2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಗೆಲುವಿನ ಓಟದಲ್ಲಿ ಮುಂದುವರಿಯುತ್ತಿದೆ. ಟೂರ್ನಿಯ 21ನೇ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ 19 ರನ್ ಗಳಿಂದ ಜಮೈಕಾ ತಲೈವಾಸ್ ತಂಡವನ್ನು ಪರಾಭವಗೊಳಿಸಿದೆ. ಇದ್ರೊಂದಿಗೆ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಆಡಿರುವ ಏಳು ಪಂದ್ಯಗಳಲ್ಲಿ ಜಯ ಸಾಧಿಸಿರುವ ನೈಟ್ ರೈಡರ್ಸ್ ತಂಡ ಒಟ್ಟು 14 ಅಂಕಗಳನ್ನು ಪಡೆದುಕೊಂಡಿದೆ. ಹಾಗೇ ಜಮೈಕಾ ತಲೈವಾಸ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಟ್ರಿನಿಡಾಡ್ನ ಬ್ರಿಯಾನ್ ಲಾರ ಮೈದಾನದಲ್ಲಿ ಟಾಸ್ ಗೆದ್ದ ಜಮೈಕಾ ತಲೈವಾಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ನೈಟ್ ರೈಡರ್ಸ್ ತಂಡದ ಪರ ಕಾಲಿನ್ ಮುನ್ರೋ 65 ರನ್ ದಾಖಲಿಸಿದ್ರೆ, ಸಿಮೋನ್ಸ್ 25 ರನ್, ಪೊಲಾರ್ಡ್ ಅಜೇಯ 33 ರನ್ ಹಾಗೂ ಸುನೀಲ್ ನರೇನ್ ಬಿರುಸಿನ 25 ರನ್ ಸಿಡಿಸಿದ್ರು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಜಮೈಕಾ ತಲೈವಾಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆನಂತರ ಫಿಲಿಫ್ಟ್ ಸಮಯೋಚಿತ ಆಟ ಮತ್ತು ಆಂಡ್ರೆ ರಸೇಲ್ ಮತ್ತು ಬ್ರಾತ್ ವೇಟ್ ಅವರ ಅಬ್ಬರ ಬ್ಯಾಟಿಂಗ್ ನಿಂದ ಜಮೈಕಾ ತಂಡ ಗೆಲುವಿನ ಹಾದಿ ಹಿಡಿದಿತ್ತು. ಆದ್ರೆ ನೈಟ್ ರೈಡರ್ಸ್ ತಂಡದ ಶಿಸ್ತು ಬದ್ಧ ಬೌಲಿಂಗ್ ಮುಂದೆ ಅಂತಿಮವಾಗಿ ಜಮೈಕಾ ತಲೈವಾಸ್ 6 ವಿಕೆಟ್ಗೆ 165 ರನ್ ಗಳಿಸಲಷ್ಟೇ ಶಕ್ತವಾಯ್ತು. ಬಿರುಸಿನ ಆಟವನ್ನಾಡಿದ್ದ ಕಾಲಿನ್ ಮುನ್ರೋ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.