ಮೆಟ್ರೋ ಪಿಲ್ಲರ್ ಹಾಗೂ ಬೀಮ್ ಗಳಲ್ಲಿ ಬಿರುಕು ಉಂಟಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾದರೆ ಈ ಸಮಸ್ಯೆ BMRCL ಗೆ ತಲೆನೋವಾಗಿಬಿಟ್ಟಿದೆ. ಕೆಂಗೇರಿ – ಚಲ್ಲಘಟ್ಟ ಮಾರ್ಗ, ಆರ್ ಆರ್ ಹಾಸ್ಪಿಟಲ್ , ಎಲೆಕ್ಟ್ರಾನಿಕ್ ಸಿಟಿ, ಲೈನ್ ಗಳ ಮೆಟ್ರೊ ಬೀಮ್ ಗಳಲ್ಲಿ ಬಿರುಕು ಉಂಟಾಗಿದೆ. ಇನ್ನೂ ಬಿರುಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ BMRCL ಈ ಕುರಿತಾದ ತಾಂತ್ರಿಕ ವರದಿಯನ್ನು ಕೇಳಿದೆ. ಈ ಬಗ್ಗೆ ಮಾತನಾಡಿರುವ ಮೆಟ್ರೋ ಎಕ್ಸ್ ಫರ್ಟ್ ಶ್ರೀಹರಿ ಕೆಲ ಬೀಮ್ ಗಳನ್ನ ರಿಪ್ಲೇಸ್ಮೆಂಟ್ ಮಾಡಿ, ರಿಪೇರಿ ಮಾಡಲಾಗಿದೆ. ಈಗಾಗಲೇ ಮೂರು ಕಡೆಗಳಲ್ಲಿ ರಿಪ್ಲೇಸ್ಮೆಂಟ್ ಮಾಡಲಾಗಿದ್ದು, ಟೆಕ್ನಿಕಲ್ ಎಕ್ಸ್ ಪರ್ಟ್ ತಂಡದಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.