ಎಲ್ಲದಕ್ಕೂ Virat ಕಾರಣ… ಹಾಡಿ ಹೊಗಳಿದ ರೋಹಿತ್
ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಡಿ ಹೊಗಳಿದ್ದಾರೆ.
ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಆಡುತ್ತಿರುವ ಕೊಹ್ಲಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ವಹಿಸಿಕೊಳ್ಳುವ ವೇಳೆಗೆ ಟೀಂ ಇಂಡಿಯಾ ಏಳನೇ ಸ್ಥಾನದಲ್ಲಿತ್ತು. ಕೊಹ್ಲಿ ನಾಯಕರಾದ ಮೇಲೆ ಸತತ ಐದು ವರ್ಷಗಳ ಕಾಲ ಟೆಸ್ಟ್ ಶ್ರೇಯಾಂಕದಲ್ಲಿ ತಂಡ ಅಗ್ರಸ್ಥಾನದಲ್ಲಿತ್ತು.
ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ಆಟಗಾರರಾಗಿದ್ದು, ಅಂತಹ ಆಟಗಾರರಿಗಾಗಿ 100ನೇ ಟೆಸ್ಟ್ ಪಂದ್ಯವನ್ನು ಇನ್ನಷ್ಟು ವಿಶೇಷವಾಗಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.
ಕೊಹ್ಲಿ ಟೆಸ್ಟ್ ನಾಯಕನಾಗಿ ಸ್ಮರಣೀಯ ಯಶಸ್ಸನ್ನು ಸಾಧಿಸಿದ್ದಾರೆ. ಅವರ ನಾಯಕತ್ವದಲ್ಲಿ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಬಹಳ ವಿಶೇಷವಾಗಿದೆ.
ಜೊತೆಗೆ 2013 ರಲ್ಲಿ ದಕ್ಷಿಣ ಆಫ್ರಿಕಾದ ಬೌನ್ಸಿ ಪಿಚ್ನಲ್ಲಿ ಕೊಹ್ಲಿ ಅವರ ಕ್ಲಾಸಿ ಟೆಸ್ಟ್ ಶತಕಗಳು ನನ್ನ ಫೇವರೇಟ್ ಎಂದಿದ್ದಾರೆ ರೋಹಿತ್.
ಇನ್ನು ಟೀಂ ಇಂಡಿಯಾ ಸಾಧಿಸಿದ ಯಶಸ್ಸು ಮತ್ತು ಮುಂದೆ ಸಾಧಿಸುವ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Credit goes to Virat Kohli for India’s Test success