ದೀಪಾವಳಿ : ಪಟಾಕಿಂದ 13 ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿ
ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿ ಮಕ್ಕಳಿಗೆ ಪಟಾಕಿ ಹೊಡೆಯುವುದು ಅಂದ್ರೆ ಸಖತ್ ಖುಷಿ.. ಮಕ್ಕಳಿಗೆ ಪಟಾಕಿ ಇಲ್ಲದೇ ದೀಪಾವಳಿ ಅಂತಲೇ ಅನ್ನಿಸೋದಿಲ್ಲ. ಮಕ್ಕಳೆಲ್ಲಾ ಸೇರಿ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಆದ್ರೆ ಪ್ರತಿ ವರ್ಷ ಪಟಾಕಿಯಿಂದಲೇ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ. ಅನೇಕರು ಪಟಾಕಿಯಿಂದ ಕಣ್ಗಳಿಗೆ ಹಾನಿ ಮಾಡಿಕೊಂಡಿದ್ರೆ ಕೆಲವರು ಸಾವನಪ್ಪಿದ್ದಾರೆ. ಇನ್ನೂ ಹಲವರಿಗೆ ನಾನಾ ರೀತಿ ಗಾಯಗಳಾಗಿರೋ ಉದಾಹರಣಗಳಿವೆ.
ಅಂತೆಯೇ ಈ ಬಾರಿಯೂ ಕೂಡ ಬೆಂಗಳೂರಿನಲ್ಲಿ ಪಟಾಕಿಯಿಂದ ಸುಮಾರು 13ಕ್ಕೂ ಹೆಚ್ಚು ಜನರ ಕಣ್ಣಿಗೆ ಗಾಯವಾಗಿದೆ. ಪಟಾಕಿ ಸಿಡಿಸಲು ಹೋಗಿ 8 ಮಕ್ಕಳು ಸೇರಿ 13ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ನಾಗರಬಾವಿಯ 6 ವರ್ಷದ ಬಾಲಕ, ಚಾಮರಾಜಪೇಟೆಯ 7 ವರ್ಷದ ಬಾಲಕ, ಕನಕಪುರದ 9 ವರ್ಷದ ಬಾಲಕ, ರಾಮನಗರದ 11 ವರ್ಷದ ಬಾಲಕ ಸೇರಿ 10 ಮಕ್ಕಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ, ಬಾಲಕಿ ಸೇರಿ ಮೂವರು ನಾರಾಯಣ ನೇತ್ರಾಲಯದಲ್ಲಿ ಕಣ್ಣಿನ ಚಿಕಿತ್ಸೆ ಪಡೆಯುತ್ತಿದ್ದಾರೆ.