪೀಟ್ ಆಡೋ ಫೋಟೋಗಳು ನನ್ನ ಹತ್ರ ಇದೆ. ಅವಶ್ಯಕತೆ ಬಂದಾಗ ಆ ಫೋಟೋ ಬಿಡುಗಡೆ ಮಾಡ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
