ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports CPL 2020

ಸಿಪಿಎಲ್ 2020- ಸಿಮೋನ್ಸ್ ಭರ್ಜರಿ ಆಟ… ಟ್ರಿಂಬಾಗೋ ನೈಟ್ ರೈಡರ್ಸ್ ತಂಡಕ್ಕೆ ಸತತ ಎಂಟನೇ ಜಯ

admin by admin
September 3, 2020
in CPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸಿಪಿಎಲ್ 2020- ಸಿಮೋನ್ಸ್ ಭರ್ಜರಿ ಆಟ… ಟ್ರಿಂಬಾಗೋ  ನೈಟ್ ರೈಡರ್ಸ್ ತಂಡಕ್ಕೆ ಸತತ ಎಂಟನೇ ಜಯ

2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಸೋಲಿಲ್ಲದ ಸರದಾರನಂತೆ ಮರೆದಾಡುತ್ತಿದೆ. ಟೂರ್ನಿಯ 23ನೇ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡ 59 ರನ್ ಗಳಿಂದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೆಟ್ರಿಯೋಟ್ಸ್ ತಂಡವನ್ನು ಪರಾಭವಗೊಳಿಸಿದೆ. ಈ ಗೆಲುವಿನೊಂದಿಗೆ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಸತತ ಎಂಟು ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿದೆ. ಸೇಂಟ್ ಕಿಟ್ಸ್ ತಂಡ ಎಂಟು ಪಂದ್ಯಗಳಲ್ಲಿ ಏಳನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ಟಾಸ್ ಸೋತ ಟ್ರಿಂಬಾಗೋ ನೈಟ್ ರೈಡರ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಆರಂಭಿಕ ಲೆಂಡ್ಲ್ ಸಿಮೋನ್ಸ್ ಅವರ ಮನಮೋಹಕ 96 ರನ್ ಗಳ ಸಹಾಯದಿಂದ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ದಾಖಲಿಸಿತ್ತು. ಸಿಮೋನ್ಸ್ ಅವರಿಗೆ ಡರೇನ್ ಬ್ರೇವೋ ಅವರು ಅತ್ಯುತ್ತಮ ಸಾಥ್ ನೀಡಿದ್ರು. ಅಲ್ಲದೆ ಆಕರ್ಷಕ 36 ರನ್ ಗಳಿಸಿದ್ರು. ಎರಡನೇ ವಿಕೆಟ್‍ಗೆ 130 ರನ್ ಗಳ ಜೊತೆಯಾಟವನ್ನು ಆಡಿದ್ದರು. ಈ ನಡುವೆ ಕಾಲಿನ್ ಮುನ್ರೋ ಅವರು 9 ರನ್ ಗಳಿಸಿ ರಿಟೈರ್ಟ್ ಹರ್ಟ್ ಆದ್ರು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಸೇಂಟ್ ಕಿಟ್ಸ್ & ನೆವಿಸ್ ಪೆಟ್ರಿಯೋಟ್ಸ್ ತಂಡ ರನ್ ಗಳಿಸಲು ಒದ್ದಾಟ ನಡೆಸಿತ್ತು. ನೈಟ್ ರೈಡರ್ಸ್ ತಂಡದ ಶಿಸ್ತು ಬದ್ಧ ದಾಳಿಗೆ ಮಣಿದ ಸೇಂಟ್ ಕಿಟ್ಸ್ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 115 ರನ್ ಗಳಿಸಷ್ಟೇ ಶಕ್ತವಾಯ್ತು. ಸೇಂಟ್ ಕಿಟ್ಸ್ ತಂಡದ ಪರ ಕ್ರಿಸ್ ಲಿಯಾನ್ 34 ರನ್ ಹಾಗೂ ಜೊಶುವಾ ಡಿಸಿಲ್ವಾ 29 ರನ್ ಗಳಿಸಿ ಕೊಂಚ ಮಟ್ಟಿನ ಪ್ರತಿರೋಧ ಒಡ್ಡಿದರು. ಅಂತಿಮವಾಗಿ ಸೇಂಟ್ ಕಿಟ್ಸ್ ತಂಡ 59 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು. ಶತಕ ವಂಚಿತ ಸಿಮೋನ್ಸ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು.

Related posts

subramanya-swamy-vratam-pooja-vidhi-benefits-kuja-dosha-remedy

Astro- ೧೧ ವಾರಗಳ ಸುಬ್ರಹ್ಮಣ್ಯ ಸ್ವಾಮಿ ಪೂಜಾ ವಿಧಾನ..!

August 12, 2026
ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

August 12, 2026
Tags: #Darren Bravo#Lendl Simmons#saakshatv.com#Trinbago Knight Riders beat St Kitts and Nevis PatriotsCPL 2020St Kitts and Nevis PatriotsTrinbago Knight Riders
ShareTweetSendShare
Join us on:

Related Posts

subramanya-swamy-vratam-pooja-vidhi-benefits-kuja-dosha-remedy

Astro- ೧೧ ವಾರಗಳ ಸುಬ್ರಹ್ಮಣ್ಯ ಸ್ವಾಮಿ ಪೂಜಾ ವಿಧಾನ..!

by admin
August 12, 2026
0

ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ವ್ರತವು ಅತ್ಯಂತ ವೈಭವದಿಂದ ತುಂಬಿರುವ ಮತ್ತು ಭಕ್ತರ ಆಸೆಗಳನ್ನು ಪೂರೈಸುವ ದೈವಿಕ ಸೃಷ್ಟಿ. ಈ ಉಪವಾಸವು ಪರಮಶಿವುನಿಯ ಪುತ್ರ, ಜ್ಞಾನದಾತ ಸುಬ್ರಹ್ಮಣ್ಯ ಸ್ವಾಮಿಯ...

ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

ಸಿಎಂ ಮನೆಗೆ ಹೋಗಿದ್ದು ನನ್ನಿಂದಾದ ದೊಡ್ಡ ತಪ್ಪು!: ನಾನು ಭ್ರಷ್ಟಾಚಾರ ಮಾಡಿದ್ದೇನಾ? ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಹೊರಟ್ಟಿ ಕಣ್ಣೀರು!

by Shwetha
August 12, 2026
0

ವಿಧಾನ ಪರಿಷತ್ ಸಭಾಪತಿ ಹುದ್ದೆಯ ಗೌರವಕ್ಕೆ ಧಕ್ಕೆ ತಂದ ಸರ್ಕಾರದ ನಡೆಗೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ. 1956ರ ನಂತರ ರಾಜ್ಯದ ಇತಿಹಾಸದಲ್ಲೇ ಇಂತಹ...

‘ರಾಹುಲ್ ಗಾಂಧಿ ಚರ್ಚೆಯಿಂದ ಏಕೆ ಓಡಿಹೋಗುತ್ತಿದ್ದಾರೆ?’: ಕಿರಣ್ ರಿಜಿಜು

‘ರಾಹುಲ್ ಗಾಂಧಿ ಚರ್ಚೆಯಿಂದ ಏಕೆ ಓಡಿಹೋಗುತ್ತಿದ್ದಾರೆ?’: ಕಿರಣ್ ರಿಜಿಜು

by Shwetha
August 12, 2026
0

ಸಂಸತ್ತಿನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಪೊಲೀಸ್ ಕ್ರಮದ ಕುರಿತ ಚರ್ಚೆಯ ನಡುವೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್...

2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ರಾಮಲಿಂಗಾರೆಡ್ಡಿ

2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ರಾಮಲಿಂಗಾರೆಡ್ಡಿ

by Shwetha
August 12, 2026
0

2027ರ ವೇಳೆಗೆ ಎತ್ತಿನಹೊಳೆ ಯೋಜನೆಯ ನೀರು ಕೋಲಾರ ಜಿಲ್ಲೆಗೆ ಹರಿಯಲಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ...

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

ರಾಹುಲ್ ಗಾಂಧಿ ಓಡಬೇಡಿ, ತಾಕತ್ತಿದ್ದರೆ ಬಂದು ಚರ್ಚೆ ಮಾಡಿ! ವಿಪಕ್ಷ ನಾಯಕನ ವಿರುದ್ಧ ಕಿಡಿಖಾರಿದ ಸಂಸದೆ ಕಂಗನಾ ರಣಾವತ್!

by Shwetha
August 12, 2026
0

ಹೊಸ ದೆಹಲಿ: ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರತಿದಿನವೂ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಬಾಲಿವುಡ್ ನಟಿ ಹಾಗೂ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram