ಹೊಸದಿಲ್ಲಿ, ಮೇ 13 : ನವದೆಹಲಿಯ ಸಿ.ಆರ್.ಪಿ.ಎಫ್ ಕೇಂದ್ರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ, ಸೋಂಕಿಗೆ ತುತ್ತಾಗಿದ್ದವರಲ್ಲಿ ಯೋಧ ಸತ್ಯಬೀರ್ ಸಿಂಗ್ ಕೂಡ ಒಬ್ಬರು. 31 ನೇ ಬೆಟಾಲಿಯನ್ನಲ್ಲಿ ರೇಡಿಯೋ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಬೀರ್ ಸಿಂಗ್ ಬೇಗನೇ ಸೋಂಕಿನಿಂದ ಗುಣಮುಖರಾಗಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗಿರುವ ಸತ್ಯಬೀರ್ ಸಿಂಗ್ ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ್ದು, ‘ನನಗೆ ಕೊರೋನಾ ಸೋಂಕು ದೃಢಪಟ್ಟಾಗ ನಾನು ಧೃತಿಗೆಡಲಿಲ್ಲ. ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ವರ್ಗಾವಣೆ ಮಾಡಿದ ಹಾಗೆ ಇದೂ ಒಂದು ಹೊಸ ಪೋಸ್ಟಿಂಗ್ ನ ಆದೇಶ ಎಂದು ಭಾವಿಸಿದೆ. ಸೋಂಕಿಗೆ ಒಳಗಾದಾಗ ಧೃತಿಗೆಟ್ಟಷ್ಟು ಅದು ಮತ್ತಷ್ಟು ವ್ಯಾಪಿಸುತ್ತದೆ. ಆದರೆ ನಾನು ಕೊರೋನಾ ಸೋಂಕಿನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಈ ಸೋಂಕನ್ನು ಯಾರೂ ಬೇಕಾದರೂ ಗೆಲ್ಲಬಹುದು’ ಎಂದು ಹೇಳಿದರು
ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್
ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...








