ಸಿಪಿಐ ಲಂಚ ಪಡೆದ ವಿಡಿಯೋ ವೈರಲ್ Saaksha Tv
ಬೀದರ್: ಬೀದರನ ಭಾಲ್ಕಿ ನಗರ ಪೊಲೀಸ್ ಠಾಣೆಯ ಸಿಪಿಐ ಪಿ.ಆರ್.ರಾಘವೇಂದ್ರ ಲಂಚ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಕೆಲ ತಿಂಗಳ ಹಿಂದೆ ಇಲ್ಲಿನ ನಗರ ಪೊಲೀಸ್ ಠಾಣೆಗೆ ಸಿಪಿಐ ಆಗಿ ನೇಮಕಗೊಂಡಿರುವ ಪಿ.ಆರ್.ರಾಘವೇಂದ್ರ ಮೊದಲನಿಂದಲೂ ಜನರಿಗೆ ಕಿರುಕುಳ ನೀಡುವುದು, ಸಣ್ಣಪುಟ್ಟ ವಿಷಯಗಳಿಗೆ ಜನರಿಗೆ ತೊಂದರೆ ಕೊಡುವುದು ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಹಣದ ಬೇಡಿಕೆ ಈಡುತ್ತಿದ್ದರು. ಇವರ ಮೇಲೆ ಮೊದಲಿನಿಂದಲೂ ಲಂಚದ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಜನರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಸಾಕಷ್ಟು ಸಾರಿ ಕರೆಸಿ ಎಚ್ಚರಿಕೆ ನೀಡಿದ್ದೆ. ನಿಮ್ಮ ನಡುವಳಿಕೆಯಲ್ಲಿ ಸುಧಾರಣೆ ತಂದುಕೊಳ್ಳಿ ಅಂತ ಬುದ್ದಿ ಹೇಳಿದ್ದೆ. ಆದರೂ ಅವರು ಸುಧಾರಣೆಯಾಗಲ್ಲಿ, ಇಂತಹ ವ್ಯಕ್ತಿಗಳಿಂದ ಜನರ ರಕ್ಷಣೆ ಹೇಗೆ ಸಾಧ್ಯವಾಗುತ್ತದೆ. ಕಾನೂನು ಸುವ್ಯವಸ್ತೆ ಕಾಪಾಡಬೇಕಾದವರೇ ಹಾಳು ಮಾಡುತ್ತಿದ್ದಾರೆ. ಹೀಗಾದರೆ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಅಂತ ಹೇಳಿದರು.
ವ್ಯಕ್ತಿಯೊಬ್ಬರಿಂದ ಸಿಪಿಐ ಅವರು ಸಮವಸ್ತ್ರದಲ್ಲೇ ಲಂಚ ಪಡೆದುಕೊಳ್ಳುವುದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಅವಮಾನದ ಸಂಗತಿ. ಹೀಗಾದರೆ ಕಾನೂನು ಸುವ್ಯವಸ್ತೆ ಕಾಪಾಡುವುದು ಹೇಗೆ? ಕೂಡಲೇ ಮೇಲಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಇನ್ನೂ ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮಧ್ಯೆ ಇಂತಹ ಅಧಿಕಾರಿಗಳು ಇಲಾಖೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.