ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಕಿರಿಯ ಆಟಗಾರನೊಬ್ಬ ತನ್ನ ಅದ್ಭುತ ಬ್ಯಾಟಿಂಗ್‌ನಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ನಡೆಸಿರುವ 2023-24ರ ಆವೃತ್ತಿಯ ವಿವಿಧ ಪಂದ್ಯಾವಳಿಗಳಲ್ಲಿ 1400 ರನ್‌ಗಳನ್ನ ಕಲೆಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರು ಮೂಲದ 13 ವರ್ಷದ ಕಿರಿಯ ಕ್ರಿಕೆಟರ್ ನಿತೀಶ್ ಆರ್ಯ, ಸದ್ಯ ಕರ್ನಾಟಕ ಕ್ರಿಕೆಟ್ ವಲಯದ ಸೆನ್ಸೇಷನ್ ಆಗಿದ್ದಾರೆ. ಬಲಗೈ ಆರಂಭಿಕ ಬ್ಯಾಟರ್ ಆಗಿರುವ ನಿತೀನ್ ಆರ್ಯ, ರಾಜಾಜಿನಗರ ಕ್ರಿಕೆಟರ್ಸ್ ಮತ್ತು ತಾನು ವ್ಯಾಸಂಗ ಮಾಡುತ್ತಿರುವ ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್(ಬಸವೇಶ್ವರನಗರ) ಪರವಾಗಿ ಆಡುತ್ತಿದ್ದಾರೆ. ಸದ್ಯ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ನಿತೀನ್, 3 ವರ್ಷ ವಯಸ್ಸಿನಲ್ಲಿ ಇದ್ದಾಗಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು.
ಸದ್ಯ ಕೆಎಸ್‌ಸಿಎ ಆಯೋಜಿಸಿರುವ 16 ವರ್ಷದೊಳಗಿನ KSCA ಕಪ್ ಪಂದ್ಯಾವಳಿಯಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದ ನಿತೀನ್ ಆರ್ಯ, 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್‌ಗಳಿಸಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಎನಿಸಿದರು. ತಮ್ಮ ಈ ಶ್ರೇಷ್ಠ ಬ್ಯಾಟಿಂಗ್‌ನಿಂದ ಅಂಡರ್-16 ಟೂರ್ನಿಯ ಬ್ಯಾಟರ್‌ಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದು ಮಿಂಚಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಅಷ್ಟೇ ಅಲ್ಲದೇ, ಕೆಎಸ್‌ಸಿಎ ನಡೆಸುತ್ತಿರುವ 14 ವರ್ಷದೊಳಗಿನವರ ಟೂರ್ನಿಗಳಲ್ಲೂ ಸಹ ನಿತೀನ್ ಆರ್ಯ, ಸತತವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ನಿತೀಶ್ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈವರೆಗೆ, ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ನಿತೀನ್ ಆರ್ಯ ಅವರಲ್ಲಿ ಟ್ಯಾಲೆಂಟ್ ಗಮನಿಸಿದ ರಾಜಾಜಿನಗರ ಕ್ರಿಕೆಟರ್ಸ್ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್‌ನ (ಕೆಪಿಎಲ್) ಶಿವಮೊಗ್ಗ ಲಯನ್ಸ್ ತಂಡದ ಮಾಲೀಕ ಆರ್.ಕುಮಾರ್ ಅವರು ಕಿರಿಯ ಆಟಗಾರ ನಿತೀಶ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ನಿತೀಶ್ ಆರ್ಯ, ರಾಜಾಜಿನಗರ ಕ್ರಿಕೆಟಿಗರ ತರಬೇತುದಾರ ಎನ್‌ಪಿ ವಿನಯ್ ಕುಮಾರ್ ಅವರ ಗರಡಿಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಸೆಂಟರ್ ಫಾರ್ ಸ್ಪೋರ್ಟಿಂಗ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾನೆ. ತಮ್ಮ ಆಟಗಾರನ ಟ್ಯಾಲೆಂಟ್ ಬಗ್ಗೆ ಮಾತನಾಡಿರುವ ವಿನಯ್ ಕುಮಾರ್, ನಿತೀಶ್ ಆರ್ಯ, ಡೆಡಿಕೇಟೆಡ್ ಕ್ರಿಕೆಟರ್ ಆಗಿರುವ ನಿತೀಶ್, ಪ್ರತಿನಿತ್ಯ 6 ರಿಂದ 7 ಗಂಟೆಗಳ ಕಾಲ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಬೆಳಗ್ಗೆ 5 ರಿಂದ 7ರವರೆಗೆ ಮತ್ತು ಸಂಜೆ 3 ರಿಂದ ಸಂಜೆ 7 ಗಂಟೆಯವರೆಗೆ ತರಬೇತಿ ನೀಡುತ್ತಾರೆ. ಆತ ಹಲವು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಹೆಚ್ಚಿನ ಸಮಯವನ್ನ ಕಳೆಯಲಿದ್ದು, ತಾಂತ್ರಿಕವಾಗಿ ಆತ ಬಲಿಷ್ಠವಾಗಿದ್ದಾನೆ. ಅಲ್ಲದೇ ಆತ ಬ್ಯಾಕ್‌ಫುಟ್ ಮತ್ತು ಫ್ರಂಟ್‌ಫುಟ್ ಎರಡರಲ್ಲೂ ರನ್‌ಗಳಿಸಬಲ್ಲ ಎನ್ನುತ್ತಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿರುವ ನಿತೀಶ್ ಆರ್ಯ, ಭವಿಷ್ಯದಲ್ಲಿ ಟೀಂ ಇಂಡಿಯಾ ಆಟಗಾರನಾಗಿ ಮೂರು ಫಾರ್ಮ್ಯಾಟ್‌ನಲ್ಲಿ ಮಿಂಚಬೇಕೆಂಬ ಮಿಂಚುವ ಕನಸು ಹೊತ್ತಿದ್ದಾರೆ. 13 ವರ್ಷದ ನಿತೀಶ್ ಕೇವಲ ಕ್ರಿಕೆಟ್‌ನಲ್ಲಿ ಮಾತ್ರವೇ ಯಶಸ್ಸು ಸಾಧಿಸದೆ, ಶೈಕ್ಷಣಿಕವಾಗಿಯೂ ಉತ್ತಮ ಅಂಕಗಳಿಸಿದ್ದಾನೆ. ಕ್ರಿಕೆಟ್‌ನ ಜೊತೆ ಜೊತೆಗೆ ಓದಿನ ಬಗ್ಗೆಯೂ ಆಸಕ್ತಿ ಹೊಂದಿರುವ ನಿತೀಶ್, 80-90% ಅಂಕ ಪಡೆದಿದ್ದಾನೆ ಎನ್ನುತ್ತಾರೆ ಆತನ ಶಾಲಾ ತಂಡದ ಕೋಚ್ ಲಕ್ಷ್ಮಿಕಾಂತ್.
ನಿತೀಶ್ ಆರ್ಯ ಹಿನ್ನೆಲೆ:
ತಂದೆ: ಲೋಕೇಶ್
ಜನನ: 13-09-2010
ಕೋಚ್: ಎನ್.ಪಿ. ವಿನಯ್ ಕುಮಾರ್
ಕ್ಲಬ್: ರಾಜಾಜಿನಗರ್ ಕ್ರಿಕೆಟರ್ಸ್
ಕ್ಲಬ್ ಕಾರ್ಯದರ್ಶಿ: ಕೆಪಿಎಲ್ ಟೂರ್ನಿಯ ಶಿವಮೊಗ್ಗ ಲಯನ್ಸ್ ತಂಡದ ಮಾಲೀಕ ಆರ್.ಕುಮಾರ್
ನಿತೀಶ್ ಆರ್ಯ ಪ್ರದರ್ಶನ – KSCA ಕಪ್‌ನಲ್ಲಿ
ಟಾಪ್ ಸ್ಕೋರರ್ – 565 ರನ್‌ಗಳು (3 ಶತಕ, 3 ಅರ್ಧಶತಕ)
1ನೇ ಡಿವಿಷನ್ ಲೀಗ್‌ನಲ್ಲಿ
ಪಂದ್ಯಗಳು – 4
ಇನ್ನಿಂಗ್ಸ್ – 7
ರನ್‌ಗಳು – 355
50/100 – 1/3
ಸೂಪರ್ ಲೀಗ್‌ನಲ್ಲಿ
ಪಂದ್ಯಗಳು – 3
ಇನ್ನಿಂಗ್ಸ್ – 3
ರನ್‌ಗಳು – 210
50/100 – 2/1
ಕೆಎಸ್‌ಸಿಎ ಇಂಟರ್ ಕ್ಲಬ್ ಪಂದ್ಯಾವಳಿಯಲ್ಲಿ – ಅಂಡರ್-14
ಪಂದ್ಯಗಳು – 4
ಇನ್ನಿಂಗ್ಸ್ – 4
ರನ್‌ಗಳು – 355
ಸರಾಸರಿ – 177.50
50/100 – 1/2
Cricket, Nitish Arya, KSCA tournaments, Banglore,